ನಿಂಬೆ ಹಣ್ಣು ಎಂದಾಕ್ಷಣ ಓಹ್! ಹುಳಿ! ಎಂದು ಮುಖ ಸಿಂಡರಿಸುತ್ತೇವೆ. ಆದರೆ ಈ ಹುಳಿ ನಿಂಬೆ ಹಣ್ಣು ಆರೋಗ್ಯ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂದೆ. ಈ ನಿಂಬೆ ಹಣ್ಣು ಮಿಟಮಿನ್ ಸಿ ಯ ಸಮೃದ್ಧ ಆಗರ. ಅಡುಗೆಗೆ, ಆರೋಗ್ಯಕ್ಕೆ , ಸೌಂದರ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆಹಣ್ಣು ಭಾರಿ ಉಪಕರ.
1. ನೆಗಡಿ, ಕೆಮ್ಮು, ಕಫ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ, ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಕಫ ನಿವಾರಣೆಯಾಗುವುದು.
2. ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.
3.ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ, ಅರಶಿನ ಹುಡಿ, ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.
4. ಕೈಕಾಲಿನ ಚರ್ಮ ಒಡೆದು ಬಿರುಕು ಬಿಟ್ಟಿದರೆ ನಿಂಬೆಯ ಹೋಳಿನಿಂದ ತಿಕ್ಕಿ ಸುಮಾರು 25 ರಿಂದ 30 ನಿಮಿಷದ ಬಳಿಕ ತೊಳೆದು ಹಾಲಿನ ಕೆನೆ ಲೇಪಿಸಿ ತಿಕ್ಕಬೇಕು.
5. ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.
6. ಬೊಜ್ಜು ಕರಗಿಸಲು ಒಂದು ಕಪ್ ಬಿಸಿ ನೀರಿಗೆ ಅರ್ಧ ನಿಂಬೆರಸ ಬೆರಸಿ ನಿತ್ಯ ಖಾಲಿ ಹೊಟ್ಟೆಗೆ ಕುಡಿದು ಒಂದು ಗಂಟೆ ಬಳಿಕ ಹೊಟ್ಟೆ ಖಾಲಿ ಬಿಡಬೇಕು.
7. ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.
ಸುಂದರ ತ್ವಚೆ ಗೆ ರಾಮಬಾಣ:
1. ಪುದೀನಾ ರಸದೊಂದಿಗೆ ನಿಂಬೆರಸ ಬೆರಸಿ ತಿಕ್ಕಿದರೆ ಮೊಡವೆ ನಿವಾರಕ.
2.ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.
3.ನಿಂಬೆ ರಸ ,ಜೇನು ಬೆರಸಿ ಪಾನಕದಂತೆ ಕುಡಿದರೆ ಚರ್ಮ, ಕೂದಲುಗಳಿಗೆ ಉತ್ತಮ.
4.ನಿಂಬೆಯ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಒಣಗಿಸಿ ಪುಡಿ ಮಾಡಿ ಕಡಲೆ ಹಿಟ್ಟಿನೊಂದಿಗೆ ಬೆರಸಿಡಬೇಕು ಇದನ್ನು ನಿತ್ಯವು ಹಾಲಿನ ಕೆನೊಂದಿಗೆ ಮುಖಕ್ಕೆ ಲೇಪಿಸಿ ಸ್ನಾನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
5.ಊಟದ ಬಳಿಕ ನಿಂಬೆರಸಯುಕ್ತ ಬಿಸಿ ನೀರಲ್ಲಿ ಕೈ ತೊಳೆದರೆ ಕೈಯ ಜಿಡ್ಡು ನಿವಾರಣೆಯಾಗುತ್ತದೆ.
ಹೀಗೆ ಹತ್ತು ಹಲವು ಉಪಯೋಗವಿರುವ ನಿಂಬೆ ಹಣ್ಣು ಆರೋಗ್ಯ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುತ್ತದೆ. ಹಳದಿ ಬಣ್ಣದ ಪುಟ್ಟ ಪುಟ್ಟ ಹಣ್ಣುಗಳು ಇಷ್ಟೊಂದು ಉಪಕರ!



