ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ…!

ಇಡೀ ಋತುವಿನಲ್ಲಿ ನಿರಂತರವಾಗಿ ಮೀನುಗಾರಿಕೆ ನಡೆಸಲಾಗದೇ ಬೋಟುಗಳು ಮೀನುಗಾರಿಕೆಯನ್ನು ಮೊಟಕುಗೊಳಿಸಿ ಲಂಗರು ಹಾಕಲಾರಂಭಿಸಿವೆ. ವಾರದಿಂದ ಸುರಿದ ಮಳೆಯಂತೂ ಮೀನುಗಾರರ ಕೊನೆಯ ಹಂತದ ಆದಾಯವನ್ನೂ ಕಸಿದುಕೊಂಡಿದೆ. ಪ್ರತೀ ವರ್ಷ ಜೂನ್ ಒಂದರಿ0ದ ಎರಡು ತಿಂಗಳು ಮೀನುಗಾರಿಕೆಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಆಳಸಮುದ್ರ ಬೋಟ್‌ಗಳಿಗೆ ನಿಷೇಧವಿದೆ.

ಆದರೆ ಈ ವರ್ಷ ಮೇ ತಿಂಗಳಲ್ಲೇ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ನಡೆಸಲು ಆಗಿಲಿಲ್ಲ. ಜೊತೆಗೆ ಮತ್ಸ್ಯ ಕ್ಷಾಮವೂ ಸೇರಿ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೀಗಾಗಿ ಮೀನುಗಾರರು ಬೇಸರದಿಂದಲೇ ಈ ಋತುವಿನ ಮೀನುಗಾರಿಕೆ ಕೊನೆಗೊಳಿಸಿದ್ದಾರೆ. ಉತ್ತಮ ಮೀನುಗಾರಿಕೆಯ ನಿರೀಕ್ಷೆಯಿಂದ 2024ರ ಆಗಸ್ಟ್ನಲ್ಲಿ ಮೀನುಗಾರಿಕೆಗೆ ಕಡಲಿಗಿಳಿದಿದ್ದ ಮೀನುಗಾರರಿಗೆ ವರ್ಷ ಪೂರ್ತಿ ನಿರೀಕ್ಷಿಸಿದಷ್ಟು ಮೀನು ಸಿಕ್ಕಿರಲಿಲ್ಲ. ನಷ್ಟಕ್ಕೊಳಗಾದ ಹಲವು ಬೋಟ್ ಮಾಲಕರು ಮೀನುಗಾರಿಕೆ ಮುಂದುವರಿಸಲಾಗದೇ 4 ತಿಂಗಳ ಹಿಂದೆಯೇ ಬೋಟ್‌ಗಳನ್ನು ಬಂದರಿನಲ್ಲಿ ಲಂಗರು ಹಾಕಿದ್ದರು.

ಜನವರಿಯಲ್ಲಿ ಶೇ. 40ರಷ್ಟು ಬೋಟ್‌ಗಳು ಲಂಗರು ಹಾಕಿದ್ದರೆ, ಈಗ ಆ ಸಂಖ್ಯೆ ಶೇ. 80 ಕ್ಕೆ ತಲುಪಿದೆ. ಪ್ರಸ್ತುತ ಶೇ.15-20ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಯಲ್ಲಿ ನಿರತವಾಗಿವೆ. ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಒಟ್ಟಾರೆ ಬೋಟ್ ಮತ್ತು ಮೀನು ಹಿಡಿಯುವ ಬಲೆಗಳಿಗೆ ಕೋಟಿಗೂ ಅಧಿಕ ಬಂಡವಾಳ ಹಾಕಿದ್ದ ಬೋಟ್ ಮಾಲೀಕರಿಗೆ ಈ ವರ್ಷ ನಷ್ಟವೇ ಆಗಿದೆ.

Leave a Reply

Your email address will not be published. Required fields are marked *

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

error: Content is protected !!