ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಜ್ಞಾನವಿಕಾಸ ಕೇಂದ್ರಗಳು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಿಳಿನೆಲೆ ವಲಯ ಹಾಗೂ ವೇದವ್ಶಾಸ ವಿಧ್ಶಾಲಯ ಮತ್ತು ಗೋಪಾಲಕೃಷ್ಣ ಪ್ರೌಡಶಾಲೆಯ ಸಹಭಾಗಿತ್ವದಲ್ಲಿ ಬಿಳಿನೆಲೆ ವೇದವ್ಶಾಸ ಸಭಾಭವನ ದಲ್ಲಿ ತಾಲೂಕು ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ತೆಂಗಿನ ಹಿಂಗಾರ ಅರಳಿಸುವ ಮೂಲಕ ಚಾಲನೆ ನೀಡಿದ ಸುಳ್ಶ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಶ ಮಾತನಾಡಿ ಸಮಾಜದ ಪ್ರತೀ ಕ್ಷೇತ್ರದಲ್ಲಿಯೂ ಮಹಿಳೆಯು ತನ್ನ ಚಾಪು ಮೂಡಿಸಿರುವುದರಿಂದ ಸಮಾಜದ ಸ್ವಾಸ್ಥ್ಶ ಸುಧಾರಣೆಯಾಗಲು ಸಹಕಾರಿಯಾಗಿರುತ್ತದೆ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಲ್ಲಿ ದೊರೆಯುವ ಮಾಹಿತಿ ಹಾಗೂ ಅಭಿವೃಧ್ಧಿ ಚಟುವಟಿಕೆಗಳಲ್ಲಿ ಮಹಿಳೆಯೋಬ್ಬಳು ಇಚ್ಚಾಶಕ್ತಿ ಹಾಗೂ ಮನೆಯವರ ಸಹಕಾರದೊಂದಿಗೆ ತೋಡಗಿಸಿಕೊಂಡರೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವಧ್ಧಿಯೋಜನೆ ಕರಾವಳಿ ಪ್ರಾದೇಶಿಕ ವ್ಶಾಪ್ತಿಯ ಉಡುಪಿ ಪ್ರಾದೇಶಿಕ ನಿರ್ದೇಶಕರಾದ ದುಗ್ಗೆ ಗೌಡ ರವರು ಮುಖ್ಶ ಅಥಿತಿಯಾಗಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಾತೃಶ್ರೀ ಹೇಮಾವತಿ ಹೆಗ್ಗಡೆಯವ ಅಧ್ಶಕ್ಷತೆಯಲ್ಲಿ ಸಮಾಜ ಸುಧಾರಣೆಯೋಂದಿಗೆ ಮಹಿಳಾ ಸಭಲೀಕರಣ , ಮಹಿಳೆಯರ ಪ್ರತಿಭೆಯ ಅನಾವರಣ ಹಾಗೂ ಆರ್ಥಿಕ ಸೌಲಭ್ಶಗಳಲ್ಲಿ ಶಿಸ್ತು ಬದ್ದ ವ್ಶವಹಾರದ ಕುರಿತಾಗಿ ಮಾಹಿತಿ ದೊರೆಯಲು ಸಹಕಾರಿಯಾಗಿದ್ದು ಶಿಸ್ತಿನ ಸಿಪಾಯಿಗಳಾಗಿ ರೂಪುಗೊಳ್ಳಲು ಜ್ಞಾನವಿಕಾಸ ಕೇಂದ್ರದ ಸಭೆ ಸಹಕಾರಿಯಾಗಿದೆ ಎಂದರು.
ಪುತ್ತೂರು ಮಹಿಳಾ ಪೋಲಿಸ್ ಠಾಣೆಯ ಪಿ ಎಸ್ ಐ ಶ್ರೀಮತಿ ಸವಿತಾ ರವರು ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉಧ್ಘಾಟನೆ ಮಾಡಿ ಮಾತನಾಡಿ ಮಹಿಳೆಯೋಬ್ಬಳು ಸಭಳೆಯಾಗಲು ಕಾನೂನು ಅರಿವೂ ಅತೀ ಅಗತ್ಶವಾಗಿದ್ದು ಕಾನೂನಿನ ಎಲ್ಲಾ ಮಾಹಿತಿಗಳು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜ್ಞಾನವಿಕಾಸದ ತಿಂಗಳ ಸಭೆಯಲ್ಲಿ ದೊರೆಯುತ್ತದೆ ಹಾಗೂ ಇಲಾಖೆಗಳ ಬೇಟಿನೀಡಿಯೂ ಮಾಹಿತಿ ಪಡೆದುಕೊಳ್ಳಲು ಜ್ಞಾನವಿಕಾಸ ಕಾರ್ಯಕ್ರಮ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಶಕ್ಷತೆಯನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಶಕ್ಷೆ ಶ್ರೀಮತಿ ಶಾರದಾ ದಿನೇಶ್ ವಹಿಸಿದ್ದರು.
ಒತ್ತಡ ನಿರ್ವಹಣೆಯೋಂದಿಗೆ ಯಶಸ್ವಿ ಹೆಜ್ಜೆಯತ್ತ ಮಹಿಳೆ ವಿಚಾರ ದ ಮಂಡನೆಯನ್ನು ಪುತ್ತೂರು ತೆಂಕಿಲ ವಿವೇಕಾನಂದಾ ಕನ್ನಡ ಮಾದ್ಶಮ ಶಾಲೆಯ ಮುಖ್ಶ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ನಡೆಸಿಕೊಟ್ಟರು.
