ಅಡಿಕೆಯಿಂದ ಆರೋಗ್ಯಕ್ಕೆ ಹಾನಿಕಾರಕವಾಗಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮನವರಿಕೆಗೆ ಮನವಿ ಮಾಡುವಂತೆ ಜಿಲ್ಲೆಯ ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿಯಮಿತ ಇದರ ಅಧ್ಯಕ್ಷ ಪ್ರಭಾಕರ್ ಪ್ರಭು ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಿರುವ ತೋಟಾಗಾರಿಕೆ ಬೆಳೆಯಾಗಿರುವ ಅಡಿಕೆ ಬೆಳೆಯಿಂದಾಗಿ ರಾಜ್ಯದ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದು , ಈ ಬೆಳೆಯಿಂದಾಗಿ ದೇಶದ ಆರ್ಥಿಕತೆಗೂ ಶಕ್ತಿ ಬಂದಿರುತ್ತದೆ . ಕರಾವಳಿ ಜಿಲ್ಲೆಗಳಲ್ಲಿನ ಒಟ್ಟು ಭೂ ವಿಸ್ತಿರ್ಣದಲ್ಲಿ ಬಹುಪಾಲು ವಿಸ್ತಿರ್ಣ ಅಡಿಕೆ ಬೆಳೆಯಿಂದ ಕೂಡಿದ್ದು , ಬಹುಪಾಲು ರೈತರು ಅಡಿಕೆ ಬೆಳೆಯನ್ನು ಅವಲಂಬಿತರಾಗಿರುತ್ತಾರೆ . ಈ ಅಡಿಕೆ ಬೆಳೆಗಾರರಿಂದಲೇ ಕರಾವಳಿ ಜಿಲ್ಲೆಗಳು ಆರ್ಥಿಕವಾಗಿ ಸದೃಢಗೊಳ್ಳಲು ಕಾರಣವಾಗಿದೆ . ವಿಷಯ ಹೀಗಿರುವಾಗ ದಿಢಿರನೆ ಎಂಬಂತೆ ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆ ಸೇವನೆಯಿಂದ ಬಾಯಿಯ ಕ್ಯಾನ್ಸರ್ ಸಂಭವಿಸುತ್ತದೆ ಎಂದು ಅವೈಜ್ಞಾನಿಕವಾಗಿ ವರದಿ ನೀಡಿದ್ದು ಅಡಿಕೆ ಬೆಳೆಗಾರರು ತುಂಬಾ ಆತಂಕದ ಪರಿಸ್ಥಿತಿಯಲ್ಲಿದ್ದಾರೆ
ಈ ಅಡಿಕೆ ಬಗ್ಗೆ ದೇಶದಲ್ಲಿ ಹಲವಾರು ಸಂಶೋಧನೆಗಳನ್ನೂ ನಡೆಸಲಾಗಿದ್ದು
ಮತ್ತು ವಿವಿಧ ರೀತಿಯ ಪರೀಕ್ಷೆಗಳನ್ನು ಒಳಪಡಿಸಲಾಗಿದ್ದು ,ಎಲ್ಲಾ ಮೂಲಗಳಿಂದಲೂ ಅಡಿಕೆ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ಸಾಬೀತಾಗಿರುತ್ತದೆ.ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಮತ್ತು ಆರೋಗ್ಯದಾಯಕವಾಗಿದೆ ಎಂಬುದಕ್ಕೆ ಸಂಶೋಧನೆಯಿಂದ ಪಡೆಯಲಾದ ಹಲವಾರು ಪೂರಕವಾದ ದಾಖಲೆಗಳು ಕರಾವಳಿಯ ಪ್ರತಿಷ್ಠಿತ ಅಡಿಕೆ ಖರೀದಿ ಕೇಂದ್ರವಾದ ಕ್ಯಾಂಪ್ಕೋ ಬಳಿ ಲಭ್ಯವಿದೆ.
ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಅಡಿಕೆಯನ್ನು ನಿಷೇಧಿಸಲು ಶಿಫಾರಸ್ಸು ಮಾಡಿರುವ ಅವೈಜ್ಞಾನಿಕ ಸಂಸ್ಥೆಗೆ ಈಗಾಗಲೇ ಹೆಚ್ಚಿನ ಸಂಖ್ಯೆಯ ಜನ ಸಾಮಾನ್ಯರು ದಿನ ನಿತ್ಯ ಉಪಯೋಗಿಸುವ ವಿಷಕಾರಿ ಕುಡಿಯುವ ಪಾನೀಯಗಳಾದ ಸ್ಪೈಟ್ ,ಕೊಕೊ ಕೋಲಾ , ಪಾಂಟ , ತಮ್ಸಪ್ , ಮಿರಿಂಡ ಹಾಗೂ ಮದ್ಯಪಾನ ಸೇವನೆ ಸೇರಿದಂತೆ ಇನ್ನಿತರ ಆರೋಗ್ಯಕ್ಕೆ ಹಾನಿಕಾರಕವಾದವುಗಳನ್ನು ನಿಷೇಧ ಮಾಡಲು ಆಗುವುದಿಲ್ಲವೇ
ಆದುದರಿಂದ ಧಾರ್ಮಿಕ ಸಂಪ್ರದಾಯದಿಂದ ಹಿಡಿದು ದೇವತಾ ಕಾರ್ಯಗಳಿಗೆ ಸಹ ಅಡಿಕೆಯನ್ನು ಬಳಸಲಾಗುತ್ತಿದ್ದು ಅಡಿಕೆಯಿಂದ ಯಾವುದೇ ಹಾನಿಕಾರಕ ಉದ್ಬವಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಮನವರಿಕೆ ಮಾಡಿಕೊಳ್ಳಲು ದೇಶದ ಪ್ರಧಾನ ಮಂತ್ರಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರುಗಳಿಗೆ ಮನದಟ್ಟು ಮಾಡಲು ಮನವಿ ಮಾಡಿದ್ದಾರೆ.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…