ಜನ ಮನದ ನಾಡಿ ಮಿಡಿತ

Advertisement

ರಿಕ್ಷಾ ಚಾಲಕರು ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡುವಂತೆ ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ಕರೆ.

ಮಂಗಳೂರಿನ ಬಜ್ಪೆ ಭಟ್ರಕೆರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಿಕ್ಷಾ ನಿಲ್ದಾಣವನ್ನು ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ’ಸೋಜಾರವರು ಉದ್ಘಾಟಿಸಿ ಮಾತನಾಡಿದರು.

ರಿಕ್ಷಾ ಚಾಲಕರು ಜವಾಬ್ದಾರಿಯಿಂದ ರಿಕ್ಷಾ ಚಾಲನೆ ಮಾಡುವುದರ ಜೊತೆಗೆ ಸರಕಾರದಿಂದ ಸಿಗುವ ಪ್ರಯೋಜಗಳನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿ’ಸೋಜಾರವರು ರಾಜ್ಯ ಮೋಟಾರ್ ವಾಹನಕ್ಕೆ ಸಂಬAಧಪಟ್ಟ ಅಸಂಘಟಿತ ಕಾರ್ಮಿಕರಿಗೆ ಸರಕಾರ ಈಗಾಗಲೇ ಅನೇಕ ಯೋಜನೆಗಳನ್ನು ತಂದಿದ್ದು, ಅದನ್ನು ನೋಂದಾವಣೆ ಮಾಡುವ ಮೂಲಕ ತಮ್ಮ ಕುಟುಂಬದ ರಕ್ಷಣೆಗೆ ಮುಂದಾಗಬೇಕೆAದು ಕರೆ ನೀಡಿದರು. ರಿಕ್ಷಾ ಚಾಲನೆ ವೃತ್ತಿ ಇಂದು ಗೌರವಯುತ ವೃತ್ತಿಯಾಗಿದ್ದು, ಸರಕಾರದಿಂದ ಯಾವ ಸವಲತ್ತು ಬಯಸದೇ ತಮ್ಮ ದುಡಿಮೆಯ ಮೂಲಕ ಸರಕಾರಕ್ಕೆ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡುವಂತಹ ರಿಕ್ಷಾ ಚಾಲಕರಿಗೆ ಗೌರವ ಸಿಗುವ ರೀತಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕರಿಗೆ ಮೇಲ್ಛಾವಣಿ ಘಟಕವನ್ನು ಒದಗಿಸಿಕೊಡಬೇಕೆಂಬ ವಿಚಾರವನ್ನು ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ತಂದು ಇಡೀ ರಾಜ್ಯಾದಾದ್ಯಂತ ಇವತ್ತು ರಿಕ್ಷಾಚಾಲಕರಿಗೂ ಸರಕಾರದ ಅನುದಾನದಿಂದ ಮೇಲ್ಛಾವಣಿ ಘಟಕವನ್ನು ಹಾಕುವಂತಹ ಅವಕಾಶ ಲಭಿಸಿದಂತಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದು ಐವನ್ ಡಿ’ಸೋಜಾರವರು ಈ ಸಂಧರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಪಿ.ಡಿ.ಒ. ರಮೇಶ್, ಅಧ್ಯಕ್ಷರಾದ ಜಾಹೀರ್ ಹುಸೈನ್, ಕಾಂಗ್ರೆಸ್ ನಾಯಕರಾದ ಸಿರಾಜ್ ಬಜ್ಪೆ, ನಿಸಾರ್ ಕರಾವಳಿ, ಬಜ್ಪೆ ರೋಬಾರ್ಟ್ ಕ್ಯಾಸ್ತಲಿನೋ, ಪಂಚಾಯತ್ ಸದಸ್ಯರಾದ ಸರೋಜಿನಿ, ಸಾದಿಕ್ , ಸಂದೇಶ್ ಭಟ್ರಕೆರೆ, ಮಜೀದ್, ಮೌಲನಾ ಶಬೀರ್, ಎಸ್. ಸುಹೈಲ್ ಭಟ್ರಕೆರೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!