ಜಿಲ್ಲೆಯ ಮುಖ್ಯ ಪೇಟೆಯಾದ ಕಾಸರಗೋಡಿನಲ್ಲಿ ಈ ಹಿಂದೆಲ್ಲ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಶಾಲಾ ಹಾಗೂ ಕಚೇರಿ ಸಮಯ ಮಾತ್ರ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆ ಇದೀಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮೇಲ್ಸೆತುವೆ ಕೆಲಸಗಳು ಪ್ರಗತಿಯಲ್ಲಿರುವುದರಿಂದ ನಿತ್ಯವೂ ನರಕ ಸದಶ್ಯವಾಗಿ ಗೋಚರಿಸುತ್ತದೆ. ಹೆಚ್ಚಿನ ಎಲ್ಲಾ ಸಮಯದಲ್ಲೂ ವಾಹನಗಳಿಂದ ಗಿಜಿಗಿಡುತ್ತಿದ್ದ ಮುಖ್ಯ ರಸ್ತೆಯಲ್ಲಿ ಇದೀಗ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಕಾಸರಗೋಡಿನಿಂದ ಅತ್ತ ಕಣ್ಣೂರಿಗೆ ತೆರಳುವ ಚೆರ್ಕಳ ವರೆಗೆ ಇತ್ತ ಕುಂಬಳೆ ಮಂಗಳೂರು ರಸ್ತೆಯ ಮೊಗ್ರಾಲ್ ನವರೆಗೆ ಟ್ರಾಫಿಕ್ ಜಾಮ್ ಆಗುವುದರಿಂದ ವಾಹನ ಪ್ರಯಾಣಿಕರು ಸಂದಿಗ್ದತೆಯಲ್ಲಿ ಸಿಲುಕಿ ಹಾಕಿಕೊಳ್ಳುವುದು ಇಲ್ಲಿ ದಿನ ನಿತ್ಯದ ಸಮಸ್ಯೆಯಾಗಿದೆ. ರಸ್ತೆಯ ಸಂಚಾರ ಸ್ಥಿತಿಗಳನ್ನು ಹಲವೆಡೆಗಳಲ್ಲಿ ಬದಲಾಗಿಸಲಾಗಿದ್ದು ದೂರದಿಂದ ಬರುವ ಘನ ವಾಹನಗಳಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ, ಈ ನಡುವೆ ರಿಕ್ಷಾ ಕಾರಿನಂತಹ ಬಾಡಿಗೆ ವಾಹನಗಳು ಟ್ರಾಫಿಕ್ ಜಾಮ್ ನಿಂದಾಗಿ ಬಾಡಿಗೆ ಕಳೆದುಕೊಳ್ಳುವ ಪರಿಸ್ಥಿತಿಯೂ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಎಂಬ ಕಾರಣಕ್ಕೆ ಈ ದಾರಿಯಿಂದಾಗಿ ದೂರದ ಊರಿಗೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಟ್ರಾಫಿಕ್ ನೊಳಗಡೆ ಗೋಳಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿದೆ. ಮಂಗಳೂರಿಗೆ ಸಂಚರಿಸುವ ಅಂತರಾಜ್ಯ ಬಸ್ಸುಗಳಿಗೆ ಈ ಟ್ರಾಫಿಕ್ ಜಾಮ್ ನಿಂದಾಗಿ ಗಂಟೆಗಳಷ್ಟು ವ್ಯತವ್ಯಯ ಉಂಟಾಗುತ್ತಿರುವುದಾಗಿ ಬಸ್ ಚಾಲಕರು ನಿರ್ವಾಹಕರು ತಿಳಿಸಿದ್ದಾರೆ.ಇದೀಗ ಮಳೆಗಾಳವಾದ್ದರಿಂದ ಕಾಮಗಾರಿ ನಡೆಯುವ ಹಲವೆಡೆ ದೊಡ್ಡ ದೊಡ್ಡ ಹೊಂಡಗಳುಂಟಾಗಿದ್ದು ವಾಹನಗಳು ಇದಕ್ಕೆ ಇಳಿದು ಅಪಾಯ ಸಂಭವಿಸುದರ ಬಗ್ಗೆಯೂ ವರದಿಯಾಗಿದೆ. ಶೀಘ್ರವೇ ಮೇಲ್ಸೆತುವೆ ಕಾಮಗಾರಿ ಪೂರ್ತಿಗೊಳಿಸಿ ಸಂಚಾರ ಸುಗಮಗೊಳಿಸಬೇಕೆಂದು ಒಕ್ಕೊರಲಿನ ಒತ್ತಾಯ ಕೇಳಿ ಬರುತ್ತಿದೆ.