ಜ್ಞಾನವಿಕಾಸ ಕೇಂದ್ರದ ಮಹಿಳೆಯರಿಗೆ ರಂಗೋಳಿ ಸ್ಷರ್ದೆ ˌಹೂಗುಚ್ಚ ತಯಾರಿ ಹಾಗೂ ಜಾನಪದ ನತ್ಶ ಸ್ಪರ್ಧೆಯು ನಡೆಯಿತು.
ನತ್ಶ ಸ್ಷರ್ಧೆಯ ತೀರ್ಪುಗಾರರಾಗಿ ಕಿತ್ತೂರು ರಾಣಿ ಚೆನ್ನಮ್ಮ ರಾಷ್ಟ್ರ ಪ್ರಶಸ್ತಿ ವಿಜೇತೆ ಗ್ರಂಥಾಲಯದ ಪಾಲಕಿ ಶಾರದಾ ಪಾಲೆತ್ತಾರು,ಪುತ್ತಿಲ ಬೈಲಡ್ಕ ಪ್ರಾಥಮಿಕ ಶಾಲಾ ಶಿಕ್ಷಕ ರಾಮಣ್ಣ ಬಜೆಂತ್ರಿ , ವಿಟ್ಲ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ ಸಹಕರಿಸಿದರು
19ಕೇಂದ್ರಗಳ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಬೃಂದಾವನ ಜ್ಞಾನವಿಕಾಸ ಕೇಂದ್ರ ಮಾದೇರಿ, ದ್ವೀತೀಯ ಸ್ಥಾನವನ್ನು ಶ್ರೀದೇವಿ ಜ್ಞಾನವಿಕಾಸ ಕೇಂದ್ರ ಶಿವಾರು ,ತ್ರಿತೀಯ ಸ್ಥಾನವನ್ನು ಜ್ಞಾನದೀಪ ಜ್ಞಾನ ವಿಕಾಸ ಕೇಂದ್ರ ಬಿಳಿನೆಲೆ, ಚಥುರ್ಥ ಸ್ಥಾನವನ್ನು ಧರ್ಮಶ್ರೀ ಜ್ಞಾನವಿಕಾಸ ಕೇಂದ್ರ ಕೌಕ್ರಾಡಿ ,ಐದನೇ ಸ್ಥಾನವನ್ನು ಜ್ಞಾನದೀಪ ಜ್ಞಾನವಿಕಾಸ ಕೇಂದ್ರ ದೊಡ್ಡಕೊಪ್ಪ ದ ಸದಸ್ಶರುಗಳು ಪಡೆದುಕೊಂಡರು.
ಕಾರ್ಯಕ್ರಮದ ವೇಧಿಕೆಯಲ್ಲಿ ವೇದವ್ಶಾಸ ವಿದ್ಶಾಲಯದ ಮುಖ್ಶೋಪಾಧ್ಶಯರಾದ ಪ್ರಶಾಂತ್ ಬಿ, ˌಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಸಮಿತಿ ಯ ಕಡಬ ತಾಲೂಕು ಅಧ್ಶಕ್ಷ ಸಂತೋಷ್ ಕೇನ್ಶ, ತಾಲೂಕು ಜನಜಾಗೃತಿ ವೇಧಿಕೆ ಅಧ್ಶಕ್ಷ ಮಹೇಶ್ ಕೆ ಸವಣೂರು, ಬಿಳಿನೆಲೆ ಒಕ್ಕೂಟದ ಅಧ್ಶಕ್ಷ ರಾಜೇಶ್ ಒಗ್ಗು ˌ ತಾಲೂಕು ಭಜನಾಪರಿಷತ್ ಅಧ್ಶಕ್ಷ ಸುಂದರ ಗೌಡ ಒಗ್ಗು, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಬಿಳಿನೆಲೆ ಜ್ಞಾನದೀಪಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಉಷಾ ಸತೀಶ್, ಜನಜಾಗೃತಿ ಸದಸ್ಶರಾದ ಗೋಪಾಲಕೃಷ್ಣ ಬಟ್ಟ್ ,ಶಿವಪ್ರಸಾದ್ ರೈ ಮೈಲೇರಿ, ತಾಲೂಕು ಶೌರ್ಯ ಘಟಕದ ಮಾಸ್ಟರ್ ಪ್ರಶಾಂತ್ ಎನ್ ಎಸ್, ಕ್ಶಾಪ್ಟನ್ ಭವಾನಿಶಂಕರ ಹಾಗೂ ಬಿಳಿನೆಲೆ ಗ್ರಾಮದ ಹಿರಿಯರಾದ ಉಮೇಶ್ ಗೌಡ ಎರ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಘಟನೆಗೆ ಬಿಳಿನೆಲೆ ವಲಯದ ಸೇವಾಪ್ರತಿನಿಧಿಗಳಾದ ಸತೀಶ್ ಬಿಳಿನೆಲೆ, ದೀನೇಶ್ ನೆಕ್ಕಿಲಾಡಿ, ಜ್ಞಾನಸೇಲ್ವೀ ಕೊಡಿಂಬಾಳ, ರೇಖಾ ಸುಳ್ಶ, ಗಣೇಶ್ ಕೊಂಬಾರು, ಗಣೇಶ್ ಐತ್ತೂರು, ಬೇಬಿ ಕೊಣಾಜೆ, ನೇತ್ರ ಬಂಟ್ರ, ವಿನೋದ್ ಕೆಸಿ ಶಿರಿಬಾಗಿಲು ಮತ್ತು ಭವ್ಶ ಕೈಕಂಭ ಸಹಕರಿಸಿದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ಯನ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಬಿಳಿನೆಲೆ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿ ಧನ್ಶವಾದ ಮಾಡಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…