ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವಿನ ಅಪಘಾತದಲ್ಲಿ ಒರ್ವ ಮಹಿಳೆ ಮೃತಪಟ್ಟು, ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಜೂನ್ 25ರಂದು ಸಂಭವಿಸಿದೆ.
ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಹಾಗೂ ಮಡಿಕೇರಿಯಿಂದ ಮಡಿಕೇರಿ ಆಸುಪಾಸಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಸುಳ್ಯ ತಾಲೂಕಿನ ಅರಂತೋಡು ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರಿಗೆ ಚಿಕಿತ್ಸೆಗೆ ತೆರಳಿ ಮಡಿಕೇರಿಗೆ ಹಿಂತಿರುಗುತ್ತಿದ್ದ ಕುಶಾಲನಗರದ ಗುಡ್ಡೆ ಹೊಸೂರು ಭಾರತಿ (50) ಎಂಬವರು ತೀವ್ರ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತರಾಗಿದ್ದಾರೆ. ಚೈತ್ರ (22), ಮಾಯಿಲ್ಪ (43), ಶ್ರಾವ್ಯಶ್ರೀ (24), ಕುಮುದಿನಿ (24), ಯಮುನಾ (55), ವೇದಿಕಾ (10), ಯಕ್ಷಿತಾ (22), ಸಮದ್ (38), ಮುತ್ತಮ್ಮ (37), ಚಂದ್ರಾವತಿ (43), ತಿರುಮಲೇಶ್ವರ (49), ಸೋನಿ ಹೆಚ್.ಪಿ. (21), ಚಿದಾನಂದ (42), ನಯನ ವಿತೋಬಾರಾವ್ (25), ಸುಬ್ರಮಣಿ (51), ಕಾವೇರಮ್ಮ (35), ಅಭಿಲಾಷ್ (21), ಜಯಂತ್ (17), ಕರಣ್ (37) ಮೊದಲಾದವರು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವರು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇದರಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…