ಚಿಕ್ಕ ಪ್ರಾಯದಲ್ಲೇ ಕಲಾ ಆಸಕ್ತಿಯನ್ನು ಬೆಳೆಸಿ, ಕಲಾ ಆರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವವರು ಸುರೇಂದ್ರ ಪೂಜಾರಿ ಮತ್ತು ನಳಿನಿ ದಂಪತಿಗಳ ಪುತ್ರಿ ಸೃಜನಿ ಪೂಜಾರಿ.

ಸೃಜನಿ ಚಿಕ್ಕಂದಿನಿಂದಲೆ ತನ್ನನ್ನು ತಾನು ನಾಟ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಅನೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಕೇವಲ ನಾಟ್ಯದಲ್ಲಿ ಮಾತ್ರ ಪ್ರವೀಣೆ ಆಗದೆ ಬಾಲ್ಯದಿಂದಲೂ ಯೋಗ,ಚೆಸ್,ಪ್ರಬಂಧ ,ಕಥೆ, ಭಾಷಣ ಹೀಗೆ ಕ್ರೀಡಾ ಕ್ಷೇತ್ರ ಮತ್ತು ಬರವಣಿಗೆ ಕ್ಷೇತ್ರದಲ್ಲಿ ತನ್ನನು ತಾನು ತೊಡಗಿಸಿ ಕೊಂಡಿದ್ದಾರೆ. ಜೊತೆಗೆ ಉತ್ತಮವಾದ ಮಾತುಗಾರಿಕೆ ನಿರೂಪಣೆ ಕ್ಷೇತ್ರದತ್ತವಾಲುವಂತೆ ಮಾಡುತ್ತದೆ. ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಸೈ ಎಂದು ಎನಿಸಿಕೊಂಡಿದ್ದಾರೆ.
ಶಾಲಾ ದಿನಗಳಲ್ಲಿ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾಳೆ . ಕೇವಲ ನಾಟ್ಯ , ಆಟ , ಸಾಹಿತ್ಯ ಆಸಕ್ತಿಯ ಜೊತೆಗೆ ಕಲಿಕೆಯಲ್ಲೂ ಈಕೆ ಜಾಣೆಯಾಗಿದ್ದಳು . ಅಲ್ಲದೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ 96 ಶೇಕಡಾ ಅಂಕವನ್ನು ಪಡೆದು .ತನ್ನ ಉಜ್ವಲವಾದ ಕಲಾ ಕಲಿಕೆ ಜರ್ನಿಯೊಂದಿದೆ ಹೆಜ್ಜೆ ಹಾಕ್ತಾ ಇದ್ದಾರೆ . ವಾಯ್ಸ್ ಆಫ್ ಆರಾಧನ ತಂಡದ ಪ್ರತಿಭೆಯಾಗಿದ್ದು , ಈ ತಂಡದ ನೇತೃತ್ವದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಸಿದ್ದಾಳೆ. ಜೊತೆಗೆ ಕರಾವಳಿಯ ಜನಮನದ ನಾಡಿಮಿಡಿತವಾದ ಅಭಿಮತ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಭಾ ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾ ಕೌಶಲ್ಯವನ್ನು ತೋರಿಸಿದ್ದಾರೆ .



