ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ ಟಿಕ್‌ಟಾಕ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದವರು. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ. ಅಬ್ಬಬ್ಬಾ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ ಪ್ರಜ್ಞಾ ಆಚಾರ್ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ತನ್ನ ಅಜ್ಜಿ ಕಮಲಜ್ಜಿ ಯ ಜೊತೆಗೆ ತಮ್ಮಇಡೀ ಫ್ಯಾಮಿಲಿಯನ್ನು ಜಾಗೃತಿ ವಿಡಿಯೋಗಳಿಗೆ ಬಳಸಿ ಇವರ ಕುಟುಂಬ ಕಮಲಜ್ಜಿ ಫ್ಯಾಮಿಲಿ ಎನ್ನಿಸಿಕೊಂಡಿತ್ತು. ಈ ಎಲ್ಲದರ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ. ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ ಟಿಕ್‌ಟಾಕ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದವರು. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ. ಅಬ್ಬಬ್ಬಾ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ ಪ್ರಜ್ಞಾ ಆಚಾರ್ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ತನ್ನ ಅಜ್ಜಿ ಕಮಲಜ್ಜಿ ಯ ಜೊತೆಗೆ ತಮ್ಮಇಡೀ ಫ್ಯಾಮಿಲಿಯನ್ನು ಜಾಗೃತಿ ವಿಡಿಯೋಗಳಿಗೆ ಬಳಸಿ ಇವರ ಕುಟುಂಬ ಕಮಲಜ್ಜಿ ಫ್ಯಾಮಿಲಿ ಎನ್ನಿಸಿಕೊಂಡಿತ್ತು. ಈ ಎಲ್ಲದರ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ.