ಕಾಸರಗೋಡು ಜಿಲ್ಲೆಯ ಮಧೂರು ದೇವಾಲಯ ಪ್ರಾಚೀನ ಪರಂಪರೆ ಮತ್ತು ಐತಿಹಾಸಿಕ ಮಹತ್ವದ ದೇವಾಲಯ. ಅದೀಗ ಜೀರ್ಣೋದ್ಧಾರಗೊಂಡು ಆಧುನಿಕತೆಯ ಸ್ಪರ್ಶ ಪಡೆದಿದೆ.
ಕಾಸರಗೋಡಿನವರೇ ಆದ ಕನ್ಯಾನ ಸದಾಶಿವ ಶೆಟ್ಟಿ ಅವರ ಮುಂದಾಳತ್ವದಲ್ಲಿ ದೇವಾಲಯದ ಗೋಪುರ ನವೀಕೃತಗೊಂಡು ದೇವಾಲಯಕ್ಕೆ ಹೊಸ ಕಳೆ ತಂದಿದೆ. ಮುಂಬಯಿಯಲ್ಲಿ ರಾಸಾಯನಿಕ ಉದ್ಯಮ ಮತ್ತು ಗುಜರಾತಿನಲ್ಲಿ ಔಷಧಿಗಳಲ್ಲಿ ಬಳಸುವ ರಾಸಾಯನಿಕಗಳ ತಯಾರಿಕಾ ಘಟಕಗಳನ್ನು ಹೊಂದಿರುವ ಕನ್ಯಾನ ಸದಾಶಿವ ಶೆಟ್ಟಿ ಅವರ ಉದ್ಯಮ ಸಂಸ್ಥೆಯ ಹೆಸರು ಹೇರಂಭಾ ಇಂಡಸ್ಟ್ರೀಸ್. ಗಣಪತಿಯ ಪರಮ ಭಕ್ತರಾಗಿರುವ ಅವರು ಸುಮಾರು ಒಂದೂವರೆ ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ದೇವಾಲಯದ ಚೆಲುವನ್ನು ಹೆಚ್ಚಿಸುವ ಪ್ರಧಾನ ಗೋಪುರವನ್ನು ನಿರ್ಮಿಸಿ ಮೂಡಪ್ಪ ಪ್ರಿಯ ಮಧೂರು ಗಣಪತಿಗೆ ಸಮರ್ಪಿಸುತ್ತಿದ್ದಾರೆ. ಪಾದುಕಾ ಮೂಲದಿಂದ ನಲವತ್ತು ಅಡಿ ಎತ್ತರವಿರುವ ಈ ಗೋಪುರ ಮೂರು ಅಂತಸ್ತುಗಳನ್ನು ಹೊಂದಿದೆ. ಗೋಪುರವು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದೆ .ಮಧೂರು ದೇವಾಲಯದಲ್ಲಿ ಪೂಜಿಸುವ ಎಲ್ಲಾ ದೇವರ ವಿಗ್ರಹಗಳನ್ನು ಗೋಪುರದಲ್ಲಿ ನೆಲೆಗೊಳಿಸಲಾಗಿದೆ. ಕೃಷ್ಣ ಶಿಲೆಯಲ್ಲಿ ಕೆತ್ತಿದ ಶಿವ, ಗಣಪತಿ, ಪಾರ್ವತಿ ವಿಗ್ರಹಗಳು ಗೋಪುರಕ್ಕೆ ದೈವಿಕ ಕಳೆಯನ್ನು ನೀಡಿವೆ.
ಒಂಭತ್ತು ತಿಂಗಳುಗಳಲ್ಲಿ ಗೋಪುರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಗೋಪುರದ ವಾಸ್ತು ವಿನ್ಯಾಸವನ್ನು ಪ್ರಸಾದ್ ಮುನಿಯಂಗಳ ಅವರು ರೂಪಿಸಿದ್ದರೆ, ಶಿಲಾ ವಿನ್ಯಾಸದ ಹೊಣೆಗಾರಿಕೆ ಬಂಟ್ವಾಳದ ಸದಾಶಿವ ಶೆಣೈ ಅವರದ್ದು. ರಮೇಶ್ ಲಾಯಿಲ ಬೆಳ್ತಂಗಡಿ ಅವರ ನೇತೃತ್ವದ ನುರಿತ ಶಿಲ್ಪಿಗಳ ತಂಡ ಇದನ್ನು ಕಾರ್ಯರೂಪಕ್ಕೆ ತಂದಿದೆ. ವಾಸ್ತು ಜತೆ ದೈವಿಕ ಕಳೆಯ ಸಮ್ಮಿಲನ ಗೋಪುರವನ್ನು ಅಕರಶಃ ರಾಜಗೋಪುರವನ್ನಾಗಿಸಿದೆ. ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಎನ್ನುತ್ತಿದೆ ಅದು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…