ಮಂಗಳೂರು, ಮಾರ್ಚ್ 23: ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಆರ್ಟ್ಸ್ (ಐಕೆಎಂಎ) ಸಹಯೋಗದೊಂದಿಗೆ ಸಂತ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಎಂಎ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಾರ್ಚ್ 23 ರ ಭಾನುವಾರದಂದು ಜೆಪ್ಪುವಿನ ಸಂವಾದ ಯುವ ಸಂಪನ್ಮೂಲ ಕೇಂದ್ರದಲ್ಲಿ “ದಿ ಪವರ್ ವಿಥಿನ್” ಎಂಬ ಮಹಿಳಾ ಸ್ವರಕ್ಷಣೆಗಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಶ್ರೀ ನಿತಿನ್ ಎನ್ ಸುವರ್ಣ ಅವರು, ಇನ್ಸ್ಟಿಟ್ಯೂಟ್ ಆಫ್ ಕರಾಟೆ & ಮಾರ್ಷಲ್ ಆರ್ಟ್ಸ್ (ಐಕೆಎಂಎ) ಯ ಮುಖ್ಯ ತರಬೇತುದಾರರಾಗಿದ್ದಾರೆ. ಸ್ವರಕ್ಷಣೆ ಒಂದು ಸಹಜ ಭಾವನೆ, ಆದರೆ ಅಗತ್ಯಬರುವಾಗ ಅದನ್ನು ಪ್ರದರ್ಶಿಸಲು ಸಾಕಷ್ಟು ಆತ್ಮವಿಶ್ವಾಸ ಮತ್ತು ಸರಿಯಾದ ಕೌಶಲ್ಯ ಇದ್ದಾಗ ಮಾತ್ರ ಸಾಧ್ಯ ಎಂದು ಅವರು ಹೇಳಿದರು. ಅವರು ತಮ್ಮೊಂದಿಗೆ ಇತರ 3 ಸಂಪನ್ಮೂಲ ವ್ಯಕ್ತಿಗಳಾದ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಪದಕ ವಿಜೇತರಾದ ಕುಮಾರಿ ಅಶ್ನಿ, ಕುಮಾರಿ ಅವ್ನಿ ಮತ್ತು ಕುಮಾರಿ ಜಾನ್ವಿ ಅವರ ಸಹಾಯದಿಂದ ವಿವಿಧ ತಂತ್ರಗಳು ಮತ್ತು ಸ್ವರಕ್ಷಣೆಯ ರೀತಿಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು. ಪಾಲ್ಗೊಂಡಿದ್ದ ಯುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿದರು ಮತ್ತು ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮವು ಅಪಾಯದಲ್ಲಿರುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯವಿರುವ ಕೌಶಲ್ಯಗಳನ್ನು ಹೊರತರಲು ಒಂದು ವೇದಿಕೆಯಂತೆ ಕಾರ್ಯನಿರ್ವಹಿಸಿತು. ಈ ಕಾರ್ಯಕ್ರಮದಲ್ಲಿ ಕೆಲ ಪುರುಷರೂ ಭಾಗವಹಿಸಿದ್ದು, ಮಹಿಳೆಯರಿಗೆ ಜೊತೆ ನಡೆದುಕೊಳ್ಳುವಲ್ಲಿ ಸಮಾನತೆಯ ಅಗತ್ಯದ ಬಗ್ಗೆ ಅವರಿಗೆ ತಿಳುವಳಿಕೆ ನೀಡಲಾಯಿತು. ಕಾರ್ಯಾಗಾರವು ಪ್ರಶ್ನೋತ್ತರದೊಂದಿಗೆ ಕೊನೆಗೊಂಡಿತು, ಭಾಗವಹಿಸಿದವರು ಆತ್ಮರಕ್ಷಣೆಯ ಬಗ್ಗೆ ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಿಕೊಂಡರು.
ಶ್ರೀ ವಿಲ್ಸನ್ ಮತ್ತು ಶ್ರೀಮತಿ ಅಶ್ವಿನಿ ಕಾರ್ಯಕ್ರಮದ ಶಿಕ್ಷಕ ಸಂಚಾಲಕರಾಗಿದ್ದರು ಮತ್ತು ಶ್ರೀ ಕಶ್ಯಪ್ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಸಂಚಾಲಕರಾಗಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…