ಯುವತಿಗೆ ಅಶ್ಲೀಲ ಸಂದೇಶ, ಕೊಲೆ ಬೆದರಿಕೆ: ಆಸಿಫ್ ವಿರುದ್ಧ ದೂರು ದಾಖಲು
ಪಡುಬಿದ್ರಿ : ಬಡಾ ಗ್ರಾಮದ 21 ವರ್ಷದ ಯುವತಿಯ ಇನ್ಸ್ಟಾ ಗ್ರಾಂ ಖಾತೆಗೆ ಬಡಾ ಗ್ರಾಮದ ನಿವಾಸಿ ಆಸಿಫ್ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿ ಆಕೆಯನ್ನು ತನ್ನೊಂದಿಗೆ ಬರಹೇಳಿದ್ದಲ್ಲದೆ ಮಾ. 7ರಂದು ಕಾರಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಯುವತಿಯ ಕೈಹಿಡಿದೆಳೆದು ಆಕೆಯ ಮೊಬೈಲನ್ನು ಕಸಿದು ನೆಲಕ್ಕೆಸೆದು ಒಡೆದುಹಾಕಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಯನ್ನು ಮನೆ ಎದುರಿನ ಬಯಲಲ್ಲಿ ನಿಂತು ನೋಡುತ್ತಿದ್ದ ನಾಜಿಮ್ ಅವರ ಬಳಿಗೆ ತೆರಳಿದ ಆರೋಪಿ ಆಸಿಫ್ ಅವರನ್ನು ಬೆದರಿಸಿದ್ದ. ಆಗ ಆತನ ಕೈಯಲ್ಲಿದ್ದ ಚೂರಿಯನ್ನು ನಾಜಿಮ್ ಕಸಿದುಕೊಳ್ಳಲು ಯತ್ನಿಸಿದ್ದು, ಆಸೀಫ್‌ನ ಹಣೆಯ ಬಳಿ ಗಾಯವಾಗಿದೆ. ಅದೇ ವೇಳೆಗೆ ಆತನ ತಮ್ಮ ಆರಿಫ್ ಅಲ್ಲಿಗೆ ಓಡಿ ಬಂದು ಆಯಿಷಾ ಮತ್ತು ಅವರ ಇಬ್ಬರು ತಮ್ಮಂದಿರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿದೂರು ಕೂಡ ದಾಖಲಾಗಿದೆ.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…