ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್‌ಶಾ ಸದನದಲ್ಲಿ 75ನೇ ಸಂವಿದಾನ ಸಂಭ್ರಮದ ವಿಷಯವಾಗಿ 18ನೇ ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುವ ವೇಳೆ ವಿಶ್ವಜ್ಞಾನಿ ಸಂವಿದಾನ ಶಿಲ್ಪಿ ‘ಡಾ. ಬಿ.ಆರ್.ಅಂಬೇಡ್ಕರ್’ ರವರ ಬಗ್ಗೆ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಬಾಬಾ ಸಾಬೇಬ್ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ವ್ಯಂಗ್ಯವಾಗಿ ಉಚ್ಚರಿಸುತ್ತಾ ಬಾಬಾ ಬಾಹೇಬರಿಗೆ ಅಪಮಾನ ಮಾಡಿ ಅವರ ಮನುಸ್ಮೃತಿಯನ್ನು ಬಹಿರಂಗಪಡಿಸುತ್ತಾ ಅವಹೇಳನ ಮಾಡಿರುತ್ತಾರೆ. ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಈರಯ್ಯನವರು ಮಾತನಾಡಿ ಅಮಿತ್ ಷಾ ರವರ ಫೋಟೋಕೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿ.ತಾಲೂಕು ದಂಡಾಧಿಕಾರಿಯಾದ ನಿಸರ್ಗ ಪ್ರಿಯ ರವರಿಗೆ ಮನವಿ ಸಲ್ಲಿಸಿದರು.

ಬಿ.ಜೆ.ಪಿ ಯ ಮತ್ತು ಆರ್.ಎಸ್.ಎಸ್ ನ ಗುಪ್ತಕಾರ್ಯಶೂಚಿಯನ್ನು ಈ ಮೂಲಕ ಅನುಷ್ಠಾನಗೊಳಿಸುವ ಅಮಿತ್‌ಶಾ ಬಯಕೆಯನ್ನು ನಿರೀಕ್ಷೆಯಂತೆಯೇ ಬಹಿರಂಗ ಪಡಿಸಿದ್ದಾರೆ. ಅಂಬೇಡ್ಕರ್ ಎಂದು ಹೇಳುವುದೇ ವೆಶನವೆಂದರೆ ಸಂಸತ್ತಿನ ಪ್ರವೇಶಕ್ಕೆ ಸಂವಿದಾನವೇ ಆಧಾರವಾಗಿರುತ್ತದೆ. ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶವೇ ಇಲ್ಲದಂತಾಗುತ್ತಿತ್ತು. ಸಂವಿಧಾನದ ಆಸಯದಂತೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಚುಕ್ಕಾಣಿ ಹಿಡಿದಿರುವ ತಾವು ಸಂವಿದಾನ ಕತೃ ಅಂಬೇಡ್ಕರವರನ್ನೇ ದ್ವೇಸಿಸುವುದಾದರೆ ನಿಮ್ಮ ಮನದಾಳದ ಮತ್ತು ನಿಜವಾದ ಉದ್ದೇಶ ಮನು ಸಂಸ್ಕೃತಿಯನ್ನು ಜಾರಿಗೊಳಿಸಲು ಹೊರಟಿರುವುದು ನಿಮ್ಮ ಹುನ್ನಾರವೇ?.
ಆದ್ದರಿಂದ ಸಂವಿದಾನ ವಿರೋದಿ, ದಲಿತ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿಯಾದ ನೀವು ಸಚಿವರಾಗಿ ಮುಂದುವರೆಯಲು ನೈತಿಕತೆ ಹೊಂದಿರುವುದಿಲ್ಲ. ಕೂಡಲೆ ತಾವು ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತು ಈತನನ್ನು ಕೇಂದ್ರ ಸಂಸತ್ತು ಸದಸ್ಯತ್ವದಿಂದ ವಜಾಗೊಳಿಸಿ ಈ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕೆಂದು ಪಿರಿಯಾಪಟ್ಟಣ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆಯ ಮೂಲಕ ಒತ್ತಾಯಿಸುತಿದ್ದೇವೆ.



