ಬಂಟ್ವಾಳ; ಶ್ರೀ ನಡಿಯೇಲು ದೈಯ್ಯ೦ಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೆತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲಿನಲ್ಲಿ ಏಪ್ರಿಲ್ 2ಮತ್ತು 3 ರಂದು ನವೀಕೃತ ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಧಿ ಕಾರ್ಯಕ್ರಮಗಳು ನಡೆಯಲಿದೆ
ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕಾರಣಿಕದ ಕ್ಷೇತ್ರ ಶ್ರೀ ನಡಿಯೇಲು ದೈಯ್ಯ೦ಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಮಿತ್ತಮಜಲಿನಲ್ಲಿ ಎಪ್ರಿಲ್ 2 ಮತ್ತು 3 ರಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವೀಕೃತ ಗೋಪುರಗಳ ಲೋಕಾರ್ಪಣೆ ಹಾಗೂ ಸಾನಿಧ್ಯ ಕಲಶಾಧಿ ಕಾರ್ಯಕ್ರಮಗಳು ನಡೆಯಲಿದೆ.
02.04.2025ನೇ ಬುಧವಾರ ಸಂಜೆ 4.30ಕ್ಕೆ ಮಿತ್ತಮಜಲು ದ್ವಾರದಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ. ಸಂಜೆ ಘಂಟೆ 5.30ರಿಂದ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್ ಬೆಂಗಳೂರು ಮತ್ತು ಖ್ಯಾತ ಸಂಗೀತ ನಿರ್ದೇಶಕರಾದ
ಶ್ರೀ ಗುರುಕಿರಣ್ ಇವರ ಉಪಸ್ಥಿತಿಯಲ್ಲಿ ಭಕ್ತಿ ಗಾನ ಸಂಭ್ರಮ ನಡೆಯಲಿದೆ.
ಇನ್ನು ಕಾರ್ಯಕ್ರಮದ ಪೂರ್ವ ಸಿದ್ಧತೆಯ ಸಲುವಾಗಿ ಸಜೀಪ ಮೂಡದ ಬೇಂಕ್ಯದಲ್ಲಿ ಸಭೆಯನ್ನುನಡೆಸಲಾಯಿತು. ಈ ಸಮಯದಲ್ಲಿ ಸಜೀಪಮೂಡದ ಹಲವು ಸಂಘ ಸಂಸ್ಥೆಗಳಿಗೆ ಜವಬ್ದಾರಿಗಳನ್ನು ನೀಡಲಾಯಿತು. ಇನ್ನು ಈ ಸಮಯದಲ್ಲಿ ಜಯಶಂಕರ ಬಾಸ್ರಿತ್ತಾಯ, ಮಾಗಣೆ ತಂತ್ರಿಗಳಾದ ಎಮ್ ಸುಬ್ರಹ್ಮಣ್ಯ ಭಟ್ , ಶ್ರೀಕಾಂತ್ ಶೆಟ್ಟಿ ಸಂಕೇಶ, ಗಿರೀಶ್ ಕುಮಾರ್ ಪೆರ್ವ, ಕಿಶೋರ್ ಅಗರಿ, ಪುಷ್ಪ ರಮೇಶ್ ಪೆರ್ವ
ಜಯರಾಮ ಪೆರ್ವ, ಶ್ರೀ ದೇವಿಪ್ರಸಾದ್ ಪೂಂಜ, ಶಿವಪ್ರಸಾದ್ ಶೆಟ್ಟಿ ಹಾಗೂ ಚಂದ್ರಹಾಸ್ ಪೂಜಾರಿ ,ಪ್ರಹ್ಲಾದ್ ಬೇಂಕ್ಯ ಹಾಗೂ ಸರ್ವ ಸದಸ್ಯರೂ ಉಪಸ್ಥಿತರಿದ್ದರು
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…