ಕರಾವಳಿ

ಕುರುಡುಂಜೆ ಜಲಜಮ್ಮ ಹೆಗ್ಡೆ ಶತಮಾನೋತ್ಸವ ಸಂಭ್ರಮ

ಉಡುಪಿ: ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಸೂರೆಬೆಟ್ಟು ಮನೆಯ ಪ್ರಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.


ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಖ್ಯಾತ ಭಜನಾ ತಂಡಗಳ ಮಹಾ ಸಮ್ಮಿಲನದಲ್ಲಿ “ಭಕ್ತ ಭಾವಧಾರೆ”, “ಮಹಾಮೃತ್ಯುಂಜಯ ಹೋಮ”, ಶ್ರೀ ಕೋದಂಡರಾಮ ಕೃಪಾಷೋಷಿತ ಹನುಮಗಿರಿ ಮೇಳದವರಿಂದ ” ಗರುಡೋದ್ಭವ ಪುರುಷಮೃಗ” ಯಕ್ಷಗಾನ ಹಾಗೂ ಕಲ್ಕುಡ, ಪಂಜುರ್ಲಿ, ವಡ್ತೆ, ಅಣ್ಣಪ್ಪ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು.ಈ ಸಂದರ್ಭದಲ್ಲಿ ನೂರು ಸಂವತ್ಸರಗಳನ್ನು ಪೂರೈಸಿದ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರನ್ನು ಬಾರ್ಕೂರು ಬಂಟರ ಮಹಾ ಸಂಸ್ಥಾನದ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಶಾಲು, ಪೇಟ, ಹಾರ, ಸನ್ಮಾನ ಪತ್ರ ಹಾಗೂ ಶತಮಾನದ ಮಾತೆ ಎಂಬ ಬಿರುದಿನೊಂದಿಗೆ ಗೌರವಿಸಿದರು.

ಬಳಿಕ ಮಾತನಾಡಿದ ಸಂತೋಷ್ ಗುರೂಜಿ‌ ಅವರು, ಮರಿಮಕ್ಕಳನ್ನ ನೋಡಿದ ಜಲಜಮ್ಮನವರಿಗೆ ಶತಮಾನದ ಮಾತೆ ಬಿರುದನ್ನು ಕೊಟ್ಟಿದ್ದೇವೆ. ಸಂಸ್ಥಾನದಲ್ಲಿ ನೋವನ್ನು ಮರೆಮಾಚಿಸುವ 50 ಹಿರಿ ಜೀವಗಳು ಇರುವುದಕ್ಕೆ ಯಾರಾದರೂ ಪುಣ್ಯಾತ್ಮರು ಸಂತೋಷಧಾಮವನ್ನು ನಿರ್ಮಾಣ ಮಾಡಿ ಅವರು ಸಂಜೆಯ ಸಮಯವನ್ನು ನಮ್ಮಂತಹ ಸಾಧು ಸಂತರ ಜೊತೆಯಲ್ಲಿ ಕಳೆಯುವಂತೆ ಅವಕಾಶವನ್ನು ಮಾಡಿಕೊಡಬೇಕು ಎನ್ನುವ ಕನಸನ್ನು ನಾವು ಕಂಡಿದ್ದೇವೆ. ಶತಮಾನದ ಮಾತೆ ಎನ್ನುವ ಬಿರುದನ್ನು ನೀಡಿರುವ ಈ ಸುಸಂದರ್ಭದಲ್ಲಿ ವೃದ್ಧಾಶ್ರಮಕ್ಕೆ ನಾಂದಿಯಾಗಿರತಕ್ಕಂತಹ ಒಂದು ಘಟಳಿಗೆಯಾಗಿ ಅವರ ಆಶೀರ್ವಾದ ಅಲ್ಲಿಗೆ ಸಿಗಲಿ ಎನ್ನುವಂತಹ ಆಶಿರ್ವಚನ ನೀಡಿದ್ದಾರೆ. ಇದೇ ವೇಳೆ ಹಿರಿ ಜೀವಗಳಿಗೆ ಸಂತೋಷಧಾಮ ಮಾಡಬೇಕು ಎನ್ನುವ ಸಂಕಲ್ಪ ಆದಷ್ಟು ಬೇಗ ಈಡೇರಲಿ ಎಂದು ಹಾರೈಸಿದ್ದಾರೆ. ಜಲಜಮ್ಮನವರನ್ನು ಅವರ ಮಕ್ಕಳು, ಮೊಮ್ಮಕ್ಕಳನ್ನು ನೋಡಿ ಎಲ್ಲರೂ ಕಲಿಯಬೇಕು. ತುಳು ನಾಡಿನ ಸಮಸ್ತ ದೈವ ದೇವರುಗಳು ಅವರ ಕುಟುಂಬಕ್ಕೆ ರಕ್ಷಣೆ ನೀಡಿ, ಸಂತೋಷವನ್ನು ನೀಡಲಿ ಎಂದು ಆಶೀರ್ವದಿಸಿದರು.ಸಮಾರಂಭದಲ್ಲಿ ನಿವೃತ್ತ ಡಿಜಿಪಿ ಕಮಲ್ ಪಂತ್, ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಉದ್ಯಮಿ ಎಚ್.ಎಸ್.ಶೆಟ್ಟಿ, ಅಂಕೋಲದ ಪ್ರಖ್ಯಾತ ನ್ಯಾಯವಾದಿ ನಾಗರಾಜ್ ನಾಯಕ್, ಜಲಜಮ್ಮ ಹೆಗ್ಡೆ ಅವರ ಪುತ್ರ ಮಂಜುನಾಥ್ ಹೆಗ್ಡೆ, ಕಿಶೋರ್ ಹೆಗ್ಡೆ, ಪುತ್ರಿ ಸರಸ್ವತಿ ಹೆಗ್ಡೆ ಉಪಸ್ಥಿತರಿದ್ದರು. ರಘುರಾಮ್ ಅವರು ಕಾರ್ಯಕ್ರಮ ನಿರೂಪಿಸಿದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…

1 day ago

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…

1 day ago

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…

1 day ago

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…

1 day ago

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…

2 days ago

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…

2 days ago