ಇತರೆ

ಮಿಷನ್ “ವಿಕಸಿತ್ ಭಾರತ್ 2047”

ಇತ್ತೀಚಿಗೆ ದೇಶದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿರುವ ಒಂದೇ ಒಂದೇ ಶಬ್ದ ಅದು ವಿಕಸಿತ ಭಾರತ. ಏನಿದು ಕೇಂದ್ರಸರಕಾರದ ಮಿಷನ್ ವಿಕಸಿತ ಭಾರತ??

ಭಾರತ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಂಡು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡು 100 ವರ್ಷ ಪೂರೈಸುವ ಹೊತ್ತಿಗೆ ಅಂದರೆ 2047 ರ ಹೊತ್ತಿಗೆ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿ ಮುಂದುವರೆಯುತ್ತಿರುವ ದೇಶಗಳ ಪಟ್ಟಿಯಿಂದ ಮುಂದುವರೆದ ದೇಶಗಳ ಪಟ್ಟಿಗೆ ಸೇರುವುದಾಗಿ ಪ್ರಧಾನಿ ಮೋದಿ ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಮಿಷನ್ ವಿಕಸಿತ್ ಭಾರತ್ 2047ರ ಅಡಿಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವಶ್ಯಕ ಸಂಪನ್ಮೂಲಗಳು ಮತ್ತು ಸಮಾನ ಅವಕಾಶಗಳನ್ನು ನೀಡುವುದರೊಂದಿಗೆ ಅವನ ಸಾಮರ್ಥ್ಯ ಹೆಚ್ಚಿಸಿ ನವ ಭಾರತ ನಿರ್ಮಾಣಕ್ಕೆ ಕೇಂದ್ರಸರಕಾರ ಈಗಾಗಲೇ ಮುನ್ನುಡಿ ಬರೆದಿದೆ.

ಪ್ರಮುಖ ಗುರಿಗಳು:
ಆರ್ಥಿಕ ಬೆಳವಣಿಗೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉತ್ತಮ ಆರೋಗ್ಯ ಸೇವೆ, ಹೊಸ ಆವಿಷ್ಕಾರಗಳು, ಉದ್ಯೋಗ ಸೃಷ್ಟಿ, ಪರಿಸರ ಸುಸ್ತಿರತೆ ಹೀಗೆ ಹತ್ತು ಹಲವಾರು ಗುರಿಗಳನ್ನು ಹೊಂದಿರುವ ಈ ಮಿಷನ್ ಭಾರತವನ್ನು ವಿಶ್ವದ ಟಾಪ್ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ಮಹತ್ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಮತ್ತು ಆರ್ಥಿಕ ಆರೋಗ್ಯ ವೃದ್ಧಿಸುವಲ್ಲಿ ಜಿಡಿಪಿ ಪ್ರಮಾಣ (ಒಟ್ಟು ದೇಶಿಯ ಉತ್ಪನ್ನ ಪ್ರಮಾಣ)ವು ಪ್ರಮುಖ ಪಾತ್ರ ವಹಿಸುತ್ತದೆ. ಸದ್ಯ ಭಾರತವು 4.1 ಟ್ರಿಲಿಯನ್ ಜಿಡಿಪಿ ಪ್ರಮಾಣದೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ. ಈ ಪ್ರಮಾಣವನ್ನು 5 ಟ್ರಿಲಿಯನ್ನಷ್ಟು ವೃದ್ಧಿಸಿ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಒತ್ತು ನೀಡುವ ಗುರಿಯನ್ನು ಈ ಮಿಷನ್ ಹೊಂದಿದೆ.
ವಿಶ್ವದ ದೊಡ್ಡಣ್ಣ ಅಮೇರಿಕಾದಂತೆ ಆರ್ಥಿಕ, ರಾಜಕೀಯ ಹೀಗೆ ಎಲ್ಲಾ ರಂಗದಲ್ಲೂ ವಿಶ್ವಕ್ಕೆ ಮಾದರಿಯೆನಿಸಿ, “ವಿಶ್ವ ಗುರು” ಎಂಬ ಕಿರೀಟವನ್ನು ಭಾರತಕ್ಕೆ ತೊಡಿಸುವುದು “ವಿಕಸಿತ್ ಭಾರತ್ 2047” ರ ಮತ್ತೊಂದು ಸಂಕಲ್ಪ.
ದೇಶಾಭಿವೃದ್ಧಿಯ ಮತ್ತೊಂದು ಪ್ರಮುಖ ಅಂಶವೆ0ದರೆ ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆ. ಹೊಸ ತಂತ್ರಜ್ಞಾನ ಅಳವಡಿಕೆ, ವಿಶೇಷ ಯುದ್ಧ ವಿಮಾನ, ನೌಕೆಗಳ ಖರೀದಿ, ಯುದ್ಧ ಶಸ್ತ್ರಗಳ ತಯಾರಿ ಹೀಗೆ ಇವೆಲ್ಲದರ ಜೊತೆಗೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಭದ್ರಗೊಳಿಸಿ ಸದೃಢ ಭಾರತದ ನಿರ್ಮಾಣ ಮಾಡುವಲ್ಲಿ ಈ ಮಿಷನ್ ಶ್ರಮಿಸಲಿದೆ.
ಹೊಸ ತಂತ್ರಜ್ಞಾನಗಳು ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗಳು ವಿಶ್ವ ಮಟ್ಟದಲ್ಲಿ ಮನ್ನಣೆಗಳಿಸಲು ಇರುವ ಸರಳ ಮಾರ್ಗಗಳು. ಆದ್ದರಿಂದ ಹೊಸ ಆವಿಷ್ಕಾರ, ತಂತ್ರಜ್ಞಾನಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಉದ್ದೇಶವನ್ನೂ ಕೂಡ ಈ ಮಿಷನ್ ಹೊಂದಿದೆ. ಹೀಗೆ ಸಂಪೂರ್ಣ ವಿಕಾಸಗೊಂಡ ಭಾರತದ ನಿರ್ಮಾಣಕ್ಕೆ ಬೇಕಾದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯೇ ಈ ಮಿಷನ್ ನ ಪ್ರಮುಖ ಗುರಿಯಾಗಿದೆ..

