ಸುಬ್ರಹ್ಮಣ್ಯ ಜ.12.: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡುಗಲ್ಲಿನ ವಿಕಲಚೇತನ ಮಹಿಳೆ ಮೀನಾಕ್ಷಿ ಅವರಿಗೆ ಮನೆ ನಿರ್ಮಿಸಲು ಧನಸಹಾಯವನ್ನು ಶನಿವಾರ ರೋಟರಿ ಜಿಲ್ಲಾ3181 ಇದರ ನಿಕಟ ಪೂರ್ವ ಡಿಸ್ಟ್ರಿಕ್ಟ್ ಗವರ್ನರ್ ಎಚ್.ಆರ್. ಕೇಶವ ಅವರು ಹಸ್ತಾಂತರಿಸಿದರು.
ಪಂಜ ಸಮೀಪದ ಪಲ್ಲೋಡಿ ಎಂಬಲ್ಲಿ ಮೀನಾಕ್ಷಿ ಅವರು ಸುಬ್ರಹ್ಮಣ್ಯದ ಧಣಿವರಿಯದ ನಾಯಕ ಪ್ರಶಸ್ತಿ ಪುರಸ್ಕೃತ ಡಾ. ರವಿ ಕಕ್ಕೆ ಪದವು ಅವರ ವಿಶೇಷ ಮುತುವರ್ಜಿ ಹಾಗೂ ಸಹಾಯದಿಂದ ಗ್ರಾಮ ಪಂಚಾಯತಿ ಪಂಜ ,ದಾನಿಗಳು, ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಸ್ವಂತ ವಾಸದ ಮನೆಯನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಮನೆಯ ಬಹುತೇಕ ಕೆಲಸ ಕಾರ್ಯಗಳು ಆಗಿದ್ದು ಇನ್ನೂ ಪೂರ್ಣಗೊಳ್ಳಲು ದಾನಿಗಳಿಂದ ಸಹಾಯಧನದ ಅಗತ್ಯವಿತ್ತು .ಆ ನಿಟ್ಟಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನವರು ಈಗಾಗಲೇ ಮನೆ ನಿರ್ಮಿಸಲು ಬೇಕಾದ ಸಿಮೆಂಟ್, ಬಾಗಿಲು, ಕಿಟಕಿ ಹೀಗೆ ಸುಮಾರು ಐವತ್ತು ಸಾವಿರ ರೂಪಾಯಿಗಳ ವಸ್ತುಗಳನ್ನು ನೀಡಿದ್ದು ಶನಿವಾರ ರೋಟರಿ ಜಿಲ್ಲಾ3181 ನಿಕಟ ಪೂರ್ವ ಗವರ್ನರ್ ಅವರ ಮೂಲಕ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ,ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಪೂರ್ವ ಅಧ್ಯಕ್ಷರುಗಳಾದ ಸೀತಾರಾಮ ಎಣ್ಣೆ ಮಜಲ್, ವಿಜಯಕುಮಾರ , ಹಿರಿಯ ಸದಸ್ಯ ಸುದರ್ಶನ ಶೆಟ್ಟಿ, ಸದಸ್ಯ ಸಲೀಂ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಡಾ. ರವಿ ಕಕ್ಕೆ ಪದವು, ಮತ್ತು ಮೀನಾಕ್ಷಿ ಹಾಗು ಅವರ ಮಗ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರವಿಕಕ್ಕೆ ಪದವು ಅವರನ್ನು ಜಿಲ್ಲಾ ಗವರ್ನರ್ ಅವರು ಶಾಲು ಹೊಂದಿಸಿ ಗೌರವಿಸಿದರು. ಮನೆ ಪೂರ್ಣಗೊಳ್ಳಲು ಇನ್ನಷ್ಟು ಹಣದ ಅವಶ್ಯಕತೆ ಇದ್ದು ದಾನಿಗಳು ಸಹಾಯ ಮಾಡುವಂತೆ ಮೀನಾಕ್ಷಿ ಅವರು ಕೋರಿರುತ್ತಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…