ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಭಾರತ ದೇಶದ ಸೈನಿಕರು ನೀಡಿದ ಪ್ರತಿರೋಧವನ್ನು ಬೆಂಬಲಿಸಿ ಭಾರತದ ಸೈನಿಕರಿಗೆ ಧೈರ್ಯ ತುಂಬುವ ಮತ್ತು ಭಾರತ ಸರ್ಕಾರ ಕೈಗೊಂಡ ನಿರ್ಧಾರವನ್ನು ಬೆಂಬಲಿಸಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರ ನೇತೃತ್ವದಲ್ಲಿ ದಿನಾಂಕ: 10/05/2025 ರಂದು ಶನಿವಾರ ಸಂಜೆ 4.00ಗಂಟೆಯಿಂದ 6:00ಗಂಟೆಯವರೆಗೆ ಮಂಗಳೂರಿನ ಪುರಭವನ ಮುಂಭಾಗದಲ್ಲಿರುವ ಸಾರ್ವಜನಿಕ ರಾಜಾಜೀಪಾರ್ಕ್ ಸಭಾಂಗಣದಲ್ಲಿ ಸರ್ವಧಮೀಯರ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ
ಈ ಪ್ರಾರ್ಥನೆ ದೇಶದ ಸೈನಿಕರನ್ನು ಬೆಂಬಲಿಸಲು ಮಂಗಳೂರಿನ ಏಲ್ಲಾ ಜನತೆ ಸೈನಿಕರ ಜೊತೆ ನಾವು ಇದ್ದೇವೆ ಎಂದು ತಿಳಿಸಲು ಹಾಗೂ ಕಾಶ್ಮೀರದ ಪಹಲ್ಗಾಮ್‌ನ ದುರಂತದಲ್ಲಿ ಮೃತರಾದ 28ಮಂದಿ ದೇಶ ಪ್ರೇಮಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಏಲ್ಲಾ ವರ್ಗಗಳ ಜನರು, ಕಾರ್ಮಿಕರು ಭಾಗವಹಿಸಬೇಕಾಗಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರು ವಿನಂತಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಕಾಶ್
ಸಲ್ಯಾನ್, ನಾಗೇಂದ್ರ ಕುಮಾರ್, ಕೇಶವ ಮರೋಳಿ,ಅಮೃತ್ ಕದ್ರಿ, ಯು.ಪಿ ಇಬ್ರಾಹಿಂ, ಸಿರಾಜ್ ಬಜ್ಪೆ, ಮೆಲ್ವಿನ್ ಕ್ಯಾಸ್ತಲಿನೋ, ಇಮ್ರಾನ್ ಕುದ್ರೋಳಿ, ಬಾಸ್ಕರ್ ರಾವ್, ಮನುರಾಜ್ ,ಆಲ್ಟ್ಟನ್ ಡಿಕುನ್ಹಾ, ವಸಂತ್ ಶೆಟ್ಟಿ ವೀರನಗರ, ಚಂದ್ರಹಾಸ ಕೋಡಿಕಲ್, ಮಂಜುಳಾ ನಾಯಕ್ ಶಾಂತಲಾ ಗಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…