ದೈಹಿಕ ಹಾಗು ಸ್ವಂತ ಸಾಮರ್ಥ್ಯದಿಂದ ಕ್ರೀಡೆಯಲ್ಲಿ ಸಾಧನೆ ಮಾಡಬಹುದು ಎಂದು ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು ಹೇಳಿದ್ದಾರೆ.
ಇವರು ಸಂಡೇ ಗಾಯ್ಸ್ ಸಂಸ್ಥೆಯು ಸುರತ್ಕಲ್ ವಿಧ್ಯಾದಾಯಿನಿ ಪ್ರೌಢ ಶಾಲೆಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ನಿಗದಿತ ಓವರ್‌ಗಳ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಂಡಲೀಕ ಹೊಸಬೆಟ್ಟು ರವರು ಕ್ರಿಕೆಟ್ ಸಾಧನೆ ಮಾಡಲು ನುರಿತ ತರಬೇತುದಾರರ ಸಹಕಾರದಿಂದ ಕ್ರಿಕೆಟ್ ಪಟುಗಳು ತರಬೇತಿ ಪಡೆದು, ರಾಜ್ಯ, ರಾಷ್ಟ್ರ, ಮಟ್ಟದಲ್ಲಿ ಮಿಂಚಬಹುದು, ಎಂದು ಯುವ ಆಟಗಾರರಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸತ್ಯಜಿತ್ ಸುರತ್ಕಲ್, ವಿನಯ್ ಆಚಾರ್ಯ ಹೊಸಬೆಟ್ಟು, ಮಹಾಬಲ ಪೂಜಾರಿ ಕಡ0ಬೋಡಿ, ಪ್ರತಿಭಾ ಕುಳಾಯಿ, ಲೋಕೇಶ್ ಕೋಡಿಕೆರೆ, ಸಂಡೇ ಗಯ್ಸ್ ತಂಡದ ಅಧ್ಯಕ್ಷ ಲಲಿತ್ ಪ್ರಸಾದ್, ಉಮೇಶ್ ಕೋಡಿಕಲ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಅಂತಾರಾಷ್ಟ್ರೀಯ ಕ್ರೀಡಾಪಟು ವಿಜಯಕಾಂಚನ್ ಹೊಸಬೆಟ್ಟು, ರಾಷ್ಟ್ರೀಯ ಕ್ರೀಡಾಪಟು ಪುಂಡಲೀಕ ಹೊಸಬೆಟ್ಟು, ಕ್ಯಾಪ್ಟನ್ ಲಿಲಾಧರ್ ಕಡ0ಬೋಡಿ, ಜಾಗ್ವಾರ್ ತಂಡದ ಶರತ್ ಮಂಗಳಪೇಟೆ, ಸೌರವ್ ಗುಡ್ಡೆಕೊಪ್ಪಳ, ದಯಾನಂದ ಕೋಡಿಕಲ್, ಸುರೇಂದ್ರ ಕಡ0ಬೋಡಿ, ಅವರನ್ನು ಗೌರವಿಸಲಾಯಿತು. ಸ್ಟ್ರೈಕರ್ ಸುರತ್ಕಲ್ ತಂಡ ಪ್ರಥಮ ಬಹುಮಾನ ಪಡೆದರೆ, ಕರಾವಳಿ ಕಿಂಗ್ಸ್ ಅಗ್ಗದಕಳಿಯ ದ್ವಿತೀಯ ಬಹುಮಾನ ಪಡೆದುಕೊಂಡಿತು. ಕಾರ್ಯಕ್ರಮ ನಿರೂಪಣೆಯನ್ನು ವಿನಯ್ ಉದ್ಯಾವರ ನಿರ್ವಹಿಸಿದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…