ಮಂಗಳೂರಿನ ಬಜ್ಪೆ ಭಟ್ರಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಿಕ್ಷಾ ನಿಲ್ದಾಣವನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರು ಉದ್ಘಾಟಿಸಿ ಮಾತನಾಡಿದರು.

ರಿಕ್ಷಾ ಚಾಲಕರು ಜವಾಬ್ದಾರಿಯಿಂದ ರಿಕ್ಷಾ ಚಾಲನೆ ಮಾಡುವುದರ ಜೊತೆಗೆ ಸರಕಾರದಿಂದ ಸಿಗುವ ಪ್ರಯೋಜಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾರವರು ರಾಜ್ಯ ಮೋಟಾರ್ ವಾಹನಕ್ಕೆ ಸಂಬAಧಪಟ್ಟ ಅಸಂಘಟಿತ ಕಾರ್ಮಿಕರಿಗೆ ಸರಕಾರ ಈಗಾಗಲೇ ಅನೇಕ ಯೋಜನೆಗಳನ್ನು ತಂದಿದ್ದು, ಅದನ್ನು ನೋಂದಾವಣೆ ಮಾಡುವ ಮೂಲಕ ತಮ್ಮ ಕುಟುಂಬದ ರಕ್ಷಣೆಗೆ ಮುಂದಾಗಬೇಕೆAದು ಕರೆ ನೀಡಿದರು. ರಿಕ್ಷಾ ಚಾಲನೆ ವೃತ್ತಿ ಇಂದು ಗೌರವಯುತ ವೃತ್ತಿಯಾಗಿದ್ದು, ಸರಕಾರದಿಂದ ಯಾವ ಸವಲತ್ತು ಬಯಸದೇ ತಮ್ಮ ದುಡಿಮೆಯ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುವಂತಹ ರಿಕ್ಷಾ ಚಾಲಕರಿಗೆ ಗೌರವ ಸಿಗುವ ರೀತಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಘಟಕವನ್ನು ಒದಗಿಸಿಕೊಡಬೇಕೆಂಬ ವಿಚಾರವನ್ನು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ತಂದು ಇಡೀ ರಾಜ್ಯಾದಾದ್ಯಂತ ಇವತ್ತು ರಿಕ್ಷಾಚಾಲಕರಿಗೂ ಸರಕಾರದ ಅನುದಾನದಿಂದ ಮೇಲ್ಛಾವಣಿ ಘಟಕವನ್ನು ಹಾಕುವಂತಹ ಅವಕಾಶ ಲಭಿಸಿದಂತಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಐವನ್ ಡಿ’ಸೋಜಾರವರು ಈ ಸಂಧರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಪಿ.ಡಿ.ಒ. ರಮೇಶ್, ಅಧ್ಯಕ್ಷರಾದ ಜಾಹೀರ್ ಹುಸೈನ್, ಕಾಂಗ್ರೆಸ್ ನಾಯಕರಾದ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಬಜ್ಪೆ ರೋಬಾರ್ಟ್ ಕ್ಯಾಸ್ತಲಿನೋ, ಪಂಚಾಯತ್ ಸದಸ್ಯರಾದ ಸರೋಜಿನಿ, ಸಾದಿಕ್ , ಸಂದೇಶ್ ಭಟ್ರಕೆರೆ, ಮಜೀದ್, ಮೌಲನಾ ಶಬೀರ್, ಎಸ್. ಸುಹೈಲ್ ಭಟ್ರಕೆರೆ ಮುಂತಾದವರು ಉಪಸ್ಥಿತರಿದ್ದರು.



