ಶ್ರೀ ಕಟೀಲು ಮೇಳದಲ್ಲಿ ನಿರಂತರ 35 ವರ್ಷ ಗಳಿಂದ ಕಲಾ ಸೇವೆ ಗೈಯುತ್ತಿರುವ ಬಣ್ಣದ ವೇಷಧಾರಿ ಶ್ರೀ ನಗ್ರಿ ಮಹಾಬಲ ರೈ ಅವರಿಗೆ ಕದ್ರಿ ಯಕ್ಷ ಬಳಗವು ಪ್ರತಿಷ್ಠಿತ ” ಕದ್ರಿ ವಿಷ್ಣು ಪ್ರಶಸ್ತಿ -2024″.ನೀಡಿ ಗೌರವಿಸಿತು.ಕದ್ರಿ ಯಕ್ಷ ಬಳಗ ವು ಶ್ರೀ ಕಟೀಲು ಮೇಳದ ಸೇವೆ ಆಟ ದ ಸಂದರ್ಭದಲ್ಲಿ ಕಳೆದ ಒoಭತ್ತು ವರ್ಷ ಗಳಿಂದ ನಿರಂತರ ವಾಗಿ ಕದ್ರಿ ವಿಷ್ಣು ಪ್ರಶಸ್ತಿ ನೀಡುತ್ತಿದೆ.
ಕದ್ರಿ ವಿಷ್ಣು ಸಂಸ್ಮರಣೆ
ಇಚ್ಲಂಪಾಡಿ, ಕೂಡ್ಲು,ಕೊರಕೋಡು, ಅಡೂರು, ಕುಂಡಾವು, ಕದ್ರಿ,ಧರ್ಮಸ್ಥಳ,ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು,ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರದಿದ್ದ ಮೇರು ಕಲಾವಿದ ಕದ್ರಿ ವಿಷ್ಣು ಸಂಸ್ಮರಣೆಯು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ, ಸದಸ್ಯ ಮೋಹನ್ ಕೊಪ್ಪಳ ಕದ್ರಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅವರು
” ಸುಬ್ರಮಣ್ಯ, ಧರ್ಮಸ್ಥಳ ಹಾಗೂ ಕಟೀಲು ಮೇಳಗಳಲ್ಲಿ ಒಟ್ಟು ಐದುವರೆ ದಶಕಗಳಿಂದ ತೆಂಕುತಿಟ್ಟಿನ ಪರಂಪರೆಯ ಬಣ್ಣದ ವೇಷಧಾರಿಯಾಗಿ ಯಕ್ಷ ಕಲಾಯಾನ ವನ್ನು ಮುನ್ನಡೆಸುತ್ತಿರುವ ನಗ್ರಿ ಮಹಾಬಲ ರೈ ಅವರು ಕಟೀಲು ಮೇಳದಲ್ಲಿ ನಿರಂತರ 34 ತಿರುಗಾಟವನ್ನು ಪೂರೈಸಿದ್ದಾರೆ.
ಶ್ರೀ ದೇವಿ ಮಹಾತ್ಮೆಯ ಮಹಿಷಾಸುರ ಪಾತ್ರ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ ” ಎಂದು ಅಭಿನಂದಿಸಿದರು.
ಭಾಸ್ಕರ ಶೆಟ್ಟಿ ಗುರುದೇವ್ ಕಲ್ಯಾಣ್, ಸೀತಾರಾಮ್ ಅರೆಕೆರೆಬೈಲ್, ರವೀಂದ್ರನಾಥ ಶೆಟ್ಟಿ ಮುಂಡ್ಕೂರು ದೊಡ್ಡಮನೆ, ಗೋಕುಲ್ ಕದ್ರಿ,ಬೆಟ್ಟoಪಾಡಿ ಸುಂದರ ಶೆಟ್ಟಿ,ಜಯಶೀಲ ಅಡ್ಯoತಾಯ, ತಾರಾನಾಥ್ ಶೆಟ್ಟಿ ಬೋಳಾರ, ರಾಮಚಂದ್ರ ಭಟ್ ಎಲ್ಲೂರು,ನಿವೇದಿತಾ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಕುಮಾರ್ ಚಿತ್ರಾಪುರ, ಮೂಲ್ಕಿ ಕರುಣಾಕರ ಶೆಟ್ಟಿ,ಪಣಂಬೂರು ಶ್ರೀಧರ ಐತಾಳ, ಸುಧಾಕರ ಶೆಟ್ಟಿ ದೋಣಿoಜೆ,ನಾಗೇಶ್ ಭಂಡಾರಿ ಡೊಂಬಿವಿಲಿ ಉಪಸ್ಥಿತರಿದ್ದರು.
ಶಿವಪ್ರಸಾದ್ ಪ್ರಭು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕದ್ರಿ ವಿಷ್ಣು ಸಂಸ್ಮರಣೆ ಮಾಡಿದರು. ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ಸಂಯೋಜಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…