ಕು|ರಿ ಶ್ರೇಯಾ ಮೇರ್ಕಜೆ ಇವರು ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಗುರುಪ್ರಸಾದ್ ಮೇರ್ಕಜೆ ಮತ್ತು ಪ್ರಮೀಳಾ ಮೇರ್ಕಜೆ ದಂಪತಿಗಳ ಪುತ್ರಿ ಹಾಗೂ NMC collage ಇಲ್ಲಿ 1st PUCಯಲ್ಲಿ ವ್ಯಾಸಂಗ ಮಾಡುತಿದ್ದಾರೆ.
ಇವರು ನೃತ್ಯ ಅಭಿನಯ,ಕ್ರೀಡೆ, ನಿರೂಪಣೆ,ಸಂಗೀತ,ಭರತನಾಟ್ಯ ಇವುಗಳಲ್ಲಿ ತನ್ನದೇ ಆದಂತಹ ಚಾಪನ್ನು ಮೂಡಿಸಿದ್ದಾರೆ ಇವರ ನೃತ್ಯ ಗುರುಗಳು ಸುಧೀರ್ ಉಳ್ಳಾಲ್ ಕಲರ್ಸ್ ಕನ್ನಡ ಇವರಿಂದ ನೃತ್ಯ ತರಬೇತಿಯನ್ನು ಪಡೆದು 700ಕ್ಕಿಂತಲೂ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.ಇವರು ತಮ್ಮ 7 ತಿಂಗಳ ಮಗು ಇರುವಾಗಲೇ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಾಹುಮಾನ ಹಾಗೂ ಚಿನ್ನದ ನಾಣ್ಯ ಪಡೆದಿದ್ದಾರೆ ಹೀಗೆ ಇವರ ಕಲಾ ಜರ್ನಿಯು ಮುಂದುವರೆಯಿತು. ಇವರು ಭರತನಾಟ್ಯವನ್ನು ಗುರುಗಳಾದ ವಿಧುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರ ಜೊತೆ ಕಲಿಯುತಿದಾರೆ.ಮಂಗಳೂರಿನ ರಿಯಾಲಿಟಿ ಶೋಗಳಾದ ಡಾನ್ಸ್ ಕುಡ್ಲ ಡಾನ್ಸ್,ಡಾನ್ಸ್ ಟು ಡಾನ್ಸ್ ಹಾಗೂ ಕುಡ್ಲ ಗೊಟ್ ಟ್ಯಾಲೆಂಟ್ ರಿಯಾಲಿಟಿ ಷೋಗಳಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ ಜೀ ಕನ್ನಡದಲ್ಲಿ ನಡೆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲೂ ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ. ವಾಯ್ಸ್ ಆಫ್ ಆರಾಧನಾ ಹಾಗೂ ಜನಸ್ಪಂದನ ಟ್ರಸ್ಟ್ ಸಂಸ್ಥೆಗಳ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ನೃತ್ಯ ಪ್ರದರ್ಶನವನ್ನು ನೀಡುತ್ತಿದ್ದಾರೆ ಹಾಗೂ ವಾಯ್ಸ್ ಒಫ್ ಆರಾಧನ ಸಂಸ್ಥೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಎಲ್ಲ ಜನರ ಮೆಚ್ಚುಗೆಯನ್ನು ಗಳಿಸಿರುತ್ತಾರೆ ಹಾಗೂ ಹಲವಾರು ನೃತ್ಯ ಕಾಂಪಿಟೇಶನ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಹಾಗೂ ಹಲವಾರು ಆನ್ಲೈನ್ ನೃತ್ಯ ಕಾಂಪಿಟೇಷನ್ಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿರುತಾರೆ ಹಾಗೂ ಹಲವಾರು ಕಡೆ ಫ್ಯಾಷನ್ ಶೋ ಗಳಲ್ಲೂ ಭಾಗವಹಿಸಿ ಬ್ರಾಂಡ್ ಅಂಬಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ನಮ್ಮ ಕುಡ್ಲ ಚಾನೆಲ್, ನಮ್ಮ ಟಿವಿ ಚಾನೆಲ್ ಡೈಜಿವರ್ಲ್ಡ್, ಕಹಳೆ ನ್ಯೂಸ್ ವಾಹಿನಿಯಲ್ಲಿ ಸಂಧರ್ಶನವನ್ನು ನೀಡಿದ್ದಾರೆ. ಹಾಗೂ ಕೊರೋನ ಸಮಯದಲ್ಲಿ “ರಾಜ್ಯಾಧ್ಯತ ಶಾಲೆಗಳು ಓಪನ್” ಎನ್ನುವ ನಮ್ಮ ಟಿವಿ ಚಾನೆಲ್ನ “ಜನದ್ವನಿ ಕಾರ್ಯಕ್ರಮದ ಚರ್ಚೆಯಲ್ಲೂ ಬಾಗವಹಿಸಿರುತಾರೆ ಹಾಗೂ ಸ್ಪಂಧನ ಚಾನೆಲ್, ಚಾನೆಲ್ 9 ರಲ್ಲೂ ನೃತ್ಯ ಪ್ರಧಾರ್ಶನವನ್ನು ನೀಡಿರುತ್ತಾರೆ ಇವರು 2 ತುಳು ಚಲನಚಿತ್ರ ಮತ್ತು ಕಿರುಚಿತ್ರ ಹಾಗೂ ಹಲವಾರು ಆಲ್ಬಮ್ ಸೊಂಗ್ ಗಳಲ್ಲಿ ನಟಿಸಿದಾರೆ ಇವರು ಕಬಡ್ಡಿಯಲ್ಲಿ ತಾಲೂಕು ಮಟ್ಟ, ರಾಜ್ಯ ಮಟ್ಟ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎಸ್ ಜಿ ಎಫ್ ಐ ಗೆ ಆಯ್ಕೆಯಾಗಿದ್ದಾರೆ ಅಷ್ಟೇ ಅಲ್ಲದೆ 200 ಕಿಂತಲೂ ಹೆಚ್ಚಿನ ವೀಧಿಕೆಗಳಲ್ಲಿ ನಿರೂಪಣೆಯನ್ನು ಮಾಡಿರುತ್ತಾರೆ ಹಾಗೂ ಅಭಿಮತ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಭಾ ಲೋಕ ಹಾಗೂ ಪ್ರತಿಭಾ ಚುಕ್ಕಿ ಕಾರ್ಯಕ್ರಮದಲ್ಲಿ ಸತತವಾಗಿ ನಿರೂಪಣೆ ಮಾಡುತಿದ್ದಾರೆ ಇವರ ನೃತ್ಯ ಅಭಿನಯ ಕ್ರೀಡೆ ನಿರೂಪಣೆಯಲ್ಲಿ ವಿಶೇಷ ಸಾಧನೆಗಾಗಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಬಾಲರತ್ನ ಪ್ರಶಸ್ತಿ, ಕರ್ನಾಟಕ ಕಲಾಸಿರಿ ರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನಾಟ್ಯ ಶಾಂತಲೆ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಾಹುಮುಖ ಪ್ರತಿಭಾ ರತ್ನ ಪ್ರಶಸ್ತಿ ಹಾಗೂ ಎಸ್ ಎಸ್ ಕಲಾ ಸಂಗಮ ಬೆಂಗಳೂರು ಇವರು ಇವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಕನ್ನಡ ರಾಜ್ಯರತ್ನ ಸವಿ ನೆನಪಿಗಾಗಿ 2022 ರ ಯುವರತ್ನ ಅಪ್ಪು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ ಹಾಗೂ 50 ಕಿಂತಲೂ ಹೆಚ್ಚಿನ ಕಡೆಗಳಲ್ಲಿ ಇವರ ಪ್ರತಿಭೆಯನ್ನು ನೋಡಿ ಸನ್ಮಾನಿಸಿದ್ದಾರೆ ಹೀಗೆಯೇ ಕು|ಶ್ರೇಯಾ ಮೇರ್ಕಜೆ ಸುಳ್ಯ ಇವರಿಗೆ ಇನ್ನಷ್ಟು ಸಾಧನೆ ಮಾಡಿ ಉನ್ನತ ಶಿಖರಕ್ಕೆ ಏರುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸುತ್ತೇವೆ
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…