ಮತ್ತೆ ಸದ್ದು ಮಾಡಿದ ವಕ್ಫ್ ವಿವಾದ

ಮಂಗಳೂರು : ನಗರದ ಕೆನರಾ ಸ್ಕೂಲ್ ಸ್ಥಳ ವಕ್ಪ್ ಆಸ್ತಿಯದ್ದಾಗಿದೆ. ಕಚ್ಚಿ ಮೆಮನ್ ಮಸೀದಿ ವಕ್ಪ್ ಜಾಗ ಇದಾಗಿದ್ದು, ಈ ಜಾಗವನ್ನು 100 ವರ್ಷಗಳ ಅವಧಿಗೆ ಲೀಝ್‍ಗೆ ನೀಡಲಾಗುತಿತ್ತು. ಈ ಭೂಮಿಗೆ ವಾರ್ಷಿಕವಾಗಿ ಮೂರು ರೂಪಾಯಿ ಬಾಡಿಗೆ ವಕ್ಪ್ ಗೆ ನೀಡಲಾಗುತ್ತಿತ್ತು.ಆದ್ರೆ ಕಳೆದ 12 ವರ್ಷಗಳ ಹಿಂದೆ ಈ ಬಾಡಿಗೆ ಹಣ ನೀಡುತ್ತಿಲ್ಲ. ಈ ಭೂಮಿಯನ್ನು ಮುವಲ್ಲಿ ಮಾರಾಟ ಮಾಡಿದ್ದಾರೆ ಎಂಬುದು ತಿಳಿದಿತ್ತು.
ಅವ್ರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದ್ರೆ ಈಗಾ ಈ ಭೂಮಿ ಬಗ್ಗೆ ವಕ್ಪ್ ಇಲಾಖೆ ಧ್ವನಿ ಎತ್ತಿದ್ರೆ ಏನಾಗಬಹುದು… ಎಂದು ಮಂಗಳೂರಿನಲ್ಲಿ ವಕ್ಪ್ ಮಾಜಿ ಅಧ್ಯಕ್ಷ ಎನ್ ಕೆ ಎಂ ಶಾಫಿ ಸಾದಿ ಬೆಂಗಳೂರು ಪ್ರಶ್ನಿಸಿದ್ದಾರೆ.



