ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನಲ್ಲಿ ಐದು ವರ್ಷಗಳಿಂದ ಕರ್ತವ್ಶ ನಿರ್ವಹಿಸಿದ ಯೋಜನಾಧಿಕಾರಿಯವರಿಂದ ನೂತನ ಯೋಜನಾಧಿಕಾರಿಯವರಿಗೆ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಕಡಬ ತಾಲೂಕು ಯೋಜನಾಕಛೇರಿಯಲ್ಲಿ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪುತ್ತೂರು ಯೋಜನಾಕಛೇರಿಯಿಂದ ವಿಭಜಿತಗೊಂಡು ಕಳೆದ ಐದು ವರ್ಷದಿಂದ ಕಡಬ ತಾಲೂಕು ಯೋಜನಾ ಕಛೇರಿಯಲ್ಲಿ ತಾಲೂಕು ಯೋಜನಾಧಿಕಾರಿಯಾಗಿ 13690 ಸದಸ್ಶರನ್ನು ಒಳಗೊಂಡ 1996 ಪ್ರಗತಿಬಂಧು ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 125 ಕೋಟಿ ಆರ್ಥಿಕ ವ್ಶವಹಾರವನ್ನು ಬ್ಶಾಂಕ್ ಮೂಲಕ ಸದಸ್ಶರಿಗೆ ಒದಗಿಸಿರಿರುವ ಕಡಬ ತಾಲೂಕು ಯೋಜನಾ ಕಛೇರಿಯ ಯೋಜನಾಧಿಕಾರಿಯಾಗಿ ಕಳೆದ ಐದು ವರ್ಷದಿಂದ ಮೇದಪ್ಪಗೌಡ ನಾವೂರು ರವರು ಕೇಂದ್ರ ಕಛೇರಿಯ ಆದೇಶದಂತೆ ದಾರವಾಡ ಗ್ರಾಮಾಂತರ ತಾಲೂಕಿಗೆ ಯೋಜನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ಕಡಬ ತಾಲೂಕು ಯೋಜನಾ ಕಛೇರಿ ವ್ಶಾಪ್ತಿಯಲ್ಲಿ ತಾಲೂಕು ಜನಜಾಗೃತಿವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ, ಶ್ರೀ ಮಂಜುನಾಥೇಶ್ವರ ಭಜನಾಪರಿಷತ್ ಕಡಬ ತಾಲೂಕು ಸಮಿತಿ, ಆರು ಜನಜಾಗೃತಿ ವಲಯ ಸಮಿತಿ, ಆರು ಶೌರ್ಯ ವಿಪತ್ತು ನಿರ್ವಹಣಾ ಘಟಕ, 18 ಸಿ ಯ ಸ್ಸಿ ಕೇಂದ್ರಗಳು, 37 SBI ಬ್ಶಾಂಕ್ ಪ್ರತಿನಿಧಿ ಕೇಂದ್ರಗಳು, 25 ಜ್ಞಾನವಿಕಾಸ ಕೇಂದ್ರಗಳು, 53 ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಆರು ವಲಯ ಗಳಲ್ಲಿ 48 ಸೇವಾಪ್ರತಿನಿಧಿ ಕಾರ್ಯಕ್ಷೇತ್ರಗಳನ್ನು ಹೊಂದಿದ್ದು, ಪ್ರಸ್ತುತ ಶ್ರೀನಿವಾಸಪುರ ಯೋಜನಾ ಕಛೇರಿಯಿಂದ ವರ್ಗಾವಣೆಗೊಂಡು ಬಂದಿರುವ ನೂತನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ರವರಿಗೆ ತಾಲೂಕಿನ ಒಟ್ಟು ನಿರ್ವಹಣಾ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಹಣಕಾಸು ಪ್ರಭಂಧಕಿ ಶ್ರೀಮತಿ ಸುಜಾತ, ಸಹಾಯಕ ಪ್ರಭಂಧಕರಾದ ಯಶವಂತ್, ಹಾಗೂ ಕಛೇರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…