ಜಮ್ಮು ಕಾಶ್ಮೀರದಲ್ಲಿ ನಡೆದ ಹಿಂದುಗಳ ಹತ್ಯೆಯನ್ನು ಖಂಡಿಸಿ ಭಾನುವಾರ ಅಮ್ಟೂರಿನ ಶ್ರೀಕೃಷ್ಣ ಮಂದಿರದ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಬಿಜೆಪಿ ಅಮ್ಟೂರು ಆಶ್ರಯದಲ್ಲಿ ಸಭೆ ನಡೆಯಿತು. ಪಹಲ್ಗಾಂಮ್ ನಲ್ಲಿ ನಡೆದ ಭೀಕರ ಹತ್ಯೆಯನ್ನು ಖಂಡಿಸಿ ಮತ್ತು ಈ ಹತ್ಯೆಯನ್ನು ಮಾಡಿದ ಜಿಹಾದಿ ಮನಸ್ಥಿತಿಯ ಪಾಪಿ ಪಾಕಿಸ್ತಾನದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಲಾಯಿತು. ಮೃತಪಟ್ಟ ಪ್ರವಾಸಿಗ ಸಹೋದರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಮ್ಟೂರು ಶ್ರೀಕೃಷ್ಣ ಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿಗಾರ್. ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿಕ್ಸೂಚಿ ಭಾಷಣವನ್ನು ಮಾಡಿದ ವಿಶ್ವ ಹಿಂದು ಪರಿಷದ್ ಬಂಟ್ವಾಳ ಅಧ್ಯಕ್ಷ ನ್ಯಾಯವಾದಿ ಪ್ರಸಾದ್ ಕುಮಾರ್ ರೈ, ಕಾಶ್ಮೀರದಲ್ಲಿ ಧರ್ಮದ ಆಧಾರದಲ್ಲಿ ಪ್ರವಾಸಿಗರನ್ನು ಪ್ರತ್ಯೇಕಿಸಿ ಹತ್ಯೆ ಮಾಡಿದ ಪ್ರಕರಣವು ಆತಂಕಕಾರಿಯಾಗಿದ್ದು, ಇದರ ಕುರಿತು ಹಿಂದು ಸಮಾಜ ಜಾಗೃತರಾಗುವ ಅವಶ್ಯಕತೆ ಇದೆ. ನಮ್ಮ ದೇಶದ ಸೌಂದರ್ಯದ ಶಿಖರವನ್ನು ವೀಕ್ಷಿಸಲು ಹೋದವರು ಇಂದು ಶವವಾಗಿ ಮರಳಿದ್ದಾರೆ. ಈ ದೇಶದ ಪ್ರಕೃತಿರಮಣೀಯವಾದ ಪ್ರದೇಶಕ್ಕೆ ಮದುವೆಯಾಗಿ ಹೋದವರು, ಕುಟುಂಬ ಸಮೇತ ಹೋದವರು, ಸಹಜವಾದ ಪ್ರಕೃತಿಯನ್ನು ಆಸ್ವಾದಿಸಲು ಹೋಗಿದ್ದವರನ್ನು ಕೊಲ್ಲಲಾಗಿದೆ ಎಂದರು.
ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಹಿಂದುಗಳು ಇನ್ನು ಜಾಗೃತರಾಗದೇ ಇದ್ದರೆ ಉಳಿಗಾಲವಿಲ್ಲ. ನಮ್ಮ ಹತ್ತಿರವೇ ಸಾವು ಬರುತ್ತಿದೆ ಎಂಬುದನ್ನು ಗಮನಿಸಿಕೊಳ್ಳಬೇಕು. ನಾವು ಒಂದಾಗಿ ಎದುರಿಸುವ ಕಾಲ ಬಂದಿದೆ. ಇಂದು ಯುವಸಮೂಹ ಕ್ರಿಕೆಟ್ ಆಟವಾಡುತ್ತಾ ಕುಳಿತುಕೊಳ್ಳುವುದರ ಬದಲು ಹಿಂದು ಸಮಾಜಕ್ಕೆ ಬಂದಿರುವ ಕಂಟಕದ ಕುರಿತು ಚಿಂತಿಸಿ ಅದನ್ನು ಹೇಗೆ ನಿವಾರಿಸುವುದು ಎಂಬ ಕುರಿತು ಯೋಚಿಸಬೇಕಾಗಿದೆ. ಕಾಶ್ಮೀರದಲ್ಲಿ ನಡೆದ ಘಟನೆ ಅಪಾಯದ ಕರೆಗಂಟೆಯಾಗಿದೆ. ನಮ್ಮ ಸಾವು ನಮ್ಮ ಬಳಿಯೇ ಬಂದಿದೆ. ಕ್ರಿಕೆಟ್ ಪಂದ್ಯಾಟವನ್ನು ಆಡಿ ಕಪ್ ತೆಗೆದುಕೊಂಡು ಏನಾಗಬೇಕಿದೆ, ನಾವು ನಮ್ಮ ಧರ್ಮವನ್ನು ಉಳಿಸಬೇಕು. ಹಿಂದುಗಳ ಮೇಲೆ ಸವಾರಿ ಮಾಡುವ ಕಾರ್ಯವನ್ನು ಗಮನಿಸಿ, ಅದನ್ನು ಎದುರಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು ಮಾತನಾಡಿದರು.
ಈ ಸಂದರ್ಭ ಪ್ರಮುಖರಾದ ಜಿಲ್ಲಾ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್ ಆಮ್ಟೂರು, ಬಿಜೆಪಿಯ ಹಿರಿಯ ನಾಯಕರಾದ ಗೋಪಾಲ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷರಾದ ಲಕ್ಷ್ಮಿ ಪ್ರಭು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಮ್ಟೂರು ಘಟಕದ ಪ್ರಮುಖರಾದ ಜಿತೇಶ್ ಶೆಟ್ಟಿ ಬಾಳಿಕೆ, ಬಿ ಎನ್ ಪ್ರಭಾಕರ ಶೆಟ್ಟಿ ಬೈದರಡ್ಕ., ಪ್ರೇಮ ಗುರುವಪ್ಪ, ಕಾಂತಪ್ಪ ಶೆಟ್ಟಿ ಬಾಳಿಕೆ, ರಮೇಶ್, ಕೃಷ್ಣಪ್ಪ ಕುಲಾಲ್, ಈಶ್ವರ ಭಟ್, ಕೌಶಿಲ್ ಶೆಟ್ಟಿ ಬಾಳಿಕೆ, ದೇವದಾಸ್ ಕೃಷ್ಣಾಪುರ, ಮೋಹನ್ ಕುಲಾಲ್, ಮಹಾಬಲ ಸಾಲಿಯನ್, ಪ್ರದೀಪ್ ಆಮ್ಟೂರ್, ಯತೀಶ್ ಮುಳಿಕೊಡಂಗೇ, ಮಾಧವ ಕೊಟ್ಟಾರಿ, ದಿವಾಕರ ಪಡಿಲ್, ಶೇಖರ ಕೊಟ್ಟಾರಿ, ಸುಂದರ ಶಾಂತಿಪಾಳಿಕೆ, ಕಿಶೋರ್ ಕಟ್ಟೆಮಾರ್. ಶ್ರೀ ಕೃಷ್ಣ ಮಂದಿರದ ಕಾರ್ಯಕರ್ತರು ಭಾಜಪದ ಕಾರ್ಯಕರ್ತರು ಪರಿವಾರದ ಕಾರ್ಯಕರ್ತರು ಊರಿನ ನಾಗರಿಕರು ಉಪಸ್ಥಿತರಿದ್ದರು.
ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ನುಡಿ ನಮನ ಸಲ್ಲಿಸಿದರು . ಕುಶಾಲಪ್ಪ ಅಮ್ಟೂರು ವಂದಿಸಿದರು.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…