ಇವತ್ತಿನ ಕಾಲಮಾನ ಜ್ಞಾನ ಆರ್ಥಿಕತೆಯದ್ದು, ಇದಕ್ಕೆ ಬುನಾದಿ ಶಿಕ್ಷಣ, ಗುಣ ಮಟ್ಟದ ಶಿಕ್ಷಣ ತಳ ಮಟ್ಟದಲ್ಲಿ ಸಿಕ್ಕಿದರೆ ಉನ್ನತ ಶಿಕ್ಷಣ ಕೂಡಾ ಉತ್ಕೃಷ್ಟ ವಿದ್ಯಾಸಂಸ್ಥೆಗಳಲ್ಲಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇಂತಹ ಪ್ರಯತ್ನವೊಂದಕ್ಕೆ ದಾನಿ ಡಾ.ಕನ್ಯಾನ ಸದಾಶಿವ ಶೆಟ್ಟಿ ಕೈ ಹಾಕಿದ್ದಾರೆ.
ಸಮಾಜದಲ್ಲಿ ಕಷ್ಟ ಕಾರ್ಪಣ್ಯಗಳಿಂದ ಬಳಲಿ ಬೆಂಡಾಗಿರುವ ಅದೆಷ್ಟೋ ಜೀವಗಳಿವೆ. ಬಡತನ ಇನ್ನಷ್ಟು ಅವರ ಜೀವ ಹಿಂಡುತ್ತದೆ. ಯಾವುದಾದರೂ ಕಾಣುವ ಕೈಗಳ ಸಹಾಯಕ್ಕೆ ಕಾಯುತ್ತವೆ. ಆದರೆ ಎಲ್ಲರೂ ಮರುಗುವರೇ ಹೊರತು ಸಹಾಯಕ್ಕಾಗಿ ಮುಂದೆ ಬರುವುದು ವಿರಳ. ಇಂತಹ ಸಂದರ್ಭಗಳಲ್ಲಿ ನಮಗೆ ಹೊಳೆಯುವ ಹೆಸರೆಂದರೆ ಅದು ಡಾ. ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ. ತಮ್ಮ ನಿಸ್ವಾರ್ಥವಾದ ಸಮಾಜ ಸೇವೆ ಇಂದು ಅವರನ್ನು ಬಹಳ ಎತ್ತರಕ್ಕೆ ತಂದು ನಿಲ್ಲಿಸಿದೆ. ಜಾತಿ-ಮತ-ಧರ್ಮ ಎನ್ನುವ ಯಾವುದೇ ಭೇದವಿಲ್ಲದೆ ಸಮಾಜದಲ್ಲಿನ ಅಶಕ್ತರಿಗೆ ದಾರಿ ದೀಪವಾಗಿ ಬೆಳಗುತ್ತಿದ್ದಾರೆ.
ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ ತುಳುವರೆ ಕರ್ಣೆ ತಾವು ಬೆಳೆದ ಹಾದಿಯನ್ನು ಮರೆಯಲಿಲ್ಲ.ತನ್ನೂರಾದ ಕುಳೂರಿನ ಜನತೆಯ ದಾರಿದೀಪವಾಗಿ, ಹುಟ್ಟೂರ ಶಾಲೆಯ ಅಭಿವೃದ್ಧಿಯ ಹರಿಕಾರನಾಗಿ ಗುರುತಿಸಿಕೊಂಡಿರುವ ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ತಾನು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಂತೆ ಹತ್ತು ಹಲವು ಕೊಡುಗೆಗಳನ್ನು ನೀಡಿ ಮಾದರಿಯಾಗಿದ್ದಾರೆ. ಈ ವರ್ಷ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ., ಯು.ಕೆ.ಜಿ. ವಿಭಾಗವನ್ನು 5 ವರ್ಷಗಳ ಕಾಲ ದತ್ತು ಸ್ವೀಕಾರ ಮಾಡುವ ಮೂಲಕ ಕುಳೂರಿನ ಜನಮಾನಸದಲ್ಲಿ ಅಜರಾಮರವಾಗಿರುವವರು. ತೀರಾ ಗ್ರಾಮೀಣ ಭಾಗದಲ್ಲಿರುವ ತಾನು ಕಲಿತ ಸರಕಾರಿ ಶಾಲೆಯು ಇನ್ನಷ್ಟು ಅಭಿವೃದ್ಧಿಯಾಗಬೇಕೆಂಬ ನಿಟ್ಟಿನಲ್ಲಿ ಇಂದು ಶಾಲಾ ಪ್ರವೇಶೋತ್ಸವದ ಸಂದರ್ಭದಲ್ಲಿ ಪ್ರೀ ಪ್ರೈಮರಿ ವಿಭಾಗವನ್ನು ಮುಂದಿನ 5 ವರ್ಷಗಳ ಕಾಲ ದತ್ತು ಸ್ವೀಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಸಂದರ್ಭದಲ್ಲಿ ಶಾಲಾ ಪರವಾಗಿ ಅವರನ್ನು ಗೌರವಿಸಲಾಯಿತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…