ಯಕ್ಷಮಿತ್ರರು ಪಂಜಿನಡ್ಕ ಹಾಗು ಸುರೇಶ್ ಕೊಲಕಾಡಿ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗ ಇವರ ಜಂಟಿ ಆಶ್ರಯದಲ್ಲಿ ಸುರೇಶ್ ಕೊಲಕಾಡಿ ಇವರ 35ನೇ ವರ್ಷದ ಯಕ್ಷ ಪಯಣದ ಪ್ರಯುಕ್ತ ಸುರೇಶ್ ಕೊಲಕಾಡಿಯವರಿಗೆ ಸಾರ್ವಜನಿಕರ ಸಂಮಾನ ಬಿರುದು ಪ್ರದಾನ ಮತ್ತು ಯಕ್ಷಗಾನ ಮೇ.31ರಂದು ನಡೆಯಲಿದೆ.
ಸಂಜೆ 6ರಿಂದ ಶ್ರೀ ಕೋಡ್ದಬ್ಬು ಧೂಮಾವತಿ ದೈವಸ್ಥಾನದ ವಠಾರ ಕಕ್ವ ಮುಲ್ಕಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂಜೆ 6ರಿಂದ ದೇವಿ ಮಹಾತ್ಮೇ ಯಕ್ಷಗಾನ ಬಯಲಾಟ ನಡೆಯಲಿದ್ದು, ರಾತ್ರಿ 8;30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಿರಿಯ ಕಲಾವಿದರಾದ ಅಂಬರೀಶ್ ಶೆಟ್ಟಿಯವರಿಗೆ ಗುರುವಂದನೆ ಬಳಿಕ ಯಕ್ಷಗಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಗೌರವಧನ ನೀಡಲಾಗುವುದು. ಇನ್ನು ಪಂಜಿನಡ್ಕ ಶಾಲೆಯಲ್ಲಿ 10ನೇ ತರಗತಿಯಲ್ಲಿ 90% ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಧನಸಹಾಯ ನೀಡಲಿದ್ದಾರೆ. ಉತ್ತಮ ಸೇವೆಗಾಗಿ 2023ನೇ ಸಾಲಿನ ರಾಜ್ಯದ ಸಿಎಂ ಅವರಿಂದ ಪದಕ ಸ್ವೀಕರಿಸಿದ ಶ್ರೀಮತಿ ಕಾತ್ಯಾಯಿನಿ ಆಳ್ವ ಇವರಿಗೆ ಸಂಮಾನ ನಡೆಯಲಿದೆ. ಇವರ ಜೊತೆಗೆ ಈ ಸಂಮಾನವನ್ನು ಉತ್ತಮ ಸಮಾಜಸೇವೆಗೈದಂತಹ ಶ್ರೀಮತಿ ರೇಖಾ ದೇವಾಡಿಗ ಪಡೆದುಕೊಳ್ಳಲಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಖ್ಯಾತ ಶನಿಪೂಜೆ ಅರ್ಥಧಾರಿ ಕಿರಣ್ ಕುಮಾರ್ ಪಡುಪಣಂಬೂರ್ ಅವರ ಬಗ್ಗೆಗಿನ ಕೃತಿ ಬಿಡುಗಡೆಗೊಳ್ಳಲಿದೆ. ಮುಖ್ಯವಾಗಿ ವಿಶೇಷ ಸನ್ಮಾನಿತರಾಗಿ ತುಳು ಹಾಗೂ ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರಾದ `ಕಾಂತಾರ’ ಚಲನಚಿತ್ರ ಖ್ಯಾತಿಯ ಪ್ರಕಾಶ್ ಕೆ ತುಮಿನಾಡು ಹಾಗೂ ದೀಪಕ್ ರೈ ಪಾಣಾಜೆ ಆಗಮಿಸಲಿದ್ದಾರೆ. ಇನ್ನು ಈ ಎಲ್ಲಾ ಕಾರ್ಯಕ್ರಮಗಳು ಅಭಿಮತ ಟಿವಿ ಯೂಟ್ಯುಬ್ ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…