ಜನ ಮನದ ನಾಡಿ ಮಿಡಿತ

Advertisement

ಯುವತಿಗೆ ಅಶ್ಲೀಲ ಸಂದೇಶ, ಕೊಲೆ ಬೆದರಿಕೆ: ಆಸಿಫ್‌ ವಿರುದ್ಧ ದೂರು ದಾಖಲು

ಯುವತಿಗೆ ಅಶ್ಲೀಲ ಸಂದೇಶ, ಕೊಲೆ ಬೆದರಿಕೆ: ಆಸಿಫ್‌ ವಿರುದ್ಧ ದೂರು ದಾಖಲು

ಪಡುಬಿದ್ರಿ : ಬಡಾ ಗ್ರಾಮದ 21 ವರ್ಷದ ಯುವತಿಯ ಇನ್ಸ್ಟಾ ಗ್ರಾಂ ಖಾತೆಗೆ ಬಡಾ ಗ್ರಾಮದ ನಿವಾಸಿ ಆಸಿಫ್‌ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿ ಆಕೆಯನ್ನು ತನ್ನೊಂದಿಗೆ ಬರಹೇಳಿದ್ದಲ್ಲದೆ ಮಾ. 7ರಂದು ಕಾರಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಯುವತಿಯ ಕೈಹಿಡಿದೆಳೆದು ಆಕೆಯ ಮೊಬೈಲನ್ನು ಕಸಿದು ನೆಲಕ್ಕೆಸೆದು ಒಡೆದುಹಾಕಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಘಟನೆಯನ್ನು ಮನೆ ಎದುರಿನ ಬಯಲಲ್ಲಿ ನಿಂತು ನೋಡುತ್ತಿದ್ದ ನಾಜಿಮ್‌ ಅವರ ಬಳಿಗೆ ತೆರಳಿದ ಆರೋಪಿ ಆಸಿಫ್‌ ಅವರನ್ನು ಬೆದರಿಸಿದ್ದ. ಆಗ ಆತನ ಕೈಯಲ್ಲಿದ್ದ ಚೂರಿಯನ್ನು ನಾಜಿಮ್‌ ಕಸಿದುಕೊಳ್ಳಲು ಯತ್ನಿಸಿದ್ದು, ಆಸೀಫ್‌ನ ಹಣೆಯ ಬಳಿ ಗಾಯವಾಗಿದೆ. ಅದೇ ವೇಳೆಗೆ ಆತನ ತಮ್ಮ ಆರಿಫ್‌ ಅಲ್ಲಿಗೆ ಓಡಿ ಬಂದು ಆಯಿಷಾ ಮತ್ತು ಅವರ ಇಬ್ಬರು ತಮ್ಮಂದಿರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರತಿದೂರು ಕೂಡ ದಾಖಲಾಗಿದೆ.

 

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!