ಕರಾವಳಿ

ಬೆಳ್ತಂಗಡಿಯ ಕುತ್ಲೂರು ಗ್ರಾಮಕ್ಕೆ “ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ” ರಾಷ್ಟ್ರ ಪ್ರಶಸ್ತಿ…!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮ ನಕ್ಸಲ್ ಚಟುವಟಿಕೆಗಳಿಂದ ಸುದ್ದಿಯಾಗಿದ್ದ ಊರು. ಇದೀಗ ಆ ಹಣೆಪಟ್ಟಿ ಕಳಚಿಕೊಂಡಿದ್ದು, ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂಲಕ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿಗೆ ಪಾತ್ರವಾದ ಕರ್ನಾಟಕದ ಏಕೈಕ ಗ್ರಾಮವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶದ ಗ್ರಾಮಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಸ್ವಾವಲಂಬನೆಯ ಒಲವು ಹೆಚ್ಚಿಸುವುದಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು ಕಳೆದ ವರ್ಷ ‘ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೀಷನ್’ ಆರಂಭಿಸಿತ್ತು. ಇದರ ಅಡಿಯಲ್ಲಿ ಪ್ರತಿ ಕೆಟಗರಿಯಿಂದ ಅತ್ಯುತ್ತಮ ಐದು ಗ್ರಾಮೀಣ ಪ್ರವಾಸೋದ್ಯಮ ಗ್ರಾಮಗಳನ್ನು ಗುರುತಿಸಲಾಗುತ್ತದೆ.

ಹಿಂದೊಮ್ಮೆ ನಕ್ಸಲ್ ಚಟುವಟಿಕೆ ಪೀಡಿತ ಪ್ರದೇಶ ಎಂದೇ ಗುರುತಿಸಿಕೊಂಡಿದ್ದ ಕುತ್ಲೂರು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಆದರೆ, ಬೇರೆಯೇ ಕಾರಣಕ್ಕೆ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಈ ಗ್ರಾಮಕ್ಕೆ ಈಗ ರಾಷ್ಟ್ರೀಯ ಸಾಹಸ ಪ್ರವಾಸೋದ್ಯಮ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಭಾಜನವಾದ ಕರ್ನಾಟಕದ ಏಕೈಕ ಗ್ರಾಮವಾಗಿಯೂ ಕುತ್ಲೂರು ಗುರುತಿಸಿಕೊಂಡಿದೆ.

ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋಧ್ಯಮ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಹೊಂದುತ್ತಿರುವ ಗ್ರಾಮಗಳನ್ನು ಗುರುತಿಸುವ ಸಂಬಂಧ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಬೆಸ್ಟ್ ಟೂರಿಸಂ ವಿಲೇಜ್ ಕಾಂಪಿಟೇಶನ್ -2024 ಅನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ನಾರಾವಿ ಗ್ರಾ.ಪಂ. ವ್ಯಾಪ್ತಿಯ ಕುತ್ಲೂರು ನಿವಾಸಿಗಳಾದ ಹರೀಶ್ ಡಿ. ಸಾಲ್ಯಾನ್ ಹಾಗೂ ಶಿವರಾಜ್ ಮತ್ತು ಸಂದೀಪ್ ಪೂಜಾರಿ ನಾರಾವಿ ಇವರು ಕುತ್ಲೂರು ಗ್ರಾಮದ ಪ್ರವಾಸಿ ತಾಣಗಳು, ಪರಿಸರ ಹಾಗೂ ಪ್ರಕೃತಿಯ ಸೊಬಗಿನ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿ ಇದನ್ನು ಸ್ಪರ್ಧಾ ನಿಯಮದಂತೆ ಆನ್‌ಲೈನ್‌ನಲ್ಲಿ ಆಪ್‌ಲೋಡ್ ಮಾಡಿದ್ದರು. ಇದರ ಬಗ್ಗೆ ಹಲವು ಸುತ್ತುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಯನ್ನು ಪ್ರವಾಸೋದ್ಯಮ ಮಂತ್ರಾಲಯ ಪಡೆದುಕೊಂಡಿತ್ತು. ದೇಶಾದ್ಯಂತ ನಡೆದ ʼಅತ್ಯುತ್ತಮ ಪ್ರವಾಸಿ ಹಳ್ಳಿಗಳು’ ಸ್ಪರ್ಧೆಯಲ್ಲಿ ಕುತ್ತೂರು ಗ್ರಾಮ ಆಯ್ಕೆಯಾಗಿದೆ.

 

ಸೆ.27 ರಂದು ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ. ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ, ಪ್ರವಾಸೋದ್ಯಮ ಇಲಾಖೆಯ ಸಚಿವರು ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಾಕ್ಯುಮೆಂಟರಿ ಮಾಡಿದ್ದ ಹರೀಶ್ ಡಿ. ಸಾಲ್ಯಾನ್ ಮತ್ತು ಶಿವರಾಜ್ ಅಂಚನ್‌ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

 

 

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…

2 hours ago

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…

2 hours ago

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…

22 hours ago

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಮಚ್ಚಿನ ಗ್ರಾಮ ಪಾಳ್ಯರ ಎಂಬಲ್ಲಿ ಪಿಕಪ್ ವಾಹನ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಚಿಕಿತ್ಸೆ…

22 hours ago

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ…

23 hours ago

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕೋಟೇಶ್ವರ ಹಾಲಾಡಿ…

23 hours ago