ಏರ್ ಇಂಡಿಯಾ ವಿಮಾನ ಪತನ ಅದೆಷ್ಟೋ ಕುಟುಂಬಗಳ ನಗುವನ್ನ ಕಸಿದುಕೊಂಡಿದೆ ಪ್ರಯಾಣಿಕರ ಮೇಲೆ ಬಿದ್ದ ಬೆಂಕಿ ತಮ್ಮವರನ್ನ ಕಳೆದುಕೊಂಡ ನೋವಿನ ಕಣ್ಣೀರಿಗೆ ಕಾರಣವಾಗಿದೆ. ಹೀಗೆ ಕಣ್ಣೀರಲ್ಲಿ ಮರುಗಿತ್ತಿರುವ ಜನರ ಪೈಕಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕುಟುಂಬ ಕೂಡ ಒಂದು.
ಲಂಡನ್‌ಗೆ ತೆರಳೋದಕ್ಕೆ ಅಂತ ಏರ್ ಇಂಡಿಯಾ ಫ್ಲೈಟ್? ಏರಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ದುರಂತ ಅಂತ್ಯ ಕಂಡಿದ್ದಾರೆ. ಲಂಡನ್‌ನಲ್ಲಿರುವ ಮಗಳ ಮನೆಯಲ್ಲಿದ್ದ ತಮ್ಮ ಪತ್ನಿಯನ್ನು ಕರೆತರಲು ವಿಜಯ್ ರೂಪಾನಿ ಏರ್ ಇಂಡಿಯಾ 171 ವಿಮಾನದಲ್ಲಿ ಲಂಡನ್‌ಗೆ ಹೊರಟ್ಟಿದ್ದರು.. ವಿಮಾನದೊಳಗೆ ಮಹಿಳೆಯೊಬ್ಬರು ಮಾಜಿ ಸಿಎಂ ವಿಜಯ್ ರೂಪಾನಿಯವರನ್ನು ನೋಡಿದ ಖುಷಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದಾರೆ.
ದುರಂತ ಅಂದ್ರೆ ಇದೇ ಅವರ ಕೊನೆಯ ಫೋಟೋ ಆಗಿದೆ. ವಿಜಯ್ ರೂಪಾನಿಯವರ ಸಾವು ಖಚಿತವಾಗ್ತಿದ್ದಂತೆ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿಯವರ ದುರ್ಮರಣಕ್ಕೆ ಬಿಜೆಪಿ ನಾಯಕರು ಸಂತಾಪವನ್ನು ಸೂಚಿಸಿದ್ದಾರೆ. ರೂಪಾನಿಯವರ ಕಿರಿಯ ಮಗ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ವಿಜಯ್ ರೂಪಾನಿ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು ಇದೀಗ ಅವರ ಕುಟುಂಬಕ್ಕೆ ತೀವ್ರ ನೋವನ್ನು ಉಂಟುಮಾಡಿದೆ.
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…