ಜನ ಮನದ ನಾಡಿ ಮಿಡಿತ

Advertisement

ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್. ನಿಧನ

ಉಡುಪಿ: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್. (59) ಅವರು ಅನಾರೋಗ್ಯದಿಂದ ನಿಧನ ಹೊಂದಿದರು.


ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ನಂಜಪ್ಪ ಅವರು, ಕಳೆದ ಆಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ‌ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರದಂದು ಕರ್ತವ್ಯದಲ್ಲಿರುವಾಗಲೇ ರಕ್ತದೊತ್ತಡದಿಂದ ಬಳಲುತ್ತಿದ್ದ ನಂಜಪ್ಪ ಅವರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ‌ ಪಡೆದರೂ‌ ಅವರ ಆರೋಗ್ಯದಲ್ಲಿ ಯಾವುದೇ ಗಣನೀಯ ಚೇತರಿಕೆ ಕಂಡುಬಂದಿರಲಿಲ್ಲ. ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
2003ರಲ್ಲಿ ಉಪನಿರೀಕ್ಷಕರಾಗಿ ಸೇವೆಗೆ ನಿಯುಕ್ತಿಯಾಗಿದ್ದ ನಂಜಪ್ಪ, ಶಿವಮೊಗ್ಗ, ದಾವಣಗೆರೆ, ಹಾವೇರಿ ಮೊದಲಾದೆಡೆ ಕರ್ತವ್ಯ ನಿರ್ವಹಿಸಿದ್ದು ಬಳಿಕ ಪೊಲೀಸ್‌ ನಿರೀಕ್ಷಕರಾಗಿ ಆಗಿ ಬಡ್ತಿ ಹೊಂದಿ, ಕಡೂರು, ಭದ್ರಾವತಿಯಲ್ಲಿ ನಾಲ್ಕು ವರ್ಷಗಳ ಕಾಲ ಗಂಗೊಳ್ಳಿ ಕರಾವಳಿ ಕಾವಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸಿ 2024 ಆಗಸ್ಟ್‌ನಲ್ಲಿ ಕುಂದಾಪುರ ಠಾಣೆ ಪೊಲೀಸ್ ನಿರೀಕ್ಷಕರಾಗಿ‌ ನಿಯುಕ್ತಿಗೊಂಡಿದ್ದರು.
ಇಂದು ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಎಸ್ಪಿ ಡಾ. ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಮೃತರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು. ಎಎಸ್ಪಿ ಸುಧಾಕರ್ ನಾಯ್ಕ್, ಎ ಎಸ್ ಪಿ ಪರಮೇಶ್ವರ್ ಹೆಗ್ಡೆ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!