ಜನ ಮನದ ನಾಡಿ ಮಿಡಿತ

Advertisement

ಪಾರಾದೀಪ್ : ತೈಲ ಹಡಗಿನಲ್ಲಿ 21 ಪಾಕಿಸ್ತಾನಿ ಸಿಬ್ಬಂದಿ ಪತ್ತೆ; ಹೈ ಅಲರ್ಟ್ ಘೋಷಣೆ

ಬುಧವಾರ ಒಡಿಶಾದ ಪಾರಾದೀಪ್‌ ಬಂದರಿಗೆ ಬಂದ ಕಚ್ಚಾ ತೈಲ ಹಡಗಿನಲ್ಲಿ 21 ಪಾಕಿಸ್ತಾನಿ ಸಿಬ್ಬಂದಿಗಳು ಪತ್ತೆಯಾಗಿದ್ದು ಸದ್ಯ ಬಂದರಿನಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ದಕ್ಷಿಣ ಕೊರಿಯಾದಿಂದ ಸಿಂಗಪುರ ಮಾರ್ಗವಾಗಿ ಒಡಿಶಾ ಬಂದ ‘MT Siren II’ ಹಡಗು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ಗಾಗಿ ಕಚ್ಚಾತೈಲ ಹೊತ್ತು ತಂದಿತ್ತು. ಇದರಲ್ಲಿರುವ 21 ಸಿಬ್ಬಂದಿ ಪಾಕಿಸ್ತಾನ ಪ್ರಜೆಗಳು ಪತ್ತೆಯಾಗಿದ್ದಾರೆ. ಸದ್ಯ ಇವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಒಡಿಶಾ ಕರಾವಳಿ ಪೊಲೀಸ್ ಮತ್ತು ಸಿಐಎಸ್ಎಫ್ ಸಿಬ್ಬಂದಿ ಬಿಗಿ ಭದ್ರತೆ ಕೈಗೊಂಡಿದ್ದು ಪಾರಾದೀಪ್‌ನಲ್ಲಿ ಹೈಅಲರ್ಟ್‌ ಘೋಷಣೆ ಮಾಡಲಾಗಿದೆ.

ಹಡಗಿನಲ್ಲಿ ಸುಮಾರು 11,350 ಮೆಟ್ರಿಕ್‌ ಟನ್‌ನಷ್ಟು ಕಚ್ಚಾ ತೈಲದ ಸರಕಿದ್ದು, ಇದನ್ನು ಸ್ಥಳಾಂತರಿಸುವ ಸಮಯದಲ್ಲಿ ಯಾವುದೇ ಸಿಬ್ಬಂದಿ ಹಡಗಿನಿಂದ ಹೊರಬರುವಂತಿಲ್ಲ ಎಂದು ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಡಗಿನಲ್ಲಿ ಒಟ್ಟು 25 ಸಿಬ್ಬಂದಿಗಳಿದ್ದರು. ಈ ಪೈಕಿ 21 ಮಂದಿ ಪಾಕ್‌ ಪ್ರಜೆಗಳಾಗಿದ್ದಾರೆ.

ಈಗಾಗಲೇ ಪ್ರಧಾನಿ ಮೋದಿ ಅವರು ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಪಾಕಿಗಳು ಕೈ ಹಾಕಿದರೆ ಸರ್ವನಾಶ ಖಚಿತ ಎಂದ ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಪಂಜಾಬ್‌ನ ಅದಂಪುರದ ವಾಯುನೆಲೆಯಲ್ಲಿ ಮಂಗಳವಾರ ಯೋಧರನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಆಪರೇಷನ್‌ ಸಿಂದೂರ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಇದ್ದಂತೆ ಇದನ್ನೂ ದಾಟಿ ಬಂದರೆ ಸರ್ವನಾಶ ಖಚಿತ ಎಂದಿದ್ದರು.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!