ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ :ಸುರೇಶ್ ಕೊಲಕಾಡಿಯ 35ನೇ ವರ್ಷದ ಯಕ್ಷ ಪಯಣ; ಮೇ.31ರಂದು ಕಾರ್ಯಕ್ರಮ

ಯಕ್ಷಮಿತ್ರರು ಪಂಜಿನಡ್ಕ ಹಾಗು ಸುರೇಶ್ ಕೊಲಕಾಡಿ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗ ಇವರ ಜಂಟಿ ಆಶ್ರಯದಲ್ಲಿ ಸುರೇಶ್ ಕೊಲಕಾಡಿ ಇವರ 35ನೇ ವರ್ಷದ ಯಕ್ಷ ಪಯಣದ ಪ್ರಯುಕ್ತ ಸುರೇಶ್ ಕೊಲಕಾಡಿಯವರಿಗೆ ಸಾರ್ವಜನಿಕರ ಸಂಮಾನ ಬಿರುದು ಪ್ರದಾನ ಮತ್ತು ಯಕ್ಷಗಾನ ಮೇ.31ರಂದು ನಡೆಯಲಿದೆ.

ಸಂಜೆ 6ರಿಂದ ಶ್ರೀ ಕೋಡ್ದಬ್ಬು ಧೂಮಾವತಿ ದೈವಸ್ಥಾನದ ವಠಾರ ಕಕ್ವ ಮುಲ್ಕಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂಜೆ 6ರಿಂದ ದೇವಿ ಮಹಾತ್ಮೇ ಯಕ್ಷಗಾನ ಬಯಲಾಟ ನಡೆಯಲಿದ್ದು, ರಾತ್ರಿ 8;30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಿರಿಯ ಕಲಾವಿದರಾದ ಅಂಬರೀಶ್ ಶೆಟ್ಟಿಯವರಿಗೆ ಗುರುವಂದನೆ ಬಳಿಕ ಯಕ್ಷಗಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಗೌರವಧನ ನೀಡಲಾಗುವುದು. ಇನ್ನು ಪಂಜಿನಡ್ಕ ಶಾಲೆಯಲ್ಲಿ 10ನೇ ತರಗತಿಯಲ್ಲಿ 90% ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಧನಸಹಾಯ ನೀಡಲಿದ್ದಾರೆ. ಉತ್ತಮ ಸೇವೆಗಾಗಿ 2023ನೇ ಸಾಲಿನ ರಾಜ್ಯದ ಸಿಎಂ ಅವರಿಂದ ಪದಕ ಸ್ವೀಕರಿಸಿದ ಶ್ರೀಮತಿ ಕಾತ್ಯಾಯಿನಿ ಆಳ್ವ ಇವರಿಗೆ ಸಂಮಾನ ನಡೆಯಲಿದೆ. ಇವರ ಜೊತೆಗೆ ಈ ಸಂಮಾನವನ್ನು ಉತ್ತಮ ಸಮಾಜಸೇವೆಗೈದಂತಹ ಶ್ರೀಮತಿ ರೇಖಾ ದೇವಾಡಿಗ ಪಡೆದುಕೊಳ್ಳಲಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಖ್ಯಾತ ಶನಿಪೂಜೆ ಅರ್ಥಧಾರಿ ಕಿರಣ್ ಕುಮಾರ್ ಪಡುಪಣಂಬೂರ್ ಅವರ ಬಗ್ಗೆಗಿನ ಕೃತಿ ಬಿಡುಗಡೆಗೊಳ್ಳಲಿದೆ. ಮುಖ್ಯವಾಗಿ ವಿಶೇಷ ಸನ್ಮಾನಿತರಾಗಿ ತುಳು ಹಾಗೂ ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರಾದ `ಕಾಂತಾರ’ ಚಲನಚಿತ್ರ ಖ್ಯಾತಿಯ ಪ್ರಕಾಶ್ ಕೆ ತುಮಿನಾಡು ಹಾಗೂ ದೀಪಕ್ ರೈ ಪಾಣಾಜೆ ಆಗಮಿಸಲಿದ್ದಾರೆ. ಇನ್ನು ಈ ಎಲ್ಲಾ ಕಾರ್ಯಕ್ರಮಗಳು ಅಭಿಮತ ಟಿವಿ ಯೂಟ್ಯುಬ್ ಚಾನಲ್‌ನಲ್ಲಿ ನೇರಪ್ರಸಾರಗೊಳ್ಳಲಿದೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!