ಜನ ಮನದ ನಾಡಿ ಮಿಡಿತ

Advertisement

ದೈಹಿಕ ಹಾಗು ಸ್ವಂತ ಸಾಮರ್ಥ್ಯದಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದು ; ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು

ದೈಹಿಕ ಹಾಗು ಸ್ವಂತ ಸಾಮರ್ಥ್ಯದಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ಹೇಳಿದ್ದಾರೆ.

ಇವರು ಸಂಡೇ ಗಾಯ್ಸ್ ಸಂಸ್ಥೆಯು ಸುರತ್ಕಲ್ ವಿಧ್ಯಾದಾಯಿನಿ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಿಗದಿತ ಓವರ್‌ಗಳ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಂಡಲೀಕ ಹೊಸಬೆಟ್ಟು ರವರು ಕ್ರಿಕೆಟ್ ಸಾಧನೆ ಮಾಡಲು ನುರಿತ ತರಬೇತುದಾರರ ಸಹಕಾರದಿಂದ ಕ್ರಿಕೆಟ್ ಪಟುಗಳು ತರಬೇತಿ ಪಡೆದು, ರಾಜ್ಯ, ರಾಷ್ಟ್ರ, ಮಟ್ಟದಲ್ಲಿ ಮಿಂಚಬಹುದು, ಎಂದು ಯುವ ಆಟಗಾರರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.

 

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸತ್ಯಜಿತ್ ಸುರತ್ಕಲ್, ವಿನಯ್ ಆಚಾರ್ಯ ಹೊಸಬೆಟ್ಟು, ಮಹಾಬಲ ಪೂಜಾರಿ ಕಡ0ಬೋಡಿ, ಪ್ರತಿಭಾ ಕುಳಾಯಿ, ಲೋಕೇಶ್ ಕೋಡಿಕೆರೆ, ಸಂಡೇ ಗಯ್ಸ್ ತಂಡದ ಅಧ್ಯಕ್ಷ ಲಲಿತ್ ಪ್ರಸಾದ್, ಉಮೇಶ್ ಕೋಡಿಕಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕಾಂಚನ್ ಹೊಸಬೆಟ್ಟು, ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಕ್ಯಾಪ್ಟನ್ ಲಿಲಾಧರ್ ಕಡ0ಬೋಡಿ, ಜಾಗ್ವಾರ್ ತಂಡದ ಶರತ್ ಮಂಗಳಪೇಟೆ, ಸೌರವ್ ಗುಡ್ಡೆಕೊಪ್ಪಳ, ದಯಾನಂದ ಕೋಡಿಕಲ್, ಸುರೇಂದ್ರ ಕಡ0ಬೋಡಿ, ಅವರನ್ನು ಗೌರವಿಸಲಾಯಿತು. ಸ್ಟ್ರೈಕರ್ ಸುರತ್ಕಲ್ ತಂಡ ಪ್ರಥಮ ಬಹುಮಾನ ಪಡೆದರೆ, ಕರಾವಳಿ ಕಿಂಗ್ಸ್ ಅಗ್ಗದಕಳಿಯ ದ್ವಿತೀಯ ಬಹುಮಾನ ಪಡೆದುಕೊಂಡಿತು. ಕಾರ್ಯಕ್ರಮ ನಿರೂಪಣೆಯನ್ನು ವಿನಯ್ ಉದ್ಯಾವರ ನಿರ್ವಹಿಸಿದರು.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!