ಸ್ವಚ್ಛತೆಯ ವಿಷಯದಲ್ಲಿ ಸ್ವತಃ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನೇ ಪ್ರಭಾವಿಸಿದ್ದ ಹಿರಿಯರಾದ ನಿವೃತ್ತ ಸರ್ಕಾರಿ ಶಿಕ್ಷಕ ಶ್ರೀ ಚಂದ್ರಕಾಂತ ರಾಧಾಬಾಯಿ ದಾಮೋದರ್ ಕುಲಕರ್ಣಿ (ಸ್ವಚ್ಛತಾ ಬಾಬಾ) ಯವರನ್ನು ಶಾಸಕ ವೇದವ್ಯಾಸ ಕಾಮತ್ ರವರು ಪುಣೆಯ ಚುನಾವಣಾ ಕಾರ್ಯಗಳ ನಡುವೆ ಭೇಟಿ ಮಾಡಿ ಸನ್ಮಾನಿಸಿದರು.
ನಂತರ ಮಾತನಾಡಿದ ಶಾಸಕರು, ಮಾನ್ಯ ಪ್ರಧಾನಿಗಳು ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದಾಗ ನಿವೃತ್ತಿ ಜೀವನ ನಡೆಸುತ್ತಿದ್ದ ಕುಲಕರ್ಣಿಯವರು ತಮಗೆ ಬರುತ್ತಿದ್ದ 15,000 ಪಿಂಚಣಿಯಲ್ಲಿ ತಿಂಗಳಿಗೆ 5 ಸಾವಿರದಂತೆ, ಒಟ್ಟು 2,60,000/- ಸ್ವಚ್ಛ ಭಾರತ್ ನಿಧಿಗೆ ನೀಡಿ ದೇಶಕ್ಕೆ ಮಾದರಿಯಾಗಿದ್ದರು. ಅನೇಕ ಬಾರಿ ಕಾಶಿ, ಅಯೋಧ್ಯೆಗೆ ತೆರಳಿ 5-10 ದಿವಸಗಳ ಕಾಲ ತಂಗಿ ಸ್ವಚ್ಛತಾ ಕಾರ್ಯ ಮಾಡುವುದರಲ್ಲೇ ಸಂತೃಪ್ತಿಯನ್ನು ಕಾಣುವ ವಿಶೇಷ ವ್ಯಕ್ತಿ ಇವರು. ಇವೆಲ್ಲವನ್ನು ಗಮನಿಸಿ ಮಾನ್ಯ ಪ್ರಧಾನಿಗಳು ತಮ್ಮ ಮನ್ ಕಿ ಬಾತ್ ನಲ್ಲಿ ಇವರ ಬಗ್ಗೆ ಉಲ್ಲೇಖಿಸಿದ್ದು ಮಾತ್ರವಲ್ಲದೇ, ಎರಡು ಬಾರಿ ಅತ್ಯಂತ ಗೌರವದಿಂದ ಕರೆಸಿಕೊಂಡು ಸನ್ಮಾನಿಸಿದ್ದರು ಎಂದು ಶಾಸಕರು ಹೇಳಿದರು.
ಸ್ವತಃ ಪ್ರಧಾನಿಗಳೇ ಕುಲಕರ್ಣಿಯವರ ಕಾರ್ಯದಿಂದ ನಾನು ತುಂಬಾ ಪ್ರಭಾವಿತನಾಗಿ ಪ್ರೇರಣೆ ಪಡೆದಿದ್ದೇನೆ ಎಂದಿರುವುದು ಇಲ್ಲಿ ಗಮನಾರ್ಹವಾಗಿದ್ದು, ಉತ್ತರ ಪ್ರದೇಶದ ಅಮೇಥಿಯಲ್ಲಿ ಜನಸಾಮಾನ್ಯರ ಉಪಯೋಗಕ್ಕಾಗಿ ಸುಮಾರು 450ಕ್ಕೂ ಹೆಚ್ಚು ಕುಡಿಯುವ ನೀರಿನ ಬೋರ್ವೆಲ್ ನಿರ್ಮಾಣಗೊಳಿಸಿರುವ ಇವರು ತ್ರಯಂಬಕೇಶ್ವರದ ಪ್ರಾಚೀನ ಕುಂಡ ಸಹಿತ ಅನೇಕ ಐತಿಹಾಸಿಕ ಕೆರೆಗಳನ್ನು ಪುನರುಜ್ಜೀವನ ಗೊಳಿಸಿದ್ದಾರೆ. ಇಂತಹ ಸಮಾಜಮುಖಿ ವ್ಯಕ್ತಿ ನಮ್ಮ ಮಂಗಳೂರಿನ ಶ್ರೀ ರಾಮಕೃಷ್ಣ ಮಠಕ್ಕೂ ಮೂರು ಸಲ ಭೇಟಿ ನೀಡಿ ಸ್ವಚ್ಛತೆಯ ನಿಟ್ಟಿನಲ್ಲಿ ಮಠವು ವಹಿಸಿರುವ ಕಾಳಜಿ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಕುಲಕರ್ಣಿಯವರ ಕುಟುಂಬದವರ ಸಹಿತ ಬಿಜೆಪಿ ಮುಖಂಡರಾದ ಸಂಜಯ್ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…