ಸವಾಲುಗಳು :
ಇಲ್ಲಿಂದ ಇನ್ನು ಮುಂದಿನ ಕೇವಲ 23 ವರ್ಷಗಳಲ್ಲಿ ವಿಕಸಿತ ಭಾರತದ ನಿರ್ಮಾಣ ಅಂದುಕೊ0ಡಷ್ಟು ಸುಲಭವಲ್ಲ ಮತ್ತು ಅದು ಹತ್ತು ಹಲವಾರು ಸವಾಲುಗಳನ್ನು ಕೇಂದ್ರ ಸರಕಾರದ ಮುಂದೆ ಬಿಚ್ಚಿಡುತ್ತದೆ. ಶೋಚನೀಯ ಸಂಗತಿಯೆ0ದರೆ ಜಗತ್ತಿಗೆ ವಿಶ್ವ ಗುರುವಾಗಲು ಹೊರಟಿರುವ ಭಾರತದಂತಹ ದೇಶದಲ್ಲಿ ಇಂದಿಗೂ ಒಂದು ಕೋಟಿಗೂ ಅಧಿಕ ಜನ ಕೊಳೆಗೇರಿ (ಸ್ಲಂ) ಪ್ರದೇಶಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ನೆರವಿನ ನೆರಳಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಳೆಗೇರಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಕೇಂದ್ರ ಸರಕಾರದ ಮುಂದಿರುವ ಕಠಿಣ ಮತ್ತು ಪ್ರಮುಖ ಸವಾಲು.. ಅಸ್ಪೋಟಕ ಬೆಳವಣಿಗೆಯನ್ನು ಕಾಣುತ್ತಿರುವ ಭಾರತದ ಜನಸಂಖ್ಯೆ ಈ ಮಿಷನ್ ಗಿರುವ ಮತ್ತೊಂದು ಸವಾಲು. 2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತ ಇದೀಗ ಚೀನಾವನ್ನೂ ಮೀರಿಸಿ ಜನಸಂಖ್ಯೆಯಲ್ಲಿ ಬೆಳೆಯುತ್ತಿರುವ ಕಾರಣ ದೇಶದ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆಯಿದೆ. ನಿರುದ್ಯೋಗ ಭಾರತದ ಪೃಮುಖ ನೂನ್ಯತೆಗಳಲ್ಲೊಂದು. ಈ ಮಿಷನ್ “ವಿಕಸಿತ್ ಭಾರತ್ 2047” ರಡಿಯಲ್ಲಿ ದೇಶದ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು ಕೇಂದ್ರಸರಕಾರದ ಮುಂದಿರುವ ಮತ್ತೊಂದು ಸವಾಲು. ಶಿಕ್ಷಣ ಕ್ಷೇತ್ರಕ್ಕೆ ಅತೀ ಹೆಚ್ಚು ಪ್ರೋತ್ಸಾಹ ನೀಡಿದಂತೆ ದೇಶದಲ್ಲಿ ಎಲ್ಲರೂ ಅಕ್ಷರಸ್ಥರಾಗುತ್ತಾರೆ ಆಗ ಅವರೆಲ್ಲರಿಗೂ ಉದ್ಯೋಗ ಸೃಷ್ಟಿಸುವುದು ಕಷ್ಟಸಾಧ್ಯ. ಹೀಗೆ ಎಲ್ಲಾ ಸಮಸ್ಯೆಗಳಿಗೆ ಪರ್ಯಾಯ ಮಾರ್ಗವನ್ನು ರೂಪಿಸಿ ಸಂಪೂರ್ಣ ವಿಕಸಿತ ಭಾರತ ನಿರ್ಮಾಣದಲ್ಲಿ ಕೇಂದ್ರಸರಕಾರ ಯಾವ ರೀತಿಯ ನಿಲುವುಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏನೇ ಇರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಅಭಿವೃದ್ಧಿ ಹೊಂದಿ ವಿಶ್ವಕ್ಕೆ ಮಾದರಿಯಾಗಲಿ. “ಮಿಷನ್ ವಿಕಸಿತ್ ಭಾರತ್ 2047” ಸಂಪನ್ನಗೊ0ಡು ಭಾರತವು ವಿಶ್ವಕ್ಕೆ ಮಾದರಿಯಾಗಲಿ. ಕೇವಲ ಭಾರತ ಆದಷ್ಟು ಬೇಗ ವಿಶ್ವ ಗುರು ಭಾರತವಾಗಲಿ ಎಂಬುದೇ ನಮ್ಮೆಲ್ಲರ ಆಶಯ.

ಚೇತನ್ ಕಾಶಿಪಟ್ನ

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…

15 hours ago

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…

15 hours ago

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…

15 hours ago

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…

15 hours ago

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…

15 hours ago

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…

15 hours ago