ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ ಮೃತನಾದ ಪ್ರತಿಭಾನ್ವಿತ ಇಂಜಿನಿಯರಿ0ಗ್ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿಯ ಕುಟುಂಬ ದುಃಖತಪ್ತವಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಈ ಕುಟುಂಬ ಮೂಲತಃ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಸದ್ಯ ವಾಸ್ತವ್ಯ ಹೂಡಿದ್ದಾರೆ.
ಸಂತ್ರಸ್ತೆಯ ಮನೆಗೆ ಭೇಟಿ ನೀಡಿರುವ ಜಿಲ್ಲಾಡಳಿತ ಸರಕಾರದ ವತಿಯಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಕಾಲ್ತುಳಿತ ಪ್ರಕರಣದಲ್ಲಿ ಘೋಷಿತ ಪರಿಹಾರ ನೀಡಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ. ಈಗಾಗಲೇ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ನೀಡಲಾಗುತ್ತಿದೆ. ಮೃತ 11 ಮಂದಿಯ ಪೈಕಿ ಚಿನ್ಮಯಿ ಶೆಟ್ಟಿ ಪ್ರಥಮ ವರ್ಷದ ಬಿಇ ವಿದ್ಯಾರ್ಥಿನಿಯಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಚಿನ್ಮಯಿ ಕುಟುಂಬ ಕರಾವಳಿ ಮೂಲವನ್ನು ಹೊಂದಿದೆ. ಸದ್ಯ ಚಿನ್ಮಯಿ ಶೆಟ್ಟಿ ಅವರ ತಾಯಿ ಪೂಜಾ ಅವರ ಮೂಲ ಮನೆಯಲ್ಲಿ ಕುಟುಂಬ ನೆಲೆಸಿದೆ. ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿರುವ ಸಂತ್ರಸ್ತ ಕುಟುಂಬವನ್ನು ಉಡುಪಿ ಜಿಲ್ಲಾಡಳಿತ ಭೇಟಿ ಮಾಡಿದೆ. ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ನೇತೃತ್ವದಲ್ಲಿ ತೆರಳಿ, ಸರ್ಕಾರ ಘೋಷಿಸಿರುವ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ಹಸ್ತಾಂತರಿಸಲಾಗಿದೆ.
ಆಘಾತದಲ್ಲಿರುವ ಕುಟುಂಬಕ್ಕೆ ಜಿಲ್ಲಾಧಿಕಾರಿಗಳು ಸಾಂತ್ವನ ಹೇಳಿದ್ದು, ಮುಂದೆಯೂ ನಿಮ್ಮ ಕುಟುಂಬದ ಜೊತೆ ಸರಕಾರ ಇರಲಿದೆ ಎಂದು ಭರವಸೆ ನೀಡಿದ್ದಾರೆ. ಚಿನ್ಮಯಿ ಶೆಟ್ಟಿ ಇಂಜಿನಿಯರಿ0ಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ. ಕರಾವಳಿ ಮೂಲದ ಈಕೆ ಸಹಜವಾಗಿಯೇ ಯಕ್ಷಗಾನದಲ್ಲಿ ವಿಶೇಷ ಅಭಿರುಚಿ ಹೊಂದಿದ್ದರು. ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದ ಈಕೆ, ಕ್ರಿಕೆಟ್ ನಲ್ಲಿ ವಿಶೇಷ ಆಸಕ್ತಿ ಇಲ್ಲವಾದರೂ, ಸ್ನೇಹಿತರ ಜೊತೆ ಸಂಭ್ರಮಾಚರಣೆ ನೋಡಲು ಹೋದಾಗ ದುರ್ಘಟನೆ ನಡೆದಿದೆ ಎಂದು ತಂದೆ ತಿಳಿಸಿದ್ದಾರೆ. ಘಟನೆಯ ಕುರಿತು ಮಾತನಾಡಿದ ತಂದೆ ಕರುಣಾಕರ ಶೆಟ್ಟಿ, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಮನವಿ ಮಾಡಿದ್ರು. ಪ್ರಕರಣದ ಗಂಭೀರ ತನಿಖೆ ಆಗಬೇಕು, ಸಿಬಿಐಗೆ ನೀಡಿದರೆ ಉತ್ತಮ ಮತ್ತು ಈ ಘಟನೆಗೆ ಸರ್ಕಾರವೇ ಜವಾಬ್ದಾರಿ, ನಾವು ಮಗಳನ್ನು ಕಳೆದುಕೊಂಡ ನೋವು ನಿರಂತರ ಎನ್ನುತ್ತಾ ತನ್ನ ಆಳಲನ್ನ ತೋಡಿಕೊಂಡಿದ್ದಾರೆ. ಸಂಭ್ರಮಾಚರಣೆಯ ಅಗತ್ಯವೇನಿತ್ತು ಅನ್ನೋದು ಚಿನ್ಮಯಿ ಕುಟುಂಬದ ಪ್ರಶ್ನೆಯಾಗಿದೆ. ಯುವ ಜನಾಂಗ ಇಂತಹ ಹುಚ್ಚಾಟಗಳಲ್ಲಿ ಭಾಗಿಯಾಗದೆ ಅಂತರ ಕಾಯ್ದುಕೊಳ್ಳಬೇಕು ಎಂದು ಸಂತ್ರಸ್ತ ಕುಟುಂಬ ಯುವ ಜನಾಂಗಕ್ಕೆ ಸಲಹೆ ನೀಡಿದೆ.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…
ಪುತ್ತೂರಿನ ಪ್ರಕರಣ ಹಾಗೂ ಕಾರ್ಕಳದ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆಗೆ ಸಂಬಂಧಿಸಿದ ವಿಷಯವಾಗಿ ಮಾನ್ಯ ಗ್ರಹಸಚಿವರಾದ ಶ್ರೀ ಜಿ ಪರಮೇಶ್ವರ್…