ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಹಲಸು ಹಬ್ಬ ಮಂಗಳೂರಿನ ಬಾಳಂಬಟ್ಟ ಸಭಾಂಗಣದಲ್ಲಿ ಆರಂಭವಾಯಿತು.
ಹಲಸಿನ ಹಣ್ಣಿನಿಂದಾಗುವ ಆರೋಗ್ಯದ ಪರಿಣಾಮಗಳು, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನಿಂದ ತಯಾರಿಸಬಹುದಾದ ವಿವಿಧ ಖಾದ್ಯಗಳ ಬಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಣ್ಯರ ಗಮನ ಸೆಳೆದ್ರು. ವಿವಿಧ ತಳಿಯ ಹಲಸಿನ ಹಣ್ಣುಗಳು ಮೇಣ ರಹಿತ ಹಲಸು, ಹಲಸಿನ ಹಣ್ಣಿನಿಂದ ತಯಾರಿಸಲಾದ ಹೋಳಿಗೆ, ಹಲಸಿನ ಮಿಲ್ಕ್ ಶೇಕ್, ಹಲಸಿನ ಕಬಾಬ್, ಗಾರಿಗೆ, ಹಲಸಿನ ಮಂಚೂರಿ ಸಹಿತ ವಿವಿಧ ಭಕ್ಷಗಳು ಹಲಸಿನ ಹಬ್ಬಕ್ಕೆ ಭೇಟಿ ನೀಡಿದವರ ಬಾಯ್ರಚಿಯನ್ನು ತಣಿಸುತ್ತಿದ್ದವು. ಹಲಸಿನ ಹಣ್ಣಿನ ಸೊಳೆಗಳನ್ನು ಸುಲಿದು ಮಾರಾಟ ಮಾಡಲಾಗುತ್ತಿತ್ತು. ನಗರದ ಬಹುಮಹಡಿಗಳಲ್ಲಿ ವಾಸವಾಗಿರುವವರಿಗೆ ಹಲಸಿನ ಹಣ್ಣನ್ನು ಸುಲಿಯುವುದು ಬಲು ಕಷ್ಟ. ಜೊತೆಗೆ ಮೇಣ ಇದ್ದರಂತೂ ಅದರ ಉಸಾಬರಿಯೇ ಬೇಡ ಎನ್ನುವವರು ಅಧಿಕ. ಹಲಸಿನ ಹಬ್ಬ ನಗರ ಪ್ರದೇಶದವರಿಗೆ ಹಲಸಿನ ಹಣ್ಣಿನ ರುಚಿ ನೋಡುವ ಅವಕಾಶವನ್ನು ಒದಗಿಸಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…