ಜನ ಮನದ ನಾಡಿ ಮಿಡಿತ

Advertisement

ಹಿರಿಯ ನೃತ್ಯಗುರು ಕಮಲ ಭಟ್ ವಿಧಿ ವಶ

ಮಂಗಳೂರು: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ವಿಧುಷಿ ಕಮಲಾ ಭಟ್ (7೦) ಅವರು ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ.


ನಾಟ್ಯಾಲಯ ಊರ್ವ ಸಂಸ್ಥೆಯ ನಿರ್ದೇಶಕರಾಗಿದ್ದ ಕಮಲಾಭಟ್ ಅವರು ಸುಮಾರು ೪೫ ವರ್ಷಗಳಿಂದ ನೃತ್ಯ ಸೇವೆಯಲ್ಲಿ ತೊಡಗಿದ್ದರು.
ಕರ್ನಾಟಕ ಕಲಾಶ್ರೀ, ಪೇಜಾವರ ಶ್ರೀ ವಿಶ್ವೇಶ್ವರ ಶ್ರೀಪಾದರಿಂದ ಶ್ರೀ ರಾಮ ವಿಠಲ ಪುರಸ್ಕಾರ, ಶೃಂಗೇರಿ ಸಂಸ್ಥಾನದಿಂದ ಸನ್ಮಾನ, ಕಲ್ಕೂರ ಪ್ರತಿಷ್ಠಾನದಿಂದ ರಾಜ್ಯೋತ್ಸವ ಗೌರವ ಪುರಸ್ಕಾರ, ಬಿಲ್ಲವ ಸಂಘ ಅಶೋಕನಗರ ಸಂಘಟನೆಯಿಂದ ಪುರಸ್ಕಾರ, ನಾಟ್ಯಕಲಾನಿಧಿ, ನಾಟ್ಯಕಲಾ ಸಂಪನ್ನೇ, ನಾಟ್ಯ ವಿಶಾರದೆ, ರೋಟರಿ ಲಯನ್ ಸಂಸ್ಥೆಗಳಿಂದ ಪುರಸ್ಕಾರಗಳು, ಸಾರ್ವಜನಿಕವಾಗಿ ಜೀವಮಾನ ಸಾಧನೆಗಾಗಿ ’ಸಾರ್ಥಕ ’ ಗೌರವ ಸನ್ಮಾನ. ಮೊದಲಾದ ಗೌರವ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದರು. ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ, ನೃತ್ಯ ಸುಧಾ ಮೇರಿಹಿಲ್, ಚಿಗುರು ನೃತ್ಯ ಸಂಸ್ಥೆ ಬೆಂಗಳೂರು ಸಂಸ್ಥೆಗಳ ಮಾರ್ಗದರ್ಶಕರಾಗಿದ್ದರು.
ನಾಟ್ಯಕಲೆಯ ಪಾವಿತ್ರ್ಯತೆಯನ್ನು ಕರಗತಗೊಳಿಸುತ್ತಾ ನಾವಿನ್ಯತೆಗಳನ್ನು ಸೃಷ್ಟಿಸಿದ ನೃತ್ಯ ಕ್ಷೇತ್ರದ ಅಜಾತ ಶತ್ರು ನೃತ್ಯ ಗುರುವಾಗಿದ್ದ ಕಮಲ ಭಟ್ ಆಗಲಿಕಗೆ ಗಣ್ಯೆರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಗ ಸೇರಿದಂತೆ ಅಪಾರ ಶಿಷ್ಯವರ್ಗವನ್ನು ಅವರು ಆಗಲಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!