ಗೆಲ್ಲುವ ಛಲವೊಂದಿದ್ದಾಗ ಸಾಧಿಸಿ ಸೈ ಎನಿಸಿಕೊಳ್ಳಲು ಯಾವ ವಯಸ್ಸಿನ ಮಿತಿಯು ಇರುವುದಿಲ್ಲ ಎಂಬ ಮಾತಿಗೆ ನಿದರ್ಶನವೆಂಬ0ತೆ ಇಲ್ಲೊಬ್ಬಳು ನಾಲ್ಕನೇ ತರಗತಿಯ ಬಾಲಕಿ ಯೋಗ ಮತ್ತು ಯಕ್ಷಗಾನ ರಂಗದಲ್ಲಿ ಅದ್ಭುತ ಸಾಧನೆಗೈದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಮಂಗಳೂರಿನ ಆಕಾಶಭವನ ನಿವಾಸಿಗಳಾದ ಶ್ರೀಮತಿ ಭಾರತಿ ಮತ್ತು ಶ್ರೀನಿವಾಸ್ ಪೂಜಾರಿ ದಂಪತಿಗಳ ಪುತ್ರಿಯಾದ ಬೇಬಿ ಮಾನ್ಸಿ ಎಸ್. ಪೂಜಾರಿ ಇವರು ಕೆನರಾ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದು, ತನ್ನ 6ನೇ ವಯಸ್ಸಿನಲ್ಲಿಯೇ ಯೋಗದಲ್ಲಿ ಆಸಕ್ತಿ ಹೊಂದಿ ಶ್ರೀ ಕುಶಾಲಪ್ಪ ಗೌಡ ಇವರ “ಆವಿಷ್ಕಾರ್ ಯೋಗ ಕೇಂದ್ರದಲ್ಲಿ ಶ್ರೀ ಕಿಶನ್ ಇವರಿಂದ ತರಬೇತಿ ಪಡೆದು, ಕಠಿಣ ಯೋಗಾಸನ ಅಭ್ಯಾಸವನ್ನು ‘ಶ್ರೀ ರಂಗಪ್ಪ ಇವರು ನಡೆಸುತ್ತಿರುವ ‘ತಪಸ್ವಿ ಯೋಗ ಕೇಂದ್ರ’ದಲ್ಲಿ ಶ್ರೀ ಪ್ರತ್ಯಕ್ಷ ಇವರ ಬಳಿ ಕಲಿಯುತ್ತಿದ್ದಾರೆ. ತನ್ನ 6ನೇ ವಯಸ್ಸಿನಲ್ಲಿ ತಾ. 16-6-2021ರಂದು ವಿ4 ಚಾನೆಲ್‌ನಲ್ಲಿ ‘ಮಕ್ಕಳಿಗಾಗಿ ಯೋಗ’ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ.
ತಾ. 8-5-2022ರಂದು ಆಲೋಶಿಯಸ್ ಕಾಲೇಜು, ಮಂಗಳೂರು ಹಾಗೂ ಪಾಂಡಿರಾಜ ಬಲ್ಲಾಳ್ ಮೆಡಿಕಲ್ ಕಾಲೇಜು, ಉಳ್ಳಾಲ ಇಲ್ಲಿ ಕುಶಾಲಪ್ಪ ಗೌಡರ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಈ ಮೂಲಕ ಯೋಗದ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ಯೋಗಾಸನ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಅಲ್ಲಿಯೂ ಎಲ್ಲರಿಂದಲೂ ಪ್ರಸಂಶೆಗೆ ಪಾತ್ರರಾಗಿ ಧನರೂಪದ ಬಹುಮಾನ ಹಾಗೂ ಮೊಮೆಂಟೋ ಪಡೆದಿರುತ್ತಾರೆ. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ತಾ. 29-07-2022ರಲ್ಲಿ ಶಿವಜ್ಯೋತಿ ಯೋಗ ಕೇಂದ್ರ, ಬೆಂಗಳೂರು ಹಾಗೂ ಪಿ.ಎನ್.ಆರ್. ಯೋಗ ಕೇಂದ್ರದವರು ನಡೆಸಿದ ನ್ಯಾಶನಲ್ ಲೆವೆಲ್ ಯೋಗ ಚಾಂಪಿಯನ್‌ಶಿಪ್-2022ರಲ್ಲಿ ದ್ವಿತೀಯ ಬಹುಮಾನ, ಹಾಗೂ ತಾ. 04-08-2023ರಲ್ಲಿ ಬಿ.ಕೆ.ಎಸ್. ಅಯ್ಯಂಗಾರ್, ಬೆಂಗಳೂರು ಇವರ ಸ್ಮರಣಾರ್ಥ ನ್ಯಾಶನಲ್ ಲೆವೆಲ್ ಓಪನ್ ಯೋಗ ಚಾಂಪಿಯನ್ ಶಿಪ್ ನಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ. ತಪಸ್ವಿ ಯೋಗ ಕೇಂದ್ರದವರು ನಡೆಸಿದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಯೋಗಾಸನ ಮಾತ್ರವಲ್ಲದೇ ಯಕ್ಷಗಾನ ರಂಗದಲ್ಲೂ ಮಿಂಚುತ್ತಿದ್ದು, ಪ್ರಸ್ತುತ ಕಲಾ ಸಾರಥಿ ಕುಮಾರ್ ಮಾಲೆಮಾರ್ ಸಾರಥ್ಯದ ಸಂಜೀವ ಕಜೆಪದವು ಇವರಲ್ಲಿ ಯಕ್ಷಗಾನವನ್ನು ಕಲಿಯುತ್ತಿದ್ದು, “ಅಂಬುರುಹ ಯಕ್ಷ ಕಲಾ ಕೇಂದ್ರ, ಮಾಲೆಮಾರ್” ಇದರ ವಿದ್ಯಾರ್ಥಿನಿಯಾಗಿರುತ್ತಾರೆ. ಗೆಜ್ಜೆಪೂಜೆಯೊಂದಿಗೆ ರಂಗಪ್ರವೇಶ ಮಾಡಿ “ಕದಂಬ ಕೌಶಿಕೆ”, “ಶಿವಭಕ್ತ ಸಿರಿಯಾಲ”, “ಶ್ರೀ ದೇವಿ ಲಲಿತಾಮೃತ”, ‘ಮಲೆತ ಬೊಲ್ಲು’ “ಶ್ರೀ ರಾಮ ದರ್ಶನಂ”, “ಮಹಿಷ ವಧೆ” ಮುಂತಾದ ಯಕ್ಷಗಾನಗಳಲ್ಲಿ ಪಾತ್ರವನ್ನು ನಿರ್ವಹಿಸಿರುತ್ತಾರೆ. ಪ್ರಸ್ತುತ ವಿದುಷಿ ಶ್ರೀಮತಿ ಗೌರಿ ಶೈಲೇಶ್ ಇವರ ಬಳಿ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ವಿವಿಧ ವಿಧಗಳಲ್ಲಿ ಬ್ಯಾಂಡ್ ಬಾರಿಸುವುದು ಇವಳಿಗೆ ತುಂಬಾ ಇಷ್ಟ, ವಿ4 ಟಿವಿ ಚಾನೆಲ್, ಅಭಿಮತ ಟಿವಿ ಚಾನೆಲ್‌ನಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ವತಿಯಿಂದ ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾಳೆ, ಅಷ್ಟೇ ಅಲ್ಲದೆ ಶಾಲಾ ಚಟುವಟಿಕೆ, ಆಟ-ಪಾಠ, ನೃತ್ಯದ ಜೊತೆಗೆ ಛದ್ಮವೇಶ, ಕೃಷ್ಣವೇಷ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳು ಹಾಗೂ ಹಲವಾರು ಕಡೆಗಳಲ್ಲಿ ನೆನಪಿನ ಕಾಣಿಕೆಗಳನ್ನು ಹಾಗೂ ಧನರೂಪದ ಬಹುಮಾನವನ್ನು ಪಡೆದಿರುತ್ತಾರೆ. ಕಾರ್ಕಳದಲ್ಲಿ ನಡೆಸಿದ ಶಾರದಾ ಫೋಟೋ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕ್ಯಾಶ್, ಹಾಗೂ ಚಿನ್ನದ ಪದಕ ಪಡೆದಿರುತ್ತಾರೆ. ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಇವರ ವತಿಯಿಂದ ರಾಷ್ಟ್ರೀಯ ಕಲಾ ಪ್ರತಿಬೋತ್ಸವದಲ್ಲಿ “ಕರ್ನಾಟಕ ಬಾಲಕಲಾ ಪ್ರತಿಭಾ ಪುರಸ್ಕಾರ”ವನ್ನು ಪಡೆದಿರುತ್ತಾರೆ. ಸಂಗೀತ ಕಲಿಯುವುದು, ಡ್ಯಾನ್ಸ್ ಮಾಡುವುದು, ಡ್ರಾಯಿಂಗ್, ಅಭಿನಯ ಮಾಡುವುದು, ಕುಣಿತ ಭಜನೆ ಮುಂತಾದವುಗಳು ಇವರ ಹವ್ಯಾಸಗಳು. ಎಲ್ಲರೊಂದಿಗೂ ಬೆರೆತು. ಎಲ್ಲರನ್ನೂ ನಗಿಸುತ್ತಾ, ಹೋದಲ್ಲೆಲ್ಲಾ ತನ್ನ ತುಂಟಾಟದಿಂದ ಗಮನ ಸೆಳೆಯುವ ಈ ಪುಟ್ಟ ಪೋರಿ ಎಲ್ಲರ ಅಚ್ಚುಮೆಚ್ಚಿನ ಉತ್ಸಾಹದ ಚಿಲುಮೆಯಾಗಿರುತ್ತಾಳೆ.
ಪ್ರಸ್ತುತ ಶ್ರೀಮತಿ ಪದ್ಮಶ್ರೀ ಭಟ್ ಇವರ ಸಾರಥ್ಯದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದಲ್ಲಿ ಹಲವು ಬಾರಿ ವಿನ್ನರ್ ಆಗಿ ಆಯ್ಕೆಯಾಗಿರುತ್ತಾಳೆ. ಶ್ರೀಮತಿ ಪದ್ಮಶ್ರೀ ಭಟ್ ಮಕ್ಕಳಿಗೆ ತುಂಬಾ ಪ್ರೋತ್ಸಾಹ ನೀಡಿ ಮಕ್ಕಳಕಲೆಯನ್ನು ಹೊರತರುವಲ್ಲಿ ತುಂಬಾ ಶ್ರಮಿಸುತ್ತಿದ್ದಾರೆ. ಅಶಕ್ತರಿಗೆ ಸಹಾಯ ಹಸ್ತ ನೀಡುತ್ತಾ, ತಂಡವನ್ನು ತುಂಬಾ ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ಸಮಾನ ರೀತಿಯ ಅವಕಾಶ ಕೊಟ್ಟು ಮಕ್ಕಳ ವೀಡಿಯೋ ಹಾಕಿದಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ. ಮಾನ್ವಿ ಎಸ್. ಪೂಜಾರಿಯು ಈ ತಂಡದ ಸಕ್ರಿಯ ಬಾಲ ಕಲಾವಿದೆಯಾಗಿರುತ್ತಾಳೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…