ಜನ ಮನದ ನಾಡಿ ಮಿಡಿತ

Advertisement

ಅರಂತೋಡು; ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅಪಘಾತ- ಒರ್ವ ಮಹಿಳೆ ಸಾವು; 20ಕ್ಕೂ ಅಧಿಕ ಮಂದಿಗೆ ಗಾಯ

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂತೋಡು ಬಳಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವಿನ ಅಪಘಾತದಲ್ಲಿ ಒರ್ವ ಮಹಿಳೆ ಮೃತಪಟ್ಟು, ಇಪ್ಪತ್ತಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಜೂನ್ 25ರಂದು  ಸಂಭವಿಸಿದೆ.

ಮಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಹಾಗೂ ಮಡಿಕೇರಿಯಿಂದ ಮಡಿಕೇರಿ ಆಸುಪಾಸಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಸುಳ್ಯ ತಾಲೂಕಿನ ಅರಂತೋಡು ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಮಂಗಳೂರಿಗೆ ಚಿಕಿತ್ಸೆಗೆ ತೆರಳಿ ಮಡಿಕೇರಿಗೆ ಹಿಂತಿರುಗುತ್ತಿದ್ದ ಕುಶಾಲನಗರದ ಗುಡ್ಡೆ ಹೊಸೂರು ಭಾರತಿ (50) ಎಂಬವರು ತೀವ್ರ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತರಾಗಿದ್ದಾರೆ. ಚೈತ್ರ (22), ಮಾಯಿಲ್ಪ (43), ಶ್ರಾವ್ಯಶ್ರೀ (24), ಕುಮುದಿನಿ (24), ಯಮುನಾ (55), ವೇದಿಕಾ (10), ಯಕ್ಷಿತಾ (22), ಸಮದ್ (38), ಮುತ್ತಮ್ಮ (37), ಚಂದ್ರಾವತಿ (43), ತಿರುಮಲೇಶ್ವರ (49), ಸೋನಿ ಹೆಚ್.ಪಿ. (21), ಚಿದಾನಂದ (42), ನಯನ ವಿತೋಬಾರಾವ್ (25), ಸುಬ್ರಮಣಿ (51), ಕಾವೇರಮ್ಮ (35), ಅಭಿಲಾಷ್ (21), ಜಯಂತ್ (17), ಕರಣ್ (37) ಮೊದಲಾದವರು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವರು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಇದರಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!