ಮುಲ್ಕಿ: ಜಲ ಸಂರಕ್ಷಣೆ ಮಾಡದಿದ್ದರೇ ಮುಂದಿನ ದಿನಗಳಲ್ಲಿ ಪರಿತಪಿಸಬೇಕಾಗುತ್ತದೆ. ಈಗಾಗಲೇ ಭೂಮಿಯ ಅಡಿಯ ಭಾಗದಲ್ಲಿ ನೀರಿನ ಮಟ್ಟ ಕುಸಿದಿದೆ. ಮಳೆಯ ನೀರನ್ನು ಶೇಖರಿಸಿ ಇಂಗಿಸಿ ಮರು ಬಳಕೆ ಮಾಡಬೇಕೆಂದು ಮಂಗಳೂರಿನ ಇಂಜಿನಿಯರ್ ಹಾಗೂ ಜಲ ಸಂರಕ್ಷಣೆಯ ತಜ್ಞ ಅಶೋಕ್ ಕುಮಾರ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಜಪೆ, ೧೦ನೇ ತೋಕೂರು ಮತ್ತು ಬೆಳ್ಳಾಯರು ಒಕ್ಕೂಟ, ಪಡುಪಣಂಬೂರು,ಪಡುಪಣಂಬೂರಿನ ಮುಲ್ಕಿ ಅರಮನೆ ವೆಲ್ಪೇರ್ ಚಾರಿಟೇಬಲ್ ಟ್ರಸ್ಟ್ (ರಿ), ರಾಜ್ಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ತೋಕೂರಿನ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್ (ರಿ) ತೋಕೂರು, ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಮಂಗಳೂರು ನ ಸಂಯುಕ್ತ ಆಶ್ರಯದಲ್ಲಿ ಜರಗಿದ ಜಲ ಸಂರಕ್ಷಣೆ ಮತ್ತು ಜೇನುಹುಳ ಸಾಕಾಣಿಕೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನೆಯ ಚಾವಡಿಯ ನೀರನ್ನು ಬಾವಿಗಳಲ್ಲಿ ಸೋಸಿ ಇಂಗಿಸಿಬೇಕಾಗಿದೆ ಇದರಿಂದ ನೀರಿನ ಮಟ್ಟ ಎರಿಕೆಯಾಗುತ್ತದೆ. ಚಕ್ ಡ್ಯಾಮ್ ಇಂಗು ಗುಂಡಿಯ ಮೂಲಕವು ನೀರನ್ನು ಭೂಮಿಗೆ ಇಂಗಿಸಬೇಕೆಂದು ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅದಿಕಾರಿ ಐತಪ್ಪ ಪೂಜಾರಿ ಮಾತನಾಡಿ ಪ್ರತಿ ಮನೆಯಲ್ಲೂ ಜೇನು ಸಾಕಾಣಿಕೆ ಮಾಡುವ ಅವಕಾಶ ವಿದ್ದು ಅದರಿಂದ ಲಾಭ ಗಳಿಸಬಹುದು ಜೇನು ಸಾಕಾಣಿಕೆ ತೋಟಗಾರಿಕೆ ಮತ್ತು ಕೃಷಿಗೆ ಪೂರಕವಾಗಿದೆ. ತರಕಾರಿ ಬೆಳೆ ಬೆಳಯುವಾಗ ಜೇನು ಹುಳಗಳು ಇದ್ದರೆ ಪರಾಗಸ್ಪರ್ಷದ ಮೂಲಕ ಕಾಯಿ ಕಟ್ಟುವಿಕೆ ಅದಿಕ ಇಳುವರಿ ಪಡೆಯಲು ಸಾಧ್ಯವೆಂದು ಹೇಳಿದರು. ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆಯ ತೋಟಗಾರಿಕಾ ಅದಿಕಾರಿ ಯುಗೇಂದ್ರ ತೋಟಗಾರಿಕೆ ಇಲಾಖೆಯ ಮೂಲಕ ಸಿಗುವ ಮಾಹಿತಿ ನೀಡಿದರು.
ಸೋಟ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಸುವರ್ಣ ಅಧ್ಯಕ್ಷತೆ ವಹಿಸಿದ್ದು .ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಾಯರು ಒಕ್ಕೂಟದ ಅಧ್ಯಕ್ಷೆ ಚಂಪಾ, ತೋಕೂರು ಒಕ್ಕೂಟದ ಅಧ್ಯಕ್ಷ ಮನೋಹರ ಜಿ. ಕುಂದರ್ , ಕ್ಲಬ್ಬಿನ ಗೌರವಾಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಮಹಿಳಾ ಕಾರ್ಯಾದ್ಯಕ್ಷೆ ಯಶೋದಾ ದೇವಾಡಿಗ , ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ , ಮತ್ತಿತರರು ಉಪಸ್ಥಿತರಿದ್ದರು. ಸೇವಾ ಪ್ರತಿನಿದಿ ಸವಿತಾ ಶರತ್ ಸ್ವಾಗತಿಸಿದರು. ಚಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…