ಮಂಗಳೂರು ನಗರದ ಅತ್ಯಂತ ವಾಹನ ದಟ್ಟನೆಯ ಪ್ರದೇಶವಾದ ನಂತೂರು ಜಂಕ್ಷನ್‌ನಲ್ಲಿ ವಾಹನಗಳಿಗೆ ಫ್ರೀ ಲೆಫ್ಟ್ ಅಂದರೆ ಎಡಭಾಗದಲ್ಲಿ ತಿರುವು ತೆಗೆದುಕೊಂಡು ಚಲಿಸುವ ವಾಹನಗಳಿಗೆ ಮುಕ್ತ ಎಡಭಾಗವನ್ನು ಕಲ್ಪಿಸಲಾಗಿದೆ. ಈ ಸಂಬ0ಧಿತ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೂರ್ಣಗೊಳಿಸಿದೆ.
ನಂತೂರು ಜಂಕ್ಷನ್ನಿನ ಮೂರು ದಿಕ್ಕುಗಳಲ್ಲಿ ಎಡಭಾಗವನ್ನು ಸಿಗ್ನಲ್‌ನಿಂದ ಮುಕ್ತಗೊಳಿಸಿ ವಾಹನಗಳ ಮುಕ್ತ ಚಲನೆಗೆ ಅವಕಾಶ ಮಾಡಿಕೊಡಲಾಗಿದೆ. ನಂತೂರು ಜಂಕ್ಷನ್ನಿನಲ್ಲಿ ಕದ್ರಿ ಮಲ್ಲಿಕಟ್ಟೆಯಿಂದ ಸುರತ್ಕಲ್ ಗೆ ಸಾಗುವ ರಸ್ತೆಯ ಎಡ ಭಾಗದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಈ ಮೊದಲೇ ಅವಕಾಶ ಒದಗಿಸಲಾಗಿತ್ತು. ಕೊಚ್ಚಿ-ಪನ್ವೇಲ್ ರಾಷ್ಟ್ರೀಯ ಹೆದ್ದಾರಿ 66,ಮತ್ತು ಮಂಗಳೂರು-ಬೆ0ಗಳೂರು ರಾಷ್ಟ್ರೀಯ 75 ಹಾಗು ಮಂಗಳೂರು-ಮಡಿಕೇರಿ ಟ್ರಂಕ್ ರಸ್ತೆ ಅಂದರೆ ಕದ್ರಿಯಿಂದ ಬರುವ ರಸ್ತೆ ಸೇರುವ ನಂತೂರು ಜಂಕ್ಷನ್ ನಲ್ಲಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ತೀವ್ರವಾದ ವಾಹನ ದಟ್ಟಣೆ ಇರುತ್ತದೆ. ಇಲ್ಲಿ ರಸ್ತೆಯನ್ನು ಅಗಲಗೊಳಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಆದರೆ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದುದರಿಂದ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು. ಈಗ ಅವು ಪರಿಹಾರವಾಗಿವೆ.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ವೃತ್ತದಲ್ಲಿ ವಾಹನ ಸಂಚಾರವನ್ನು ಸುಗಮಗೊಳಿಸಲು ಎಡಭಾಗದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಕೋರಿದ್ದರು. ಅಲ್ಲಿದ್ದ ಹೊಂಡಗಳನ್ನು, ಬಿರುಕುಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ತಡೆಯಾಗುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದ್ದರು. ವೃತ್ತದಲಿದ್ದ ಹೊಂಡಗಳಿ0ದ ಇಲ್ಲಿ ವಾಹನ ಸಂಚಾರ ನಿಧಾನಗೊಳ್ಳುತ್ತಿತ್ತು. ಒಂದು ವಾರದಿಂದ ಮಳೆ ಬಿಡುವು ನೀಡಿರುವುದರಿಂದ ಕಾಮಗಾರಿಯನ್ನು ಕೈಗೆತ್ತಿಕೊಂಡ ಹೆದ್ದಾರಿ ಪ್ರಾಧಿಕಾರ ಶನಿವಾರದಂದು ಎಡ ಮುಕ್ತ ಸಂಚಾರಕ್ಕೆ ಅವಶ್ಯವಾದ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಇದರಿಂದಾಗಿ ಸುರತ್ಕಲ್ ಭಾಗದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುವ ವಾಹನಗಳು ನಂತೂರು ಜಂಕ್ಷನ್ನಿನಲ್ಲಿ ಸುಲಭವಾಗಿ ಎಡಕ್ಕೆ ತಿರುವು ತೆಗೆದುಕೊಂಡು ಬಿ.ಸಿ.ರಸ್ತೆ, ಕಡೆಗೆ ಸಂಚರಿಸಬಹುದಾಗಿದೆ. ಬಿ.ಸಿ.ರಸ್ತೆ ಕಡೆಯಿಂದ ಬರುವ ವಾಹನಗಳು ಈ ಜಂಕ್ಷನ್ನಿನಲ್ಲಿ ಎಡಕ್ಕೆ ತಿರುವು ಪಡೆದುಕೊಂಡು ಪಂಪ್ ವೆಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗಬಹುದಾಗಿದೆ. ಮತ್ತು ಪಂಪ್ ವೆಲ್ ಕಡೆಯಿಂದ ಬರುವ ವಾಹನಗಳು ಕದ್ರಿ ಮಲ್ಲಿಕಟ್ಟೆಗೆ ಮುಕ್ತವಾಗಿ ಸಾಗಬಹುದಾಗಿದೆ. ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆಯ ಮೂಲಕ ಈ ರಸ್ತೆಗಳಿಗೆ ಬಿಟುಮನ್ ಅಂದರೆ ಡಾಮಾರ್ ಮೇಲ್ಪದರವನ್ನು ಇಲಾಖೆ ಒದಗಿಸಿದೆ. ನಂತೂರು ಜಂಕ್ಷನ್ನಿನ ಎಲ್ಲಾ ನಾಲ್ಕು ಕಡೆಗಳಲ್ಲಿ ಮುಕ್ತ ಎಡ ಸಂಚಾರವನ್ನು ಒದಗಿಸಿರುವುದರಿಂದ ನಿರ್ದಿಷ್ಟವಾಗಿ ಬೆಳಿಗ್ಗೆ ಮತ್ತು ಸಂಜೆ ಈ ವೃತ್ತ ಎದುರಿಸುತ್ತಿದ್ದ ವಾಹನ ದಟ್ಟಣೆ ಮತ್ತು ಸಂಚಾರ ಅವ್ಯವಸ್ಥೆಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…