ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಸವಾಲು ಹಾಕಿದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಅವರ ನಡೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು ಹಿಂದೂ ಸಮಾಜ ಮೌನವಾಗಿದೆ , ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ರೆ ಅದೂ ನಿಮ್ಮ ಮೂರ್ಖತನ.
ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಹೊರಟರೆ ಏನಾಗಬಹುದೂ ಎಂದೂ ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದಿದ್ದಾರೆ. ಮತೀಯವಾದಿ ದೇಶದ್ರೋಹಿ ಸಂಘಟನೆಗಳ ಬೆಂಬಲದಿಂದ ಜನಪ್ರತಿನಿಧಿಯಾಗಿ ಇದ್ದುಕೊಂಡು ದೇಶದ್ರೋಹಿ ಸಂಘಟನೆಗಳ ಋಣ ಸಂದಾಯ ಮಾಡಲು ಈ ರೀತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಿಗೆ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧ. ಪೋಲಿಸ್ ಇಲಾಖೆ ಇಂಥವರ ಹಾಗೂ ಇವರನ್ನು ಪ್ರೇರೆಪಿಸುವವರ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಇಂತವರಿಂದ ಸಮಾಜವನ್ನು ರಕ್ಷಿಸಬೇಕು. ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…