ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ 28ನೇ ವಾರ್ಡಿನ ಉರ್ವ ಮಾರ್ಕೆಟ್ ಹತ್ತಿರದ ನಾರಾಯಣ ಗುರು ಮಂದಿರದ ಬಳಿ ಶಾಸಕರ ವಿಶೇಷ ಅನುದಾನದಲ್ಲಿ ನಿರ್ಮಾಣವಾದ ಪ್ರವಾಸಿ ಕಾರು ತಂಗುದಾಣದ ಮೇಲ್ಛಾವಣಿಯನ್ನು ಶಾಸಕ ವೇದವ್ಯಾಸ ಕಾಮತ್ ರವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಪ್ರವಾಸಿ ಕಾರು ಚಾಲುಕರದ್ದು ನಿರಂತರ ಪಯಣದ ಬದುಕು. ತಮ್ಮ ಬಳಿ ಬಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಊರು-ಮನೆ ತಲುಪಿಸುವುದೇ ಅವರ ಜವಾಬ್ದಾರಿಯುತ ಕಾಯಕ. ದಿನನಿತ್ಯದ ಬಹುಪಾಲು ಮನೆಯಿಂದ ಹೊರಗೆಯೇ ಕಳೆಯುವ ಅವರುಗಳಿಗೆ ಬಿಡುವಿನ ವೇಳೆಯಲ್ಲಿ ದಣಿವಾರಿಸಿಕೊಳ್ಳಲು ಇಂತಹ ಸುಸಜ್ಜಿತ ತಂಗುದಾಣಗಳಿದ್ದರೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮ.ನ.ಪಾ ಸದಸ್ಯರುಗಳಾದ ಸಂಧ್ಯಾ ಆಚಾರ್ಯ, ಗಣೇಶ್ ಕುಲಾಲ್, ಪೂರ್ಣಿಮಾ, ಮತ್ತು ಮೋಹನ್ ಪೂಜಾರಿ, ರಾಧಾಕೃಷ್ಣ, ಮೋಹನ್ ಆಚಾರ್, ಶೇಖರ್, ಜಿತೇಶ್, ಗಣೇಶ್ ಸಾಲ್ಯಾನ್, ಮನೋಹರ್, ಹರೀಶ್, ರಾಜೇಶ್, ಆನಂದ ರೈ, ಪ್ರೀತಮ್, ಪ್ರಕಾಶ್, ರಘುನಾಥ ಪ್ರಭು, ಗುರು ಚರಣ್, ವಿಶು ಕುಮಾರ್, ಪ್ರಜೀತ್, ಕಿಶೋರ್, ಪ್ರಸಾದ್, ಮುರಳಿ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…