ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ ಪಡೆದಿದ್ದ ಜನೋಪಕಾರಿ, ಕೊಡುಗೈದಾನಿ ಬ್ಯಾಷ್ಠಿಸ್ಟ್ ಡಿ’ಕುನ್ಹಾ (85) ಇಂದಿಲ್ಲಿ ಬುಧವಾರ ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬಂಟ್ವಾಳ ಪಾಣೆಮಂಗಳೂರು (ಕಲ್ಲಡ್ಕ ಮೊಗರ್ನಾಡ್) ಮಾತೆ ಇಗರ್ಜಿಯ ಪಾಲನಾ ಸಮಿತಿ ಸದಸ್ಯರಾಗಿ,ಮೆಲ್ಕಾರ್ ಯುವಕ ಸಂಘದ ಅಧ್ಯಕ್ಷರಾಗಿ ಮೆಲ್ಕಾರ್ ದಸರಾ (ಟ್ಯಾಬ್ಲೋ) ರೂವಾರಿ ಎಂದೆಣಿಸಿ ಎಲ್ಲಾ ಸಮುದಾಯದವರಲ್ಲೂ ಭಾವೈಕ್ಯತೆ ಹೊಂದಿ ಸಾಮರಸ್ಯದ ಬಾಳಿಗೆ ಪ್ರೇರಕರಾಗಿ ಪ್ರಸಿದ್ಧರೆನಿಸಿದ್ದರು.ಐವತ್ತು ದಶಕಗಳ ಹಿಂದೆಯೇ ಸುಮಾರು 37 ಧರ್ನಶಿಶು (ಮಕ್ಕಳ ಪೋಷಕ) ಹೊಂದಿ ಹಿತಪೋಷಕರೆಣಿಸಿ ಶ್ರೇಷ್ಠವ್ಯಕ್ತಿವೆಂದೇ ಗುರುತಿಸಿ ಜನಾನುರೆಸಿದ್ದರು. ಬಳಿಕ ಬಂಟ್ವಾಳ ಮೊಡಂಕಾಪು ಇಲ್ಲಿನ ಇನ್ಫೆoಟ್ ಜೀಸಸ್ ಚರ್ಚ್ ನಲ್ಲಿ ಪಾಲನಾ ಸಮಿತಿ ಸದಸ್ಯರಾಗಿ,ತಿಸ್ರಿ ಒಡ್ದ್ ಇದರ ಅಧ್ಯಕ್ಷರಾಗಿ, ಕಥೋಲಿಕ್ ಸಭಾ ಇದರ ಸಕ್ರಿಯ ಸದಸ್ಯರಾಗಿ, ಕೊಡುಗೈದಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದು, ಸದ್ಯ ಮಂಗಳೂರು ಬಿಕರ್ಣಕಟ್ಟೆ ಇಲ್ಲಿನ ಜಯಶ್ರೀಗೇಟ್ ನ ಸ್ವನಿವಾಸದಲ್ಲಿ ನೆಲೆಸಿದ್ದರು.
ಮೃತರು ಪತ್ನಿ, ಇಬ್ಬರು ಸುಪುತ್ರಿಯರು, ಮೂವರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು
ನಾಳೆ ಗುರುವಾರ (ಮೇ. 23) ಮಧ್ಯಾಹ್ನ 2:00 ಗಂಟೆಗೆ ಸ್ವನಿವಾಸಕ್ಕೆ ತಂದು ಬಳಿಕ 2:45 ರಿಂದ 3:30ರ ವರೆಗೆ ಬಜ್ಜೋಡಿ ಅಲ್ಲಿನ ಇನ್ಫೆಂಟ್ ಮೇರಿ ಚರ್ಚ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು. 3:30 ಗಂಟೆಗೆ ಪೂಜೆ, ನಂತರ ಸೈoಟ್ ಸೆಬಾಸ್ಟಿಯನ್ ಚರ್ಚ್ (ಬೆಂದೂರು) ಇದರ ಸಮಾಧಿಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…