ಜನ ಮನದ ನಾಡಿ ಮಿಡಿತ

Advertisement

ಆರೋಗ್ಯ: ನಿಂಬೆ ಹಣ್ಣಿನ ಉಪಯೋಗಗಳ ಬಗ್ಗೆ ತಿಳಿದಿದ್ದೀರಾ? – ಆರೋಗ್ಯ ರಕ್ಷಕ ನಿಂಬೆ ಹಣ್ಣು

ನಿಂಬೆ ಹಣ್ಣು ಎಂದಾಕ್ಷಣ ಓಹ್! ಹುಳಿ! ಎಂದು ಮುಖ ಸಿಂಡರಿಸುತ್ತೇವೆ. ಆದರೆ ಈ ಹುಳಿ ನಿಂಬೆ ಹಣ್ಣು ಆರೋಗ್ಯ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂದೆ. ಈ ನಿಂಬೆ ಹಣ್ಣು ಮಿಟಮಿನ್‌ ಸಿ ಯ ಸಮೃದ್ಧ ಆಗರ. ಅಡುಗೆಗೆ, ಆರೋಗ್ಯಕ್ಕೆ , ಸೌಂದರ್ಯಕ್ಕೆ ಹೀಗೆ ಹತ್ತು ಹಲವು ವಿಧಗಳಲ್ಲಿ ನಿಂಬೆಹಣ್ಣು ಭಾರಿ ಉಪಕರ.

1. ನೆಗಡಿ, ಕೆಮ್ಮು, ಕಫ‌ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ, ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಕಫ‌ ನಿವಾರಣೆಯಾಗುವುದು.

2. ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.

3.ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ, ಅರಶಿನ ಹುಡಿ, ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.

4. ಕೈಕಾಲಿನ ಚರ್ಮ ಒಡೆದು ಬಿರುಕು ಬಿಟ್ಟಿದರೆ ನಿಂಬೆಯ ಹೋಳಿನಿಂದ ತಿಕ್ಕಿ ಸುಮಾರು 25 ರಿಂದ 30 ನಿಮಿಷದ ಬಳಿಕ ತೊಳೆದು ಹಾಲಿನ ಕೆನೆ ಲೇಪಿಸಿ ತಿಕ್ಕಬೇಕು.

5. ನಿಂಬೆ ರಸ ,ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.

6. ಬೊಜ್ಜು ಕರಗಿಸಲು ಒಂದು ಕಪ್‌ ಬಿಸಿ ನೀರಿಗೆ ಅರ್ಧ ನಿಂಬೆರಸ ಬೆರಸಿ ನಿತ್ಯ ಖಾಲಿ ಹೊಟ್ಟೆಗೆ ಕುಡಿದು ಒಂದು ಗಂಟೆ ಬಳಿಕ ಹೊಟ್ಟೆ ಖಾಲಿ ಬಿಡಬೇಕು.

7. ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.

ಸುಂದರ ತ್ವಚೆ ಗೆ ರಾಮಬಾಣ:

1. ಪುದೀನಾ ರಸದೊಂದಿಗೆ ನಿಂಬೆರಸ ಬೆರಸಿ ತಿಕ್ಕಿದರೆ ಮೊಡವೆ ನಿವಾರಕ.

2.ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.

3.ನಿಂಬೆ ರಸ ,ಜೇನು ಬೆರಸಿ ಪಾನಕದಂತೆ ಕುಡಿದರೆ ಚರ್ಮ, ಕೂದಲುಗಳಿಗೆ ಉತ್ತಮ.

4.ನಿಂಬೆಯ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಒಣಗಿಸಿ ಪುಡಿ ಮಾಡಿ ಕಡಲೆ ಹಿಟ್ಟಿನೊಂದಿಗೆ ಬೆರಸಿಡಬೇಕು ಇದನ್ನು ನಿತ್ಯವು ಹಾಲಿನ ಕೆನೊಂದಿಗೆ ಮುಖಕ್ಕೆ ಲೇಪಿಸಿ ಸ್ನಾನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

5.ಊಟದ ಬಳಿಕ ನಿಂಬೆರಸಯುಕ್ತ ಬಿಸಿ ನೀರಲ್ಲಿ ಕೈ ತೊಳೆದರೆ ಕೈಯ ಜಿಡ್ಡು ನಿವಾರಣೆಯಾಗುತ್ತದೆ.

ಹೀಗೆ ಹತ್ತು ಹಲವು ಉಪಯೋಗವಿರುವ ನಿಂಬೆ ಹಣ್ಣು ಆರೋಗ್ಯ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುತ್ತದೆ. ಹಳದಿ ಬಣ್ಣದ ಪುಟ್ಟ ಪುಟ್ಟ ಹಣ್ಣುಗಳು ಇಷ್ಟೊಂದು ಉಪಕರ!

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!