ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ ಐದನೇ ರ‍್ಯಾಂಕ್ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದ ನಮ್ಮ ಹುಣಸೂರಿನ ಕುವರ ಎಸ್ ಶ್ರೇಯಸ್ ರನ್ನು ಸತ್ಯಪ್ಪ ಹಾಗೂ ಗೌರಿಶಂಕರ್ ರವರ ನೇತೃತ್ವದಲ್ಲಿ ಇಂದು ಮಧು ಗ್ರೂಪ್ಸ್ ಹೂಟಗಳ್ಳಿ ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸತ್ಯಪ್ಪ ರವರು ಮಾತನಾಡಿ ಕೇಂದ್ರ ಲೋಕಸೇವಾ ಯುಪಿಎಸ್ ಸಿ ನಡೆಸುವ ಕೇಂದ್ರೀಯ ಪೊಲೀಸ್ ಶಶಸ್ತ್ರ ಪಡೆ ಪರೀಕ್ಷೆ 2024ರಲ್ಲಿ ಸಿಎಪಿಎಫ್ ಎಸ್ ಶ್ರೇಯಸ್ ದೇಶಕ್ಕೆ 5ನೇ ರ‍್ಯಾಂಕ್ ಪಡೆದಿದ್ದು ಕರ್ನಾಟಕ ರಾಜ್ಯಕ್ಕೆ ಮೊದಲನೇ ರ‍್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದು ಇವರು ನಮ್ಮ ಹುಣಸೂರು ತಾಲೂಕಿನವರಾಗಿದ್ದು ಕಸಬಾ ಹೋಬಳಿ ಮರದೂರು ಗ್ರಾಮದ ಎಚ್‌ಎಸ್ ಸಿದ್ದರಾಮೇ ಗೌಡ ಹಾಗೂ ಸುಜಾತಾ ದಂಪತಿಗಳ ಪುತ್ರರಾಗಿದ್ದಾರೆ. ಈ ಹುಡುಗನ ತಂದೆ ಎಚ್‌ಎಸ್ ಸಿದ್ದರಾಮೇಗೌಡ ರವರು, ಇವರು ರೈತ ಕುಟುಂಬಕ್ಕೆ ಸೇರಿದವರಾಗಿರುತ್ತಾರೆ. ತಾಲೂಕಿಗೆ ಕೀರ್ತಿ ತಂದ ಎಸ್ ಶ್ರೇಯಸ್ ರವರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ತಮ್ಮ ಓದಿನೊಂದಿಗೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತಮ್ಮ ತಂದೆ ತಾಯಿಗಳಿಗೆ ಹೆಮ್ಮೆ ತರುವುದಲ್ಲದೆ ತಮ್ಮ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬಹುದು ಎಂದು ಉತ್ತಮ ಭವಿಷ್ಯದ ನಿರೀಕ್ಷೆಯಲ್ಲಿರುವ ವಿದ್ಯಾವಂತ ಯುವಕ ಯುವತಿಯರಿಗೆ ಸಲಹೆ ನೀಡಿದ್ದಾರೆ. ಗೌರಿಶಂಕರ್ (ಮಧು ಬಿಳಿಕೆರೆ) ಅವರು ಮಾತನಾಡಿ ಗ್ರಾಮೀಣ ಪ್ರದೇಶದ ರೈತರ ಮಗ ಯುಪಿಎಸ್ಸಿಯಲ್ಲಿ ರ‍್ಯಾಂಕ್ ಬಂದಿರುವುದು ಒಂದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಇವರ ಆದರ್ಶದಲ್ಲಿ ಮುಂದುವರಿಯಬೇಕೆ0ದು ಹೇಳಿದರು. ಈ ಸಂದರ್ಭದಲ್ಲಿ ಲೋಕೇಶ್ ಅಸಿಸ್ಟೆಂಟ್ ಡಿಫೆನ್ಸ್ ಎಸ್ಟೇಟ್ ಆಫೀಸರ್, ಲೋಕೇಶ್ ಉದ್ಯಮಿಗಳು, ಮೋಹನ್ ಮಾಜಿ ಸೈನಿಕರು, ಶಿವಶಂಕರ್ (ಮನು), ಶಿವರಾಜೆ ಗೌಡ ನಿವೃತ್ತ ಡೆಪ್ಯುಟಿ ತಹಸಿಲ್ದಾರ್, ವಿಷ ಕಂಠೇಗೌಡ, ಮಂಜುನಾಥ ಬ್ರಿಕ್ಸ್ ಮಾಲೀಕರು ಮುಂತಾದವರು ಹಾಜರಿದ್ದರು.
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…
ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಅಯ್ಯಪ್ಪ ಮಂದಿರ ಮೊಡಂಕಾಪ್, 2025 - 26 ರ ಅಧ್ಯಕ್ಷರಾಗಿ ಸುನಿಲ್ ಎನ್…
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಇಶಾಕ್ ಹಾಗೂ ಅಬ್ದುಲ್ಲಾ ಯಾನೆ…