ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಹಿರಿಯ ಕಾರು ಚಾಲಕ ಸುಲೈಮಾನ್ ಕಲ್ಲಡ್ಕ ನಿಧನ

ಹಿರಿಯ ಕಾರು ಚಾಲಕ ಕಲ್ಲಡ್ಕ ನಿವಾಸಿ ಸುಲೈಮಾನ್ (93) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಸ್ಥಳೀಯ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕಳೆದ 70 ವರ್ಷಗಳಿಂದ ಕಾರು ಚಾಲಕರಾಗಿ ದುಡಿದ ಶ್ರಮಜೀವಿಯಾಗಿದ್ದು, ಸ್ವಾತಂತ್ರ‍್ಯಾನ0ತರ ಪ್ರಥಮವಾಗಿ ವಾಹನ ಚಾಲನ ಪರವಾನಿಗೆ ಆರಂಭವಾದ 1955 ನೇ ಇಸವಿಯಲ್ಲಿ ಚಾಲನಾ ಪರವಾನಿಗೆ ಪಡೆದಿದ್ದರು. ಅಂದಿನ ಆ ದಿನಗಳಲ್ಲಿ ಕಲ್ಲಡ್ಕದಿಂದ ಮುಂಬಯಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಹೆಗ್ಗಳಿಕೆ ಇವರದ್ದು. ಕುರಾನ್ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ ಇವರು ಅರೆಬಿಕ್ ಮತ್ತು ಮಲಯಾಳಂ ಬಾಷಾ ಜ್ಞಾನವನ್ನು ಹೊಂದಿದ್ದರು. 70 ವರ್ಷಗಳ ತಮ್ಮ ಚಾಲಕ ಸೇವಾವಧಿಯಲ್ಲಿ ಕಲ್ಲಡ್ಕ ಮ್ಯೂಸಿಯಂ ನ ಕೆ.ಎಸ್.ಯಾಸಿರ್ ಸಹಿತ ನೂರಾರು ಮಂದಿಗೆ ವಾಹನ ಚಲಾಯಿಸಲು ಕಲಿಸಿಕೊಟ್ಟವರು. ಕಲ್ಲಡ್ಕದ ಹೆಸರಾಂತ ಕಾಂಗ್ರೆಸ್ ಮುಖಂಡ ದಿ. ಇಸ್ಮಾಯಿಲ್ ಕಲ್ಲಡ್ಕ, ಹೆಸರಾಂತ ಉದ್ಯಮಿ ದಿ.ಸೇಸಾರಿ ಶಾಫಿ ಹಾಜಿ (ಸೇಸರಾಜ್) ಅವರ ಸಹೋದರರಾಗಿರುವ ಸುಲೈಮಾನ್ ಅವರು ಪತ್ನಿ, ಓರ್ವ ಪುತ್ರ, ನಾಲ್ವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲೆ ಯತ್ನ ಪ್ರಕರಣದ ಇಬ್ಬರು ಆರೋಪಿಗಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…!

ಉಡುಪಿ: ಉಡುಪಿಯಲ್ಲಿ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್ ಕಳವು: ಮುದ್ದಾಡಿ ಹಾಡಿಯಲ್ಲಿ ಪತ್ತೆ…!

ಮಂಗಳೂರು: ವಿದ್ಯಾರ್ಥಿಗಳ ಕೊರತೆಯಿಂದ ಮಂಗಳೂರು ವಿವಿಯ 16 ಪಿಜಿ ಕೋರ್ಸ್‌ಗಳು ಸ್ಥಗಿತ.

ಮಂಗಳೂರು: ಮಂಗಳೂರು-ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಹೊಸ ಆಶಾಕಿರಣ

ಮಂಗಳೂರು: ನ್ಯಾಯಾಧೀಶರ ಕಾರಿಗೆ ಗೂಡ್ಸ್ ಆಟೋ ಡಿಕ್ಕಿ: ಗಾಯಗೊಂಡಿದ್ದ ಚಾಲಕ ಸಾವು

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ, ಪ್ರವಾಹ-ಭೂಕುಸಿತಕ್ಕೆ 27 ಮಂದಿ ಬಲಿ; ನಾಲ್ವರು ನಾಪತ್ತೆ…!

ಕಾರ್ಕಳ: ಸುವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮುಳುಗಿ ಮೃತ್ಯು…!

ಬಂಟ್ವಾಳ: ಮಾಣಿ ಭಾಗದಲ್ಲಿ ಮಾರ್ಗಸೂಚಿ ಫಲಕಗಳ ಕೊರತೆ: ವಾಹನ ಸವಾರರಿಗೆ ಗೊಂದಲ, ಅಪಘಾತದ ಆತಂಕ

ಬಂಟ್ವಾಳ: ಕಲ್ಲಡ್ಕ ಫ್ಲೈಓವರ್‌ನಲ್ಲಿ ದನ ಸಾಗಿಸುತ್ತಿದ್ದ ಲಾರಿ ತಡೆ: ಪೊಲೀಸರಿಂದ ವಾಹನ ವಶಕ್ಕೆ

error: Content is protected !!