ಮಂಗಳೂರು, ನವೆಂಬರ್ 27- ಜೀವ ವಿಮಾ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಷುರೆನ್ಸ್ ಲಿಮಿಟೆಡ್ (ಎಫ್‌ಜಿಐಎಲ್‌ಐ) ಮಂಗಳೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸಿದೆ. ಈ ಮೂಲಕ ತನ್ನ ವಿಸ್ತರಣಾ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ಮಂಗಳೂರು ಬೆಳವಣಿಗೆಗೆ ಅವಕಾಶವಿರುವ ಮಾರುಕಟ್ಟೆ ಎಂದು ಗುರುತಿಸಿರುವ ಎಫ್‌ಜಿಐಎಲ್‌ಐ ಗ್ರಾಹಕರನ್ನು ಗುರುತಿಸಿ ಅವರಿಗೆ ವಿಮೆ ಸೌಲಭ್ಯ ದೊರೆಯುವಂತೆ ಮಾಡುವುದಲ್ಲದೇ ಸಮಗ್ರ ವಿಮೆ ಪರಿಹಾರಗಳನ್ನು ಸ್ಥಳೀಯರಿಗೆ ಒದಗಿಸಲಿದೆ. ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಷುರೆನ್ಸ್ ದೇಶಾದ್ಯಂತ ಜಾಲ ಹೊಂದಿದ್ದು ಪ್ರಸ್ತುತ 94 ಶಾಖೆ ಮತ್ತು 73ಕ್ಕೂ ಹೆಚ್ಚು ಬ್ಯಾಂಕ್ ಪಾಲುದಾರಿಕೆಯ ಶಾಖೆಗಳನ್ನು ಹೊಂದಿದೆ.
ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಷುರೆನ್ಸ್‌ನ ಎಂಡಿ ಮತ್ತು ಸಿಇಒ ಅಲೋಕ್ ರುಂಗ್ಟಾ ಮಾತನಾಡಿ “ಗ್ರಾಹಕ ಕೇಂದ್ರಿತ ಸೇವೆಗಳಿಗೆ ಹೆಚ್ಚು ಒತ್ತು ನೀಡುವುದರಿಂದ ನಾವು ನಿರಂತರವಾಗಿ ಹೊಸತನವನ್ನು ಅನ್ವೇಷಿಸುತ್ತಿರುತ್ತೇವೆ. ಮಂಗಳೂರಿನಲ್ಲಿ ಶಾಖೆ ಆರಂಭಿಸುವ ಮೂಲಕ ಇಲ್ಲಿಯ ಗ್ರಾಹಕ ಸ್ಥಳೀಯ ಅಗತ್ಯತೆಗಳಿಗೆ ಹೊಂದಿಕೆಯಾಗುವ ವಿಮೆ ಉತ್ಪನ್ನಗಳನ್ನು ಪರಿಚಯಿಸಲಾಗುವುದು. ಜೊತೆಗೆ ಗ್ರಾಹಕ ಸಂಬಂಧವನ್ನು ದೀರ್ಘಾವಧಿಗೆ ಬೆಳೆಸುವ ವಿಶ್ವಾಸಾರ್ಹತೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗುವುದು. ಡಿಜಿಟಲ್ ಪರಿವರ್ತನೆಯಿಂದಾಗಿ ಗ್ರಾಹಕರು ತ್ವರಿತವಾಗಿ ಮತ್ತು ನಂಬಿಕೆಗೆ ಅರ್ಹವಾದ ಸೇವೆಯನ್ನು ಪಡೆಯಲಿದ್ದಾರೆ” ಎಂದು ತಿಳಿಸಿದರು.
ವಿನೂತನ ವಿಮೆ ಉತ್ಪನ್ನಗಳಿಗೆ ಒತ್ತು ನೀಡುವ ಭಾಗವಾಗಿ ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಷುರೆನ್ಸ್ ಲಾಂಗ್ ಟರ್ಮ್ ಇನ್‌ಕಂ ಪ್ಲಾನ್ (ಎಲ್‌ಟಿಐಪಿ) ಪರಿಚಯಿಸಿದೆ. ಇದನ್ನು ಜೀವನಕ್ಕೆ ಭದ್ರತೆ ನೀಡುವ ಜೊತೆಗೆ ದೀರ್ಘಾವಧಿಯಲ್ಲಿ ಆರ್ಥಿಕ ಸದೃಢತೆಯನ್ನು ಒದಗಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮರಣದ ಸಮಯದಲ್ಲಿ, ಬದುಕಿರುವಾಗಲೇ ಮತ್ತು ವಿಮಾ ಅವಧಿ ಮುಗಿದಾಗ ನಿಶ್ಚಿತ ಆದಾಯವನ್ನು ಎಲ್‌ಟಿಐಪಿ ನೀಡಲಿದೆ. ಅಲ್ಲದೇ 50 ವರ್ಷಗಳವರೆಗೆ ದೀರ್ಘಾವಧಿಯ ಆದಾಯವನ್ನು ಖಾತ್ರಿ ಪಡಿಸಲಿದೆ. ವಿಮೆ ಪಾಲಿಸಿದಾರರು ತಮಗೆ ಬೇಕಾದ ಸಮಯದಲ್ಲಿ ಅಂದರೆ ಪಾಲಿಸಿ ಆರಂಭವಾದ ಮರು ತಿಂಗಳಲ್ಲೇ ಪಾಲಿಸಿ ಹಿಂದಕ್ಕೆ ಪಡೆಯಬಹುದು. ಇಲ್ಲವೇ 11ನೇ ವರ್ಷದಿಂದ ಆದಾಯ ಲಾಯಲ್ಟಿ ಜಮೆ ಆಗಲು ಆರಂಭವಾಗಲಿದ್ದು ಪಾಲಿಸಿ ಅವಧಿ ಮುಗಿಯುವವರೆಗೆ ಮುಂದುವರೆಯುತ್ತದೆ.
24ರ ಹಣಕಾಸು ವರ್ಷದಲ್ಲಿ ಎಫ್‌ಜಿಐಎಲ್‌ಐ 59.80 ಕೋಟಿ ರೂಪಾಯಿಗಳ ಬೋನಸ್ ನೀಡಿದೆ. ಕಂಪೆನಿಯ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಅಲ್ಲದೇ ಭಾರತದಾದ್ಯಂತ ಸಂಸ್ಥೆ 101,000ಕ್ಕೂ ಹೆಚ್ಚು ಪಾಲಿಸಿದಾರರನ್ನು ಹೊಂದಿದ್ದು ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಪ್ರತೀಕವಾಗಿದೆ. ಕಂಪೆನಿ ಪ್ರಕಟಿಸಿರುವ ಬೋನಸ್ ಕಂಪೆನಿಯ ಸದೃಢ ಆರ್ಥಿಕ ಸಾಮರ್ಥ್ಯ ಮತ್ತು ದೀರ್ಘಾವಧಿಯ ಬದ್ಧತೆಗೆ ಸಾಕ್ಷಿಯಾಗಿದೆ.
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…