ಜನ ಮನದ ನಾಡಿ ಮಿಡಿತ

Advertisement

ದೇಶದ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವರಾದ ಅಮಿತ್‌ಶಾ ಸದನದಲ್ಲಿ 75ನೇ ಸಂವಿದಾನ ಸಂಭ್ರಮದ ವಿಷಯವಾಗಿ 18ನೇ ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ಮಾತನಾಡುವ ವೇಳೆ ವಿಶ್ವಜ್ಞಾನಿ ಸಂವಿದಾನ ಶಿಲ್ಪಿ ‘ಡಾ. ಬಿ.ಆರ್.ಅಂಬೇಡ್ಕರ್’ ರವರ ಬಗ್ಗೆ ವಿರೋಧ ಪಕ್ಷಗಳನ್ನು ಉದ್ದೇಶಿಸಿ ಬಾಬಾ ಸಾಬೇಬ್ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ವ್ಯಂಗ್ಯವಾಗಿ ಉಚ್ಚರಿಸುತ್ತಾ ಬಾಬಾ ಬಾಹೇಬರಿಗೆ ಅಪಮಾನ ಮಾಡಿ ಅವರ ಮನುಸ್ಮೃತಿಯನ್ನು ಬಹಿರಂಗಪಡಿಸುತ್ತಾ ಅವಹೇಳನ ಮಾಡಿರುತ್ತಾರೆ. ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಈರಯ್ಯನವರು ಮಾತನಾಡಿ ಅಮಿತ್ ಷಾ ರವರ ಫೋಟೋಕೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿ.ತಾಲೂಕು ದಂಡಾಧಿಕಾರಿಯಾದ ನಿಸರ್ಗ ಪ್ರಿಯ ರವರಿಗೆ ಮನವಿ ಸಲ್ಲಿಸಿದರು.

 

ಬಿ.ಜೆ.ಪಿ ಯ ಮತ್ತು ಆರ್.ಎಸ್.ಎಸ್ ನ ಗುಪ್ತಕಾರ್ಯಶೂಚಿಯನ್ನು ಈ ಮೂಲಕ ಅನುಷ್ಠಾನಗೊಳಿಸುವ ಅಮಿತ್‌ಶಾ ಬಯಕೆಯನ್ನು ನಿರೀಕ್ಷೆಯಂತೆಯೇ ಬಹಿರಂಗ ಪಡಿಸಿದ್ದಾರೆ. ಅಂಬೇಡ್ಕರ್ ಎಂದು ಹೇಳುವುದೇ ವೆಶನವೆಂದರೆ ಸಂಸತ್ತಿನ ಪ್ರವೇಶಕ್ಕೆ ಸಂವಿದಾನವೇ ಆಧಾರವಾಗಿರುತ್ತದೆ. ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶವೇ ಇಲ್ಲದಂತಾಗುತ್ತಿತ್ತು. ಸಂವಿಧಾನದ ಆಸಯದಂತೆ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ಚುಕ್ಕಾಣಿ ಹಿಡಿದಿರುವ ತಾವು ಸಂವಿದಾನ ಕತೃ ಅಂಬೇಡ್ಕ‌ರವರನ್ನೇ ದ್ವೇಸಿಸುವುದಾದರೆ ನಿಮ್ಮ ಮನದಾಳದ ಮತ್ತು ನಿಜವಾದ ಉದ್ದೇಶ ಮನು ಸಂಸ್ಕೃತಿಯನ್ನು ಜಾರಿಗೊಳಿಸಲು ಹೊರಟಿರುವುದು ನಿಮ್ಮ ಹುನ್ನಾರವೇ?.

ಆದ್ದರಿಂದ ಸಂವಿದಾನ ವಿರೋದಿ, ದಲಿತ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿಯಾದ ನೀವು ಸಚಿವರಾಗಿ ಮುಂದುವರೆಯಲು ನೈತಿಕತೆ ಹೊಂದಿರುವುದಿಲ್ಲ. ಕೂಡಲೆ ತಾವು ಕೇಂದ್ರ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತು ಈತನನ್ನು ಕೇಂದ್ರ ಸಂಸತ್ತು ಸದಸ್ಯತ್ವದಿಂದ ವಜಾಗೊಳಿಸಿ ಈ ದೇಶದ ಜನತೆ ಮುಂದೆ ಕ್ಷಮೆಯಾಚಿಸಬೇಕೆಂದು ಪಿರಿಯಾಪಟ್ಟಣ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟವು ಪ್ರತಿಭಟನೆಯ ಮೂಲಕ ಒತ್ತಾಯಿಸುತಿದ್ದೇವೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